×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಎ 18 : ಆರ್ಯಾಡಿ ಶ್ರೀ ಸರಳ ಧೂಮಾವತಿ ಮತ್ತು ಮಚ್ಚು ಗುಡ್ಡೆ ಶ್ರೀ ಮರ್ಲು ಜುಮಾದಿ ದೈವಸ್ಥಾನ ಗಡುವಾ ಡು ನೆಮೋತ್ಸವ

ಆರ್ಯಾಡಿ ಶ್ರೀ ಸರಳ ಧೂಮಾವತಿ ಮತ್ತು ಮಚ್ಚು ಗುಡ್ಡೆ ಶ್ರೀ ಮರ್ಲು ಜುಮಾದಿ ದೈವಸ್ಥಾನ

​ಪಾಂಗಾಳ ಶ್ರೀ ದೈವ್ವಗಳ ಸಡಗರದ ಗಡುವಾ ಡು ನೆಮೋತ್ಸವ ಬಾಲೆ ಬಾಕಿಮಾರು ಗದ್ದೆ ಯಲ್ಲಿ ಎ 18 04 ಶನಿವಾರ ನಡೆಯುದು*
​ನಂಬಿದ ಭಕ್ತರ ಕಷ್ಟಗಳ ಕಾರ್ಮೋಡವನ್ನು ಸರಿಸಿ, ಸದಾ ಹರಸುವ ಆರ್ಯಾಡಿಯ ತಾಯಿ ಶ್ರೀ ಸರಳ ಧೂಮಾವತಿ ಹಾಗೂ ಮಚ್ಚುಗುಡ್ಡೆಯ ಕಾರ್ಣಿಕದ ದೈವ ಶ್ರೀ ಮರ್ಲುಜುಮಾದಿ ದೈವಗಳ ಸನ್ನಿಧಿಯಲ್ಲಿ ಈಗ ಸಂಭ್ರಮದ ಸಡಗರ! ತುಳುನಾಡ ಮಣ್ಣಿನ ಕಣಕಣದಲ್ಲೂ ದೈವತ್ವದ ಹಿನ್ನೆಲೆ ಭಕ್ತಿ ಮಾರ್ಗದಲ್ಲಿ ನಡೆಯಬೇಕೆಂಬ ಹಿರಿಯರ ಚಿಂತನೆಯ ಫಲ ವೇ ಇಂದಿಗೂ ಪ್ರತಿ ಊರಿನಲ್ಲೂ ಗ್ರಾಮ ಗ್ರಾಮಗಳಲ್ಲೂ ದೈವ ದೇವರುಗಳ ಪೂಜಾ ವಿಧಿ ವಿಧಾನಗಳು ಹಿರಿಯರ ಮಾರ್ಗದರ್ಶನ ಮತ್ತು ಕಿರಿಯರ ಪಾಲ್ಗೊಳ್ಳುವಿಕೆಯಿಂದ ನಡೆದು ಬಂದಿರುವುದು ತಮ್ಮ ಜೀವನ ಆರೋಗ್ಯ ವ್ಯವಹಾರ ಎಲ್ಲಾ ಕ್ಷೇತ್ರಗಳಲ್ಲೂ ದೈವದ ಆಶೀರ್ವಾದದಿಂದಲೇ ಪ್ರಗತಿ ಸಾಧಿಸಲು ಸಾಧ್ಯವೆಂದು, ಜೊತೆಯಾಗಿ ಭೇದಭಾವವಿಲ್ಲದೆ ಎಲ್ಲರೂ ಒಗ್ಗೂಡುವಿಕೆ ನಡೆಯುತ್ತಿರುವ ಒಂದು ಸುಂದರ ಜೀವನದ ಹಿಂದೆ ದೈವತ್ವದ ನಂಬಿಕೆ ಮತ್ತು ಆಶೀರ್ವಾದ ಇರುವುದು ಸತ್ಯ ​ದೈವಗಳ ಅಪಾರ ಕೃಪಾಶೀರ್ವಾದದೊಂದಿಗೆ, ಭಕ್ತಾದಿಗಳೆಲ್ಲರೂ ಸೇರಿ ಭಕ್ತಿ-ಭಾವದಿಂದ ಆಚರಿಸುವ “ಗಡುವಾಡು ನೇಮೋತ್ಸವ” ಹಾಗೂ ” ಅನ್ನ ಪ್ರಸಾದ ಸೇವೆಗೆ ತಮಗೆಲ್ಲರಿಗೂ ಪ್ರೀತಿಯ ಆದರದ ಆಮಂತ್ರಣ.​ದಿನಾಂಕ: 18-04-2026, ಶನಿವಾರ
​ಸ್ಥಳ: ಆರ್ಯಾಡಿ ಬಾಲೆ ಬಾಕಿಮಾರು ಗದ್ದೆ.​ಕಾರ್ಯಕ್ರಮದ ವಿವರಗಳು: ​ಮಧ್ಯಾಹ್ನ 12:00ಕ್ಕೆ: ಚಪ್ಪರ ಮುಹೂರ್ತ.​ಸಂಜೆ 5:00ರಿಂದ: ಶ್ರೀ ಮಲುಜುಮಾದಿ ದೈವಸ್ಥಾನದಿಂದ ಭಂಡಾರ ಹೊರಡುವುದು. ​ಸಂಜೆ 6:00ಕ್ಕೆ: ಶ್ರೀ ಸರಳ ಧೂಮಾವತಿ ದೈವಸ್ಥಾನದಿಂದ ಒಟ್ಟಾಗಿ ಭಂಡಾರ ಹೊರಡುವುದು. ​ರಾತ್ರಿ 7:00ರಿಂದ: ಭಕ್ತಾದಿಗಳಿಗೆ ಅನ್ನಸಂತರ್ಪಣೆ ಸೇವೆ. ​ರಾತ್ರಿ 9:00ರಿಂದ: ವೈಭವದ ಶ್ರೀ ಗಡುವಾಡು ನೇಮೋತ್ಸವ ಹಾಗೂ ಪ್ರಸಾದ ವಿತರಣೆ.​”ದೈವದ ನಂಬಿಕೆ ಬದುಕಿಗೆ ದಾರಿ, ದೈವದ ಆಶೀರ್ವಾದವೇ ನಮಗೆ ಶ್ರೀರಕ್ಷೆ.”​ಈ ಪವಿತ್ರ ನೇಮೋತ್ಸವದಲ್ಲಿ ತನು-ಮನ-ಧನಗಳಿಂದ ಸಹಕರಿಸಿ, ದೈವದ ಗಂಧ-ಪ್ರಸಾದವನ್ನು ಸ್ವೀಕರಿಸಿ ಪುನೀತರಾಗಬೇಕೆಂದು ಆಶಿಸುವ, ಊರಿನ ಹತ್ತು ಸಮಸ್ತರು ಹಾಗೂ ಗ್ರಾಮಸ್ಥರು.

Leave a Reply

Your email address will not be published. Required fields are marked *