ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (MIT) ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಸುಮಾ ಜಿ. ಆರ್. ಅವರು ಮಂಡಿಸಿದ “ಸಿಂಥೆಸಿಸ್ ಅಂಡ್ ಕ್ಯಾರೆಕ್ಟರೈಸೇಶನ್ ಆಫ್ ಪಿರಿಡೀನ್ ಡೆರಿವೇಟಿವ್ಸ್ ಅಂಡ್ ದೇರ್ ಹೈಡ್ರೋಜನ್ ಬಾಂಡಿಂಗ್ ಕಾಂಪ್ಲೆಕ್ಸಸ್: ಇನ್ವೆಸ್ಟಿಗೇಶನ್ಸ್ ಆನ್ ಮೆಸೊಮಾರ್ಫಿಸಂ ಅಂಡ್ ಆಂಟಿಮೈಕ್ರೋಬಿಯಲ್ ಆಕ್ಟಿವಿಟೀಸ್” (Synthesis and characterisation of pyridine derivatives and their hydrogen bonding complexes: Investigations on mesomorphism and antimicrobial activities)” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಣಿಪಾಲ್ ಉನ್ನತ ಶಿಕ್ಷಣ ಅಕಾಡೆಮಿ (MAHE) ಪಿಎಚ್.ಡಿ ಪದವಿಯನ್ನು ನೀಡಿದೆ.
ಅವರು ಈ ಸಂಶೋಧನೆಯನ್ನು ಎಂ. ಐ. ಟಿ ಮಣಿಪಾಲ್‌ನ ಬೇಸಿಕ್ ಸೈನ್ಸಸ್ ವಿಭಾಗದ ಅಡಿಷನಲ್ ಪ್ರೊಫೆಸರ್ ಆದ ಡಾ. ಮದ್ದಸಾನಿ ಶ್ರೀನಿವಾಸುಲು ಅವರ ಮಾರ್ಗದರ್ಶನ ಹಾಗೂ ಸಿವಿಲ್ ಅಂಡ್ ಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಆದ ಡಾ. ನರೇಶ್ ಕುಮಾರ್ ಮಣಿ ಅವರ ಸಹ-ಮಾರ್ಗದರ್ಶನದಲ್ಲಿ ನಡೆಸಿದ್ದು ಇವರು ಕುಂದಾಪುರದ ಭಂಡಾರ್ಕರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸುಮಾರು ಹತ್ತೊಂಬತ್ತು ವರ್ಷಗಳ ಕಾಲ ಅನ್ವಯಿಕ ಜೀವವಿಜ್ಞಾನ (Applied Biosciences) ದ ಸಹಾಯಕ ಪ್ರಾಧ್ಯಾಪಕಿ ಹಾಗು ವಿಭಾಗದ ಮುಖ್ಯಸ್ಥರಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ.ಇವರು ಮೈಸೂರು ಅಂಚೆ ವಿಭಾಗದ ಉಪ ಅಂಚೆ ಅಧೀಕ್ಷಕರಾದ ನವೀನ್ ವಿ ಎಲ್ ರವರ ಪತ್ನಿ.

