×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಬೈಂದೂರು: ಛಾಯಾಗ್ರಾಹಕನ ಮನೆಯಲ್ಲಿ ಲಕ್ಷದ ಚಿನ್ನಾಭರಣ ಕಳ್ಳತನ

ಬೈಂದೂರು  ತಾಲೂಕಿನ ಕೆರ್ಗಾಲು ಗ್ರಾಮದ ಮನೆಯೊಂದಕ್ಕೆ ನುಗ್ಗಿದ ಕಳ್ಳರು 1.47 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ಕೆರ್ಗಾಲು ಗ್ರಾಮದ ನಾಯ್ಕನಕಟ್ಟೆ ನಿವಾಸಿ ಛಾಯಾಗ್ರಾಹಕ ರವಿ ಶಂಕರ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಇವರು ಡಿ.17 ರಂದು ಬೆಳಿಗ್ಗೆ ತಮ್ಮ ಅಕ್ಕ ಅನುಷಾ ರವರೊಂದಿಗೆ ಅವರ ಸ್ನೇಹಿತನ ಮಗುವಿನ ಪೋಟೋ ಶೂಟ್ ಗೆಂದು ಹೊನ್ನಾವರಕ್ಕೆ ಹೋಗಿದ್ದರು. ಮರುದಿನ  ಮನೆಗೆ ವಾಪಸ್ಸು ಬಂದು ನೋಡುವಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.ಅದರಂತೆ ಡಿ.17ರ ಬೆಳಿಗ್ಗೆ ಯಿಂದ ಡಿ.18 ರ ಬೆಳಿಗ್ಗಿನ ಮದ್ಯಾವಧಿಯಲ್ಲಿ ರವಿ ಶಂಕರ್ ಅವರ ಮನೆಯ ಎದುರಿನ ಬಾಗಿಲನ್ನು ಒಡೆದು ಮನೆಗೆ ಒಳ ನುಗ್ಗಿದ ಕಳ್ಳರು ಡ್ರಾವರ್ ನಲ್ಲಿ ಇರಿಸಿದ್ದ ಅವರ ಅಕ್ಕನಿಗೆ ಸೇರಿದ ಅಂದಾಜು 1,47,000 ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ರವಿ ಶಂಕರ್ ಅವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *