ಮಂಗಳೂರು: ಇಂದು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಮಂಗಳೂರು ವಿವಿಯ ಪದವಿ ಫಲಿತಾಂಶಕ್ಕೆ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಪ್ರಶ್ನಿಸಿ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ ಘಟನೆ ನಡೆದಿದೆ. ಈ ವೇಳೆ ಪೊಲೀಸರು ಮತ್ತು ಎಬಿವಿಪಿ ಕಾರ್ಯಕರ್ತರ ನಡುವೆ ತಳ್ಳಾಟ ನಡೆದಿದೆ.ಇಂದು ಮಂಗಳೂರು ವಿವಿಯ ಪರೀಕ್ಷಾ ಫಲಿತಾಂಶ ವಿಳಂಬದ ವಿರುದ್ಧ ಎಬಿವಿಪಿ ನೇತೃತ್ವದಲ್ಲಿ ಡೆದ ಪ್ರತಿಭಟನೆ ತಾರಕಕ್ಕೇರಿದ್ದು ಪೊಲೀಸರು, ಎಬಿವಿಪಿ ಕಾರ್ಯಕರ್ತರ ನಡುವೆ ನೂಕಾಟ, ತಳ್ಳಾಟ ನಡೆದಿದೆ. ಸುಮಾರು 400 ರಷ್ಟಿದ್ದ ಎಬಿವಿಪಿ ವಿದ್ಯಾರ್ಥಿಗಳು ಮಂಗಳೂರು ವಿ.ವಿ ಆಡಳಿತ ಸೌಧದ ಆವರಣಕ್ಕೆ ಬಂದಾಗ ಪೊಲೀಸರು ಅವರನ್ನ ತಡೆದಿದ್ದಾರೆ. ಎಬಿವಿಪಿ ಕಾರ್ಯಕರ್ತರು ಬ್ಯಾರಿಕೇಡ್ಗಳನ್ನು ತಳ್ಳಿ ಆಡಳಿತ ಸೌಧದೊಳಗೆ ನುಗ್ಗಿದ್ದು ಪೊಲೀಸರು ಅವರನ್ನ ತಡೆಯಲು ಯತ್ನಿಸಿದ್ದು ಈ ವೇಳೆ ತಳ್ಳಾಟ ಉಂಟಾಗಿದೆ.
ಉಡುಪಿ: ನಾಳೆ (15.02.2025) ಉಡುಪಿ ಅಂಬಾಗಿಲಿನ ಅಮೃತ್ ಗಾರ್ಡನ್ ನಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕ ಸಂಘದ ಉಡುಪಿ ಜಿಲ್ಲಾ, ತಾಲೂಕು ಪದಾಧಿಕಾರಿಗಳ ಹಾಗೂ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಜಿಲ್ಲಾಧ್ಯಕ್ಷರಾದ ಪ್ರಭಾಕರ ಶೆಟ್ಟಿ […]
ಮಣಿಪಾಲ ಪದವಿ ಪೂರ್ವ ಕಾಲೇಜು (ಎಂಜಿಸಿ) ಇದರ ಅಮೃತ ಮಹೋತ್ಸವವನ್ನು ಡಿಸೆಂಬರ್ 27ರಿಂದ 30ರವರೆಗೆ ಆಚರಿಸಲಾಗುತ್ತಿದೆ. ಸಮಾರಂಭವನ್ನು ಅದ್ದೂರಿಯಾಗಿ ಹಾಗು ಅರ್ಥಪೂರ್ಣವಾಗಿ ಆಚರಿಸಲು ಡಿಸೆಂಬರ್ 3, ರವಿವಾರದಂದು ಸಂಜೆ ಗಂಟೆ ೪ಕ್ಕೆ ಕಾಲೇಜಿನ ಸಭಾಂಗಣದಲ್ಲಿ […]
ಪಡುಬಿದ್ರಿ : ಭಾರತೀಯ ಸಂಸ್ಕೃತಿಯ ರೂವಾರಿಯಾಗಿರುವ ಭಾರತೀಯ ಮಹಿಳೆಯರಿಗೆ ಪ್ರಾಪಂಚಿಕವಾಗಿ ವಿಶೇಷವಾದ ಗೌರವ – ಸ್ಥಾನಮಾನ ಇದೆ. ಆ ನಿಟ್ಟಿನಲ್ಲಿ ಸದ್ಗುಣ ಸಂಪನ್ನಳಾಗಿ ಸ್ಥಾನಮಾನಕ್ಕೆ ತಕ್ಕ ಗೌರವಯುತ ಜೀವನ ನಡೆಸುವ ಮೂಲಕ ಸಮಾಜಕ್ಕೆ ಭೂಷಣಪ್ರಾಯಳಾಗಿ […]