
ಎರ್ಮಾಳು ನಿಂಗವ್ವ. (36) ಗಂಡ: ಶರಣಪ್ಪ, ಬಾಗಲಕೋಟೆ ಜಿಲ್ಲೆಯ ಮೂಲದವರಾಗಿದ್ದು, ಸುಮಾರು 06 ವರ್ಷಗಳಿಂದ ಉಡುಪಿ ಜಿಲ್ಲೆ ಕಾಪು ತಾಲೂಕು ತೆಂಕ ಎರ್ಮಾಳು ಗ್ರಾಮದ ಬೀಚ್‌ರಸ್ತೆಯ ವಿಜಯ ಎಂಬುವರ ಮನೆಯಲ್ಲಿ ಗಂಡ ಹಾಗೂ ಮಕ್ಕಳೊಂದಿಗೆ ಬಾಡಿಗೆಗೆ ವಾಸವಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ ಎಂದಿನಂತೆ ದಿನಾಂಕ 24/03/2023 ರಂದು ಬೆಳಿಗ್ಗೆ 09:00 ಗಂಟೆಯ ವೇಳೆಗೆ ಕೂಲಿ ಕೆಲಸಕ್ಕೆಂದು ಮನೆಗೆ ಬೀಗ ಹಾಕಿ ಹೋಗಿದ್ದು, ನಿಂಗವ್ವ ರವರ ಗಂಡ ಮಧ್ಯಾಹ್ನ 15:10 ಗಂಟೆಯ ವೇಳೆಗೆ ವಾಪಾಸ್ಸು ಮನೆಗೆ ಬಂದಾಗ,ಯಾರೋ ಕಳ್ಳರು ಅವರ ಮನೆಯ ಬಾಗಿಲಿಗೆ ಹಾಕಿದ್ದ ಬೀಗವನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು, ಮನೆಯೊಳಗೆ ಹೋಗಿ ಗೋದ್ರೇಜ್‌ನಲ್ಲಿದ್ದ ಬಟ್ಟೆ ಬರೆಗಳನ್ನು ಹುಡುಕಾಡಿ ಚೆಲ್ಲಾಪಿಲ್ಲಿ ಮಾಡಿರುವುದಲ್ಲದೇ, ಗೋದ್ರೇಜ್ ಒಳಗೆ ಹಣ ಇರಿಸಿದ್ದ ಬ್ಯಾಗಿಗೆ ಹಾಕಿದ್ದ ಸಣ್ಣ ಬೀಗವನ್ನು ಜಿಪ್ ಸಮೇತ ಕಿತ್ತು ಹಾಕಿ, ಬ್ಯಾಗಿನೊಳಗಿದ್ದ 1] 1,10,000/- ರೂಪಾಯಿ ನಗದು, 2] ಸುಮಾರು 4 ಗ್ರಾಮ್ ತೂಕದ ಲಕ್ಷ್ಮೀ ಪದಕ ಇರುವ ಚಿನ್ನದ ಸರ-01 ಅಂದಾಜು ಮೌಲ್ಯ 14,000/- ರೂಪಾಯಿ, 3] ಸುಮಾರು 4 ಗ್ರಾಮ್ ತೂಕದ ಚಿನ್ನದ ಗುಂಡುಗಳಿರುವ ನೂಲಿನಿಂದ ಪೋಣಿಸಿದ ಸರ-01 ಅಂದಾಜು ಮೌಲ್ಯ 14,000/- ರೂಪಾಯಿ, 4] ಸುಮಾರು 80 ಗ್ರಾಮ್ ತೂಕದ ಬೆಳ್ಳಿಯ ದೇವರ ದೀಪ-01 ಅಂದಾಜು ಮೌಲ್ಯ 2,000/- ರೂಪಾಯಿ ಕಳವು ಮಾಡಿಕೊಂಡು ಹೋಗಿದ್ದು, ಕಳುವಾದ ಎಲ್ಲಾ ವಸ್ತುಗಳ ಒಟ್ಟು ಮೌಲ್ಯ 1,40,000/- ರೂಪಾಯಿ ಆಗಿರಬಹುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿರುತ್ತದೆ.

