: ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿಯವರ ಪಟ್ಟಾಭಿಷೇಕ ಮಹೋತ್ಸವದ ಹದಿನೈದನೇ ವರ್ಧಂತ್ಯು ತ್ಸವವು ಮೇ 22 ರಂದು ಪಡುಕುತ್ಯಾರು ಮೂಲಮಠದಲ್ಲಿ ನಡೆಮಹಾಸಂಸ್ಥಾನದಲ್ಲಿ ಶ್ರೀಕರಾರ್ಚಿತ ದೇವತಾ ಪೂಜೆ, ಕಟಪಾಡಿ ಅನಂತಶ್ರೀ ವಿಭೂಷಿತ ನಾಗಧರ್ಮೇಂದ್ರ ಸರಸ್ವತೀ ಮಹಾಸ್ವಾಮಿಗಳವರ ವೃಂದಾವನದಲ್ಲಿಪೂಜೆ, ಸರಸ್ವತೀಯಾಗಶಾಲೆಯಲ್ಲಿ ವಿಶ್ವಕರ್ಮ ಯಜ್ಞ, ದಕ್ಷಿಣಾಮೂರ್ತಿ ಯಜ್ಞ, ರುದ್ರ ಯಜ್ಞ, ಸಾಮೂಹಿಕ ಚಂಡಿಕಾ ಯಾಗ ಪೂರ್ಣಾಹುತಿ ನಡೆಯಿತು.ಯಿತು. ಆನೆಗುಂದಿ ಪ್ರತಿಷ್ಠಾನದವತಿಯಿಂದಪಾದಪೂಜೆ, ಮಹಾಸಂಸ್ಥಾನದ ವಿಶ್ವಸ್ಥರಾದದೇವಸ್ಥಾನಗಳಧರ್ಮ ದರ್ಶಿಗಳವರಿಂದ, ಆಯಾ ದೇವಸ್ಥಾನಗಳ ವತಿಯಿಂದ ಫಲನ್ಯಾಸ, ಪಾದಪೂಜೆ, ದೇವಸ್ಥಾನ ಗಳಲ್ಲಿವಾರ್ಷಿಕಸಂಗ್ರಹಿತಗುರುಕಾಣಿಕೆ ಸಮರ್ಪಣೆ, ಧಾರ್ಮಿಕ ಸಭೆ, ವಾಸ್ತು ಶಿಲ್ಪ ಮತ್ತು ಶಿಲ್ಪ ಕಲೆ ಸಾಧಕರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ, ಸಾಧಕರಿಗೆ ಆನೆಗುಂದಿ ಪ್ರಶಸ್ತಿ ಪ್ರದಾನ, ಯುವ ಶಿಲ್ಪಿಗಳಿಗೆ ಅಭಿನಂದನೆ, ಪ್ರತಿಭಾ ಪುರಸ್ಕಾರ ವಿತರಿಸಲಾಯಿತು

ಪ್ರತಿಷ್ಠಾನದ ಉಪಾಧ್ಯಕ್ಷಕೆ. ಪ್ರಭಾಕರ ಆಚಾರ್ಯ ಕೋಟೆಕಾರು ಅಧ್ಯಕ್ಷತೆ ವಹಿಸಿದ್ದರು.ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಿತಿ ಅಧ್ಯಕ್ಷ ಮೂಡಬಿದ್ರೆ ಎಸ್.ಕೆ. ಎಫ್ ಎಲಿಕ್ಸರ್ ಪೈವೇಟ್ ಲಿ.ನ ಸಂಸ್ಥಾಪಕ ಡಾ. ಜಿ. ರಾಮಕೃಷ್ಣ ಆಚಾರ್, ರಾಷ್ಟ್ರೀ ಯ ಪ್ರಶಸ್ತಿ ಪ್ರದಾನ ಸಮಿತಿ ಸಂಚಾಲಕ ಡಾ. ಬಿ. ಶ್ರೀಕಂಠಾಚಾರ್, ಕುತ್ಯಾರು ಗ್ರಾ.ಪಂ. ಅಧ್ಯಕ್ಷ ಜನಾರ್ದನ ಆಚಾರ್ಯ, ಚಾತುರ್ಮಾಸ್ಯವ್ರತನಿರ್ವ ಹಣಾ ಸಮಿತಿ ಗೌರವಾಧ್ಯಕ್ಷ ಪಿ.ಗಂಗಾಧರ ಆಚಾರ್ಯ, ಪ್ರಧಾನ ಕಾರ್ ದರ್ಶಿ ಲೋಕೇಶ್ ಎಂ.ಬಿ. ಆಚಾರ್ ಕಂಬಾರು, ಕೋಶಾಧಿಕಾರಿ ಅರವಿಂದ ಆಚಾರ್ಯ, ಪ್ರತಿಷ್ಠಾನದ ವಿಶ್ವಸ್ಥರಾದ ಸಮಾಜದ 21 ಕಾಳಿಕಾಂಬಾ ದೇವಸ್ಥಾನ ಗಳ ಧರ್ಮದರ್ಶಿಗಳು, ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು

