×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಹೊನಲು ಬೆಳಕಿನ ಕ್ರೀಡಾಕೂಟ – ಫ್ರೆಂಡ್ಸ್ ಅಜೆಕಾರ್ ಪ್ರಥಮ, ಎಸ್ ಬಿ ಸಿ‌ ಕಾರ್ಕಳ ದ್ವಿತೀಯ

ಮಾಜಿ ಶಾಸಕ ದಿ.ಹೆಚ್ ಗೋಪಾಲ ಭಂಡಾರಿಯವರ ಸ್ಮರಣಾರ್ಥ ಮೂರು ದಿನಗಳ ಕಾಲ ನಡೆದ ಹೊನಲು ಬೆಳಕಿನ ಕ್ರಿಕೇಟ್ ಪಂದ್ಯಾಟದಲ್ಲಿ ಪ್ರೆಂಡ್ಸ್ ಅಜೆಕಾರ್ ಪ್ರಥಮ‌ ಸ್ಥಾನವನ್ನು ಪಡೆದು ಒಂದು ಲಕ್ಷ ರೂ ನಗದು ಹಾಗೂ ಶಾಶ್ವತ ಫಲಕವನ್ನು ತನ್ನದಾಗಿಸಿಕೊಂಡಿತು. ದ್ವಿತೀಯ ಸ್ಥಾನವನ್ನು ಪಡೆದ ಎಸ್‌ ಬಿ ಸಿ ಕಾರ್ಕಳ ರೂ ಅರವತ್ತು ಸಾವಿರ ನಗದು ಮತ್ತು ಶಾಶ್ವತ ಫಲಕವನ್ನು ತನ್ನದಾಗಿಸಿಕೊಂಡರೆ ತೃತೀಯ ಹದಿನೈದು ಸಾವಿರ ಹಾಗು ಶಾಶ್ವತ ಫಲಕ ‌ಮತ್ತು ಚತುರ್ಥ‌ ಹತ್ತು ಸಾವಿರ ನಗದು ಮತ್ತು ಶಾಶ್ವತ ಫಲಕವನ್ನು ಕ್ರಮವಾಗಿ ಮಹಾಲಿಂಗೇಶ್ವರ ಮತ್ತು ಟೆಚ್ ವಿಂಗ್ ಅಜೆಕಾರ್ ಪಡೆಯಿತು, ವೈಯಕ್ತಿಕ ಪ್ರಶಸ್ತಿಗಳಾದ ಸರಣಿ ಶ್ರೇಷ್ಠ‌ ಪ್ರಶಸ್ತಿಯನ್ನು ಪ್ರಸಾದ್ ಅಜೆಕಾರ್, ಉತ್ತಮ ದಾಂಡಿಗ ಅಜೀಮ್, ಉತ್ತಮ ಎಸೆತಗಾರ ಸುರೇಶ್, ಪೈನಲ್ ಪಂದ್ಯದ ಪಂದ್ಯ ಶ್ರೇಷ್ಠ ಅಮರದೀಪ್, ಹಾಗೂ ವಿಶೇಷ ಆಟಗಾರ ಪ್ರಶಸ್ತಿಯನ್ನು ರವಿ ಪಡ್ಡಯೂರು ಪಡೆದುಕೊಂಡರು.‌ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿಯನ್ನು ವಿತರಿಸಿ ಮಾತನಾಡಿದ ಆಯೋಜಕರಾದ ಶುಭದರಾವ್ ಕ್ರೀಡಾಕೂಟ ಯಶಸ್ವಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆಯನ್ನು ತಿಳಿಸಿದರು, ಈ ಸಂದರ್ಭದಲ್ಲಿ ಕ್ರಿಕೆಟ್ ಅಸೋಸಿಯೇಷನ್ ಅದ್ಯಕ್ಷ ಅವಿನಾಶ್ ಶೆಟ್ಟಿ, ಮಾಜಿ ಪುರಸಭಾ ಸದಸ್ಯ ಶಿವಾಜಿರಾವ್, ಉದ್ಯಮಿ ಜಯಂತ್ ಕುಮಾರ್, ರಾಮಚಂದ್ರ ರಾವ್, ರತ್ನವರ್ಮ ಅಜ್ರಿ, ಅರಿಫ್ ಕಲ್ಲೊಟ್ಟೆ, ಅಶೋಕ್ ಆಚಾರ್ಯ, ‌ಪ್ರಶಾಂತ್ ಶೆಣೈ, ಗಪೂರ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *