×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಈ ಸ್ಟ್ಯಾಂಪ್ ಕೇಂದ್ರ ಉದ್ಘಾಟನೆ

ಕಾಪು : ಕರ್ನಾಟಕ ರಾಜ್ಯದ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ( ರಿ ) ಬೆಂಗಳೂರು,ಇದರ ಕಾಪು ತಾಲೂಕು ಸಮಿತಿ ವತಿಯಿಂದ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಸಮಿತಿಯ ಸಹಕಾರದೊಂದಿಗೆ ,ಕಾಪು ಮೆಸ್ಕಾಂ ಬಳಿಯಲ್ಲಿರುವ ವಿದ್ಯುತ್ ಗುತ್ತಿಗೆದಾರರ ಸಂಘದ ಕಚೇರಿಯಲ್ಲಿ ನಿಕಟಪೂರ್ವ ಜಿಲ್ಲಾ ಅಧ್ಯಕ್ಷರಾದ ಶ್ರೀ ನಾಗರಾಜ ರಾವ್ ರವರಿಗೆ ತಾಲೂಕು ಅಧ್ಯಕ್ಷರಾದ ಶ್ರೀ ರವೀಂದ್ರ ಪೂಜಾರಿಯವರು ಸ್ಟ್ಯಾಂಪ್ ಪೇಪರ್ ನೀಡುವ ಮೂಲಕ ಈ ಸ್ಟ್ಯಾಂಪ್ ಕೇಂದ್ರವನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಉಪಾಧ್ಯಕ್ಷರು ವಸಂತ ಸುವರ್ಣ , ಕಾರ್ಯದರ್ಶಿ ಗಿರಿಧರ್ ಶೆಟ್ಟಿಗಾರ್ , ಜತೆ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ, ಕೋಶಾಧಿಕಾರಿ ಮುಹಮ್ಮದ್ ಆಝಮ್ ಶೇಕ್, ಮಾಜಿ ಅಧ್ಯಕ್ಷರು ಮುಸ್ತಾಕ್ ಇಬ್ರಾಹಿಮ್, ಕಾರ್ಯಕಾರಿ ಸಮಿತಿಯ ಪ್ರಕಾಶ್ ವಿ ಅಂಚನ್, ಮಧು, ಹರೀಶ್ ಸಾಲಿಯಾನ್, ಅಶೋಕ್ ಶೆಟ್ಟಿ, ಯೋಗೀಶ್ ಶೆಟ್ಟಿಗಾರ್, ಹರೀಶ್ ಪೂಜಾರಿ ಮತ್ತು ಸಂಘದ ರಾಜ್ಯ ಮಟ್ಟದ ಭಾರತ್ ಪತ್ರಿಕೆ ಯ ಜಿಲ್ಲಾ ವರದಿಗಾರ ಅನ್ವರ್ ಅಲಿ ಕಾಪು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *