
ಹೆಬ್ರಿ : ಸಾಂತೋಳ್ಳಿ ಕ್ರಾಸ್ ಬಳಿ ಮಾರುತಿ ಇಕೋ ಹಾಗೂ ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ ಮಹಿಳೆ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ. ಮುನಿಯಾಲಿನ ಸಂದೇಶ ನಾಯ್ಕ್ ಎಂಬವರು ತಮ್ಮ ಮಾರುತಿ ಇಕೊ ಕಾರಿನಲ್ಲಿ ಶೇಖರ, ನಂದ್ಯಪ್ಪ, ಸುಶೀಲ ಮತ್ತು ವಿನುತಾ ಎಂಬವರೊಂದಿಗೆ ಬಾಡಿಗೆಯ ಸಲುವಾಗಿ ಅನಂತಪುರದಿಂದ ಕೈಕಂಬ ಮಾರ್ಗವಾಗಿ ಮುದ್ರಾಡಿ ಕಡೆಗೆ ಬರುತ್ತಿದ್ದಾಗ ಹೆಬ್ರಿ ಗ್ರಾಮದ ಸಾಂತೋಳ್ಳಿ ಕ್ರಾಸ್ ಬಳಿ ಎದುರುಗಡೆಯಿಂದ ಬಂದ ಪ್ರಣಯ ನಟರಾಜ್ ಅವರ ಕಾರು ಡಿಕ್ಕಿಯಾಗಿದೆ. ಅಪಘಾತದ ಪರಿಣಾಮ ಸಂದೇಶ್ ರವರ ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ಸುಶೀಲ ಎಂಬವರಿಗೆ ಗಂಭೀರವಾದ ಗಾಯಗಳಾಗಿದ್ದು ಇತರರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

