ಮಣಿಪುರ ರಾಜ್ಯದಲ್ಲಿ ಕಳೆದ ಸುಮಾರು 3 ತಿಂಗಳಿಂದ ನಡೆಯುತ್ತಿರುವ ಹಿಂಸಾಚಾರ, ಮಹಿಳೆಯರ ಮೇಲಿನ ಅತ್ಯಾಚಾರವನ್ನು ಖಂಡಿಸಿ, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ “ಬೃಹತ್ ಪ್ರತಿಭಟನಾ ಕಾರ್ಯಕ್ರಮ” ವು ಕಾಪು ಪೇಟೆಯಲ್ಲಿ ನಡೆಯಿತು.
ಪ್ರತಿಭಟನಾ ಮೆರವಣಿಗೆಯು ಕಾಪು ರಾಜೀವ್ ಭವನ ದಿಂದ ಕಾಪು ಪೇಟೆಯವರೆಗೆ ಸಾಗಿ, ಪೇಟೆಯಲ್ಲಿ ಸಭೆ ನಡೆಯಿತು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಸಭೆಯನ್ನುದ್ದೇಶಿಸಿ ಮಾತನಾಡಿ ಕೇಂದ್ರದ ಬಿಜೆಪಿಸರ್ಕಾರ ಕುಮ್ಮಕ್ಕು ನೀಡಿ ಮಣಿಪುರದಲ್ಲಿ ಬುಡಕಟ್ಟು ಜನಾಂಗದ ಮೇಲೆ ಹಲ್ಲೆಮಾಡುತ್ತಿದೆ. ಮಣಿಪುರ ರಾಜ್ಯದ ಎಲ್ಲೆಡೆ ಆಗುತ್ತಿರುವ ಅನ್ಯಾಯದ ವಿರುದ್ಧ ಕಾಂಗ್ರೆಸ್ ಇಡೀ ದೇಶದಲ್ಲೇ ಪ್ರತಿಭಟನೆ ಮಾಡುತ್ತಿದೆ. ಬೇಟಿ ಪಡಾವೋ ಬೇಟಿ ಬಚಾವೊ ಎನ್ನುವ ಬಿಜೆಪಿ ಸರ್ಕಾರ ಇಂದು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡುತ್ತಿದೆ. .ಮಣಿಪುರದ ಮುಖ್ಯ ಮಂತ್ರಿ ಯನ್ನು ವಜಾಮಾಡಿ ರಾಷ್ಟ್ರಪತಿ ಆಡಳಿತ ತರಲಿ ಎಂದು ಒತ್ತಾಯ ಮಾಡುತ್ತೇವೆ ಎಂದರು. ಈ ಸಂದರ್ಭ ಮಾಜಿ ಸಚಿವ ವಿನಯ್ ಕುಮಾರ್
ಸೊರಕೆ, ಕಾಪು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಡಾ.ಬೆಳಪು ದೇವಿ ಪ್ರಸಾದ್ ಶೆಟ್ಟಿ ನವೀನ್ ಚಂದ್ರ ಜೆ ಶೆಟ್ಟಿ ವಿಸ್ವಾಸ್ ಅಮೀನ್, ಶೇಖರ ಹೆಜಮಾಡಿ, ಗೀತಾ ವಾಗ್ಲೆ, ಸರಸು ಡಿ. ಬಂಗೇರ,,ಅಬ್ದುಲ್ ಅಜೀಜ್, ಮೆಲ್ಬಿನ ಡಿ. ಸೋಜ, ಗೋಪಾಲ ಪೂಜಾರಿ ಪಲಿಮಾರು, ಶರ್ಫುದ್ದೀನ್ ಶೇಖ್, ಶಾಂತಲತಾ ಶೆಟ್ಟಿ, ಅಶ್ವಿನಿ ಬಂಗೇರ, ಅಖಿಲೇಶ್ ಕೋಟ್ಯಾನ್, ಸದಾನಂದ ಶೆಟ್ಟಿ,ಜಿತೇಂದ್ರ ಪುರ್ಟಾಡೋ, ವಿನಯ ಬಲ್ಲಾಲ್ ಸತೀಶ್ ದೇಜಡಿ ಅಮೀರ್ ಕಾಪು ದಿನೇಶ್ ಪಲಿಮಾರ್,ಯೂತ್ ಕಾಂಗ್ರೇಸ್ ಅಧ್ಯಕ್ಷ ರಮೀಜ್ ಹುಸೈನ್,ಎಂ ಎ ಗಫೂರ್, ಹರೀಶ್ ನಾಯಕ್, ಸುನೀಲ್ ಬಂಗೇರ,ಶಿವಾಜಿ ಸುವರ್ಣ ಶೇಖಬ್ಬ ಉಚ್ಚಿಲ ಜಹೀರ್ ಅಹಮದ್, ಪ್ರಭಾಕರ ಆಚಾರ್ಯ ಉಸ್ಮಾನ್ ಕಾಪು ಕೇಶವ ಹೆಜಮಾಡಿ ಕರುಣಾಕರ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

