ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿಮೆನ್ ಇಂಡಿಯಾ ಮೂವ್ಮೆಂಟ್ ಉಡುಪಿ ಜಿಲ್ಲೆ ವತಿಯಿಂದ ವಿಶೇಷ ಮಕ್ಕಳ ಶಾಲೆ, ವೃದ್ಧಾಶ್ರಮ ಹಾಗೂ ಸರ್ಕಾರಿ ಶಾಲೆಯ ಮಕ್ಕಳನ್ನು ಬೇಟಿಯಾಗಿ ಕುಶಲೋಪರಿ ವಿಚಾರಿಸಲಾಯಿತು. ನೇಜಾರಿನ ನೂರುಲ್ ಫುರ್ಖಾನ್ ವಿಶೇಷ ಮಕ್ಕಳ ಶಾಲೆ, ಹೂಡೆ ಸರಕಾರಿ ಉರ್ದು ಶಾಲೆ ಹಾಗೂ ಕಾಪುವಿನಲ್ಲಿರುವ ವೃದ್ದಾಶ್ರಮಕ್ಕೆ ಬೇಟಿ ನೀಡಿ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂಧರ್ಬದಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ ಉಡುಪಿ ಜಿಲ್ಲಾಧ್ಯಕ್ಷೆ ನಾಝಿಯಾ ನಸ್ರುಲ್ಲ, ಉಡುಪಿ ಬ್ರಾಂಚ್ ಸದಸ್ಯರಾದ ಹಸೀನಾ, ರೈಹಾನಾ ಹಾಗೂ ಮುಮ್ತಾಜ್ ಉಪಸ್ಥಿತರಿದ್ದರು.

