×
Our website is made possible by displaying online advertisements to our visitors. Please consider supporting us by whitelisting our website.
  • 9880645340

ನಾಳೆ ರಾಹುಲ್ ಗಾಂಧಿ ಕಾಪು ಕ್ಷೇತ್ರದ ಉಚ್ಛಿಲಕ್ಕೆ : ಕಟಪಾಡಿ ಉಚ್ಛಿಲದಲ್ಲಿ ರೋಡ್ ಶೋ.. ಮೀನುಗಾರರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿ

ಉಡುಪಿ: ನಾಳೆ ರಾಹುಲ್ ಗಾಂಧಿ ಕಾಪು ಕ್ಷೇತ್ರದ ಉಚ್ಛಿಲಕ್ಕೆ ಆಗಮಿಸಲಿದ್ದು ಉಚ್ಛಿಲ ಮಹಾಲಕ್ಷ್ಮಿ ದೇವಸ್ಥಾನದ ಶಾಲಿನಿ ಜಿ. ಶಂಕರ್ ಸಭಾಂಗಣದಲ್ಲಿ ನಡಯೋ ಮೀನುಗಾರರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಅಂತಾ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ ಕಾಪು ರಾಜೀವ ಭವನದಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು ನಾಳೆ ಮಧ್ಯಾಹ್ನ 3-40 ಕ್ಕೆ ಕಾಪು ಕ್ಷೇತ್ರಕ್ಕೆ ಆಗಮಿಸಲಿರುವ ರಾಹುಲ್ ಗಾಂಧಿಯವರು ಕಟಪಾಡಿಯಲ್ಲಿ ಮತ್ತು ಉಚ್ಛಿಲದಲ್ಲಿ ನಡೆಯೋ ರೋಡ್ ಶೋನಲ್ಲಿ ಭಾಗವಹಿಸಲಿದ್ದು ನಂತರ ಉಚ್ಛಿಲ ಮಹಾಲಕ್ಷ್ಮಿ ದೇವಸ್ಥಾನದ ಶಾಲಿನಿ ಜಿ. ಶಂಕರ್ ಸಭಾಂಗಣದಲ್ಲಿ‌ ನಡೆಯೋ ಮೀನುಗಾರರ ಜೊತೆ ಸಂವಾದದಲ್ಲಿ ಭಾಗವಹಿಸಿ ಮೀನುಗಾರರ ಸಮುದಾಯದ ಕಷ್ಟ ನಷ್ಟಗಳ ಬಗ್ಗೆ ಆಲಿಸಲಿದ್ದಾರೆ ಅಂತಾ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ. ಮೀನುಗಾರರ ಸಮುದಾಯದ ವ್ರತ್ತಿಗೆ ಅನುಗುಣವಾಗಿ ಯಾವುದೇ ರೀತಿಯ ಸ್ಪಂದಿಸೋ ಕೆಲಸ ಬಿಜೆಪಿ ಸರ್ಕಾರ ಮಾಡಿಲ್ಲ.ಕಾಂಗ್ರೆಸ್ ಸರ್ಕಾರ ನಿರಂತರವಾಗಿ ಮೀನುಗಾರರಿಗೆ ಸೀಮೆಯಣ್ಣೆ ಸಬ್ಸಿಡಿ ಕೊಡುವ ಕೆಲಸ ಮಾಡಿತ್ತು. ಕಳೆದ 6 ತಿಂಗಳಿಂದ ಸೀಮಯಣ್ಣೆ ಸಬ್ಸಿಡಿ ಸಿಗದೇ ಮೀನುಗಾರರು ಕಂಗಲಾಗಿದ್ದಾರೆ. ಕೇವಲ ವೋಟ್ ಬ್ಯಾಂಕ್ ಆಗಿ ಸುಳ್ಳುಗಳ ಸರಮಾಲೆಯನ್ನು ಸ್ರಷ್ಟಿಸಿ ಮೀನುಗಾರ ಸಮುದಾಯವನ್ನು ಹತ್ತಿಕೋ ಕೆಲಸವನ್ನು ‌ಬಿಜೆಪಿ ಸರ್ಕಾರ ನಿರಂತರವಾಗಿ ಮಾಡುತ್ತಾ ಬಂದಿದೆ. ನಮ್ಮ ಸರ್ಕಾರ ಈ ಬಾರಿ ಕರಾವಳಿಯ ಪ್ರಣಾಳಿಕೆಯೊಂದನ್ನು ಸಿದ್ಧಪಡಿಸಿದ್ದು 2500 ಕೋಟಿ ರೂಪಾಯಿಯನ್ನು ಹಿಂದುಳಿದ ವರ್ಗ, ಮೀನುಗಾರರ ಸಮುದಾಯದ ಜೊತೆಗೆ ಎಲ್ಲಾ ಸಮುದಾಯದ ಅಭಿವೃದ್ಧಿ ಗೆ ಕಾರ್ಯಕ್ರಮವನ್ನು ರೂಪಿಸಿದೆ ಅಂತಾ ಸೊರಕೆ ಹೇಳಿದ್ದಾರೆ. ಬೈಂದೂರು ಕುಂದಾಪುರ, ಉಡುಪಿ, ಮಂಗಳೂರಿನಿಂದ ಸುಮಾರು 2 ಸಾವಿರ ಮೀನುಗಾರರು ಈ ಸಮಾವೇಶ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ ಮೀನುಗಾರರ ಜೊತೆ ಸಂವಾದ ನಡೆಸೋ ಕಾರ್ಯಕ್ರಮ ಕಾಪು ಕ್ಷೇತ್ರದಲ್ಲಿ ನಡೀತಿದೆ ಅಂತಾ ಸೊರಕೆ ಹೇಳಿದರು. ಬಾಕ್ಸ್ ಐಟಮ್ ಸುದ್ಧಿ  ಜಿ ಶಂಕರ್ ಮೊಗವೀರ ಸಮುದಾಯದ ಜೊತೆ ಎಲ್ಲಾ ಸಮುದಾಯದ ಪ್ರಶ್ನಾತೀತ ನಾಯಕ . ಎಲ್ಲಾ ಸಮುದಾಯದ ನಾಯಕರನ್ನು ಕರಾವಳಿ ಉದ್ದಗಲದಲ್ಲಿ ಸಂಘಟಿಸಿ ಎಲ್ಲಾ ಸಮುದಾಯದ ಸಮಾಜ ಕಷ್ಟಕ್ಕೆ ಸ್ಪಂದಿಸಿದವರು. ಜಿ. ಶಂಕರ್ ಮೇಲೆ ಚುನಾವಣಾ ಸಮಯದಲ್ಲಿ ಬಿಜೆಪಿ ಪ್ರೇರಿತ ಐಟಿ ದಾಳಿ ಖಂಡನೀಯ. ಜಿ. ಶಂಕರ್ ಉದ್ದೇಶ ಪೂರ್ವಕವಾಗಿ ಈ ಐಟಿ ದಾಳಿ ನಡೆಸಲಾಗಿದ್ದು ಇಡೀ ಸಮಾಜಕ್ಕೆ ಮಾಡಿದ ಅನ್ಯಾಯ ಅಂತಾ ವಿನಯ ಕುಮಾರ್ ಸೊರಕೆ ಬಿಜೆಪಿ ವಿರುದ್ಧ ಹರಿಹಾಯ್ದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಶೋಕ್ ಕುಮಾರ್ ಕೊಡವೂರು, ನವೀನ್ ಚಂದ್ರ ಸುವರ್ಣ, ನವೀನ್ ಚಂದ್ರ ಜೆ ಶೆಟ್ಟಿ, ಟಿ ಪ್ರತಾಪನ್, ದೇವಿ ಪ್ರಸಾದ್ ಶೆಟ್ಟಿ, ರಾಜಶೇಖರ ಕೋಟ್ಯಾನ್, ವಿಲ್ಸನ್ ರೋಡ್ರಿಗಸ್,ಶರ್ಪುದ್ದೀನ್ ಶೇಖ್ ಮಂಜುನಾಥ ಬಿ ಸೊಣೆಗಾರ್, ಹರಿಶ್ ಕಿಣಿ, ರಮೀಜ್ ಹುಸೇನ್, ಅಬ್ದುಲ್ ಗಫೂರ್, ಜೀತೇಂದ್ರ ಫುಟಾರ್ಡೋ, ಶಾಂತಲಾ, , ವಿಶ್ವಾಸ್ ಅಮೀನ್, ದಿನೇಶ್ ಕೋಟ್ಯಾನ್, ಅಮೀರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *