×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಪುರಸಭೆಯಲ್ಲಿ ನೀರಿಗಾಗಿ ಹಾಹಾಕಾರ ಟ್ಯಾಂಕರ್ ಮೂಲಕ ನೀರು ವಿತರಿಸುವಂತೆ ಶುಭದರಾವ್ ಆಗ್ರಹ

ಪುರಸಭೆ ವ್ಯಾಪ್ತಿಯಲ್ಲಿ ನೀರಿಗಾಗಿ ಹಾಹಾಕಾರ ಮುಂದುವರೆದಿದ್ದು, ಕುಡಿಯುವ ನೀರಿಗೂ ತತ್ವಾರ ಎದುರಿಸುವ ದಿನಗಳು ಆರಂಭವಾಗಿದೆ ಕೋಟ್ಯಾಂತರ ರೂ. ಯೋಜನೆಗಳು ಹಳ್ಳ ಹಿಡಿದಿರುವುದರಿಂದ ಈ ಸಂಕಷ್ಟ ಎದುರಾಗಿದೆ ಎಂದು ಪುರಸಭೆ ಸದಸ್ಯ ಕಾಂಗ್ರೇಸ್ ವಕ್ತಾರ ಶುಭದ ರಾವ್ ತಿಳಿಸಿದ್ದಾರೆ. ಮುಂಡ್ಲಿ ಜಲಾಶಯ ಸಂಪೂರ್ಣ ಬತ್ತಿಹೋಗಿದೆ ರಾಮಸಮುದ್ರದಿಂದ ನೀರನ್ನು ಬಳಸಲಾಗುತ್ತಿದ್ದರೂ ಸಮರ್ಪಕವಾಗಿ ವಿತರಿಸಲು ಸಾದ್ಯವಾಗುತ್ತಿಲ್ಲ ಹಾಗಾಗಿ ಮಿತವಾದ ನೀರಿನ ಬಳಕೆ ಮಾಡುವಂತೆ ಪುರಸಭೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಈ ನಡುವೆ 136 ಕೋಟಿ ರೂ.ನಲ್ಲಿ ಪೂರ್ಣಗೊಂಡ ಎಣ್ಣೆಹೊಳೆ ಏತ ನೀರಾವರಿ ಯೋಜನೆ ಖೋತ ಹೊಡೆದಿದ್ದು ಜನತೆಯ ನಿರೀಕ್ಷೆಯನ್ನು ಹುಸಿಯಾಗಿಸಿದೆ ಎಂದು ದೂರಿದ್ದಾರೆ. ಎಣ್ಣೆಹೊಳೆಯ ಏತಾ ನೀರಾವರಿ ಯೋಜನೆಯಿಂದ ಕಾರ್ಕಳ ಪುರಸಭೆ ವ್ಯಾಪ್ತಿಗೆ ನೀರು ಹಾಯಿಸಲಾಗುವುದು ಎಂಬ ದೊಡ್ಡ ಪ್ರಚಾರವನ್ನು ಗಿಟ್ಟಿಸಲಾಗಿತ್ತು. ಅದಕ್ಕಾಗಿ
ಕಾರ್ಕಳ ಪೇಟೆಯ ರಸ್ತೆಯನ್ನು ಪೈಪ್‌ಲೈನ್‌ಗಳನ್ನು ಜೋಡಿಸುವ ಉದ್ದೇಶದಿಂದ ಅಗೆದು ಹಾಕಲಾಗಿತ್ತು ಆದರೆ ಈ ಯೋಜನೆ ಸಂಪೂರ್ಣ ವಿಫಲವಾಗಿದೆ ಕಾರ್ಕಳಕ್ಕೆ ನೀರು ಬರುತ್ತದೆ ಎಂದು ಕಾಯುತ್ತಿದ್ದ ಜನತೆ ಕಾದು ಕಾದು
ಬೇಸತ್ತಿದ್ದಾರೆ ಭ್ರಷ್ಟಚಾರ ಎಸಗಲು ಜನತೆಯ ತೆರಿಗೆ ಹಣವನ್ನು ಫೋಲ್ ಮಾಡಲು ಈ ಯೋಜನೆ ಜಾರಿಯಾಗಿದೆಯೇ‌ ಎಂದು ಸಂಬಂಧಿಸಿದವರೇ ಉತ್ತರಿಸಬೇಕು ಎಂದು ಪ್ರಶ್ನಿಸಿದ್ದಾರೆ. ಪುರಸಭೆಯಲ್ಲಿ
ಅನುಷ್ಟಾನಗೊಂಡ 13 ಕೋಟಿ ರೂ.ಒಳಚರಂಡಿ ಯೋಜನೆ ಕೂಡಾ ಸಂಪೂರ್ಣ
ವಿಫಲವಾಗಿದ್ದು ಅನೇಕ ಕುಡಿಯುವ ನೀರಿನ ಬಾವಿಗಳಲ್ಲಿ ತ್ಯಾಜ್ಯಗಳು ಇಂಗಿ ಜನತೆಗೆ
ತೊಂದರೆ ಅನುಭವಿಸುತ್ತಿದ್ದಾರೆ ಅದ್ದರಿಂದ ತಕ್ಷಣ ಎಲ್ಲಾ ‌ವಾರ್ಡಗಳಿಗೆ ಟ್ಯಾಂಕರ್ ‌ಮೂಲಕ ನೀರು ಸರಬರಾಜು ಮಾಡಬೇಕೆಂದು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *