ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಕರ್ನಾಟಕ ವತಿಯಿಂದ ಡಿಸೆಂಬರ್ 21 ರಿಂದ 27 ರ ವರೆಗೆ ಮೂಡುಬಿದಿರೆ ವಿದ್ಯಾಗಿರಿಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಕೀರ್ಣದಲ್ಲಿ “ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ” ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಇಂದು ದಿನಾಂಕ 19-12-2022 ರಂದು ಉಡುಪಿಯಿಂದ ಹೊರೆ ಕಾಣಿಕೆ ತಲುಪಿಸಿದ್ದು, ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಅವರು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾll. ಮೋಹನ್ ಆಳ್ವ ಅವರಿಗೆ ಹೊರೆಕಾಣಿಕೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ಆಯುಕ್ತರಾದ ಪಿ.ಜಿ.ಆರ್ ಸಿಂಧ್ಯಾ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಗಂಗಾಧರ್ ರಾಯ್, ಬಿ.ಜಿ ಶೆಟ್ಟಿ, ವಿಶ್ವನಾಥ್ ಶೆಣೈ, ಮುರಳಿ ಕಡೆಕಾರ್, ವಾಸುದೇವ್ ಭಟ್, ಭುವನ ಪ್ರಸಾದ್ ಹೆಗ್ಡೆ ಮತ್ತು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಕಾಂಗ್ರೆಸ್ ಪಕ್ಷದ ಸ್ವಚ್ಚ ಜನಪರ ಅಡಳಿತಕ್ಕೆ ಸಂದ ಜಯ. ಇದು ಕಾಂಗ್ರೆಸ್ ಆಡಳಿತದ ಮೇಲೆ ಬಿಜೆಪಿ ಮಾಡಿದ ರಾಜಕೀಯ ಪ್ರೇರಿತ ದುರುದ್ಧೇಶಿತ ಮಿಥ್ಯಾರೋಪಗಳಿಗೆ ಸಂದ ಅಪಜಯ ತನ್ನದೆ […]
ಕಾಂಗ್ರೆಸ್ ಪಕ್ಷದ ನಾಯಕರಾದ ಮಿಥುನ್ ರೈ ಅವರು ಬಿಜೆಪಿ ಶಾಸಕರ, ಸಂಸದರ ವೈಫಲ್ಯವನ್ನು ಜನರಿಗೆ ಎತ್ತಿ ತೋರಿಸಿದಾಗ ಬಿಜೆಪಿಗರಿಗೆ ಅತೀವ ನೋವಾಗಿದೆ. ವೈಯಕ್ತಿಕ ಟೀಕೆಗೆ ಇಳಿದಿದ್ದಾರೆ. ಜನ ಪ್ರತಿನಿಧಿಗಳು ಜನರಿಂದ ಆಯ್ಕೆಗೊಂಡವರು. ಜನರಿಗೆ ಸಮಸ್ಯೆಯಾದಾಗ […]
ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ವಾಲಿಬಾಲ್ ಆಡುತ್ತಿದ್ದ ಸಂದರ್ಭ ಯುವಕನೋರ್ವ ಕುಸಿದು ಬಿದ್ದು ಸಾವನಪ್ಪಿದ ಘಟನೆ ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ದುರ್ಗಾ ಅನುದಾನಿತ ಶಾಲೆಯ ಮೈದಾನದಲ್ಲಿ ಇಂದು ಸಂಭವಿಸಿದೆ. ಮೃತರನ್ನು ಕುಕ್ಕಂದೂರು […]
ಕಾರ್ಮಿಕ ದಿನಾಚರಣೆಯ ದೀಪ ವೇದಿಕೆಯಲ್ಲಿ ಮಾತ್ರ ಪ್ರಜ್ವಲಿಸದೆ ಪ್ರತಿಯೊಬ್ಬ ಕಾರ್ಮಿಕರ ಸಮಸ್ಯೆಗಳ ಪರಿಹಾರದ ದೀಪವಾಗಬೇಕು ಆರೋಗ್ಯದ ಸಮಧಾನದ ದೀಪವಾಗಬೇಕು ಈ ನಿಟ್ಟಿನಲ್ಲಿ ಮುತುವರ್ಜಿಯಿಂದ ಸದಾ ಕೆಲಸ ಮಾಡಬೇಕು ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಯೋಗೀಶ್ […]