
ರಾಹುಲ್ ಗಾಂಧಿಯನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ಆದೇಶ ನೀಡಿರುವುದು ಪ್ರಜಾಪ್ರಭುತ್ವ ಕಗ್ಗೊಲೆ ಎಂದು ಉಡುಪಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಶ್ರೀ ಕೆ ಕೃಷ್ಣ ಮೂರ್ತಿ ಆಚಾರ್ಯ ಆಕ್ರೋಶ ವ್ಯಕ್ತಪಡಿಸಿದರು ‘ಮೋದಿ ಸರ್ ನೇಮ್’ ಹೇಳಿಕೆ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆ ಘೋಷಿಸಿರುನ ಕೋರ್ಟ್ ಮೇಲ್ಮನವಿ ಸಲ್ಲಿಸಲು 30 ದಿನಗಳ ಅವಕಾಶ ನೀಡಿದೆ.ನ್ಯಾಯಾಲಯದ ತೀರ್ಪಿನ ಬಗ್ಗೆ ನಾನೇನೂ ಹೇಳಲಾರೆ. ಆದರೆ, ನ್ಯಾಯಾಲಯವೇ ಆದೇಶವನ್ನು ಅಮಾನತ್ತಿನಲ್ಲಿರಿಸಿ ಮೇಲ್ಮನವಿಗೆ ಅವಕಾಶ ನೀಡಿರುವಾಗ ಸಂಸದ ಸ್ಥಾನದಿಂದ ಅರ್ಹಗೊಳಿಸಿರುವ ಪ್ರಕ್ರಿಯೆ ಮುಂದೆ ದೇಶದ ಪ್ರತಿಯೊಂದು ಸಂಸದರಿಗೂ ಅನ್ವಯವಾಗಲಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ರಾಹುಲ್ ಗಾಂಧಿಯವರು ಭಾರತ್ ಜೋಡು ಯಾತ್ರೆಯಿಂದ ಮತ್ತಷ್ಟು ಜನ ಮನ್ನಣೆ ಗಳಿಸಿದ್ದಾರೆ ದೇಶದ ಜನರನ್ನು ಒಗ್ಗೂಡುಸುವಲ್ಲಿ ಯಶಸ್ವಿಯಾಗಿದ್ದರು ಬಿಜೆಪಿಯ ಭ್ರಷ್ಟಾಚಾರವನ್ನು ಸಂಸತ್ತಿನ ಒಳಗೆ ಹೊರಗೆ ಯಾವುದೇ ಅಂಜಿಕೆ ಇಲ್ಲದೆ ನೇರವಾಗಿ ಹೇಳುತ್ತಿದ್ದರು ಇದು ನರೇಂದ್ರ ಮೋದಿ ಬಿಜೆಪಿ ಸರ್ಕಾರಕ್ಕೆ ಕಬ್ಬಿಣದ ಕಡಲೆಕಾಯಿಯಾಗಿ ಪರಿಣಮಿಸಿದೆ ಬಿಜೆಪಿ ನಾಯಕರು ರಾಹುಲ್ ಗಾಂಧಿ ಸತ್ಯ ಮಾತನಾಡಿದರೆ ಬಿಡದವರು ಇನ್ನು ಜನಸಾಮಾನ್ಯರಿಗೆ ಬಿಡಬಹುದೇ ಎಂದು ಪ್ರಶ್ನಿಸಿದ ಅವರು, ದೇಶದ ಜನತೆ ರಾಹುಲ್ ಗಾಂಧಿಯನ್ನು ಭವಿಷ್ಯದ ನಾಯಕ ಎಂದು ಬಿಂಬಿಸುತ್ತಿರುವಾಗ ಭಯದಿಂದ ಈ ರೀತಿಯ ಕೃತ್ಯ ಎಸಗಲಾಗುತ್ತಿದೆ. ಬಿಜೆಪಿ ನಾಯಕರು ನೇರವಾಗಿ ರಾಹುಲ್ ಗಾಂಧಿ ಅವರನ್ನು ಎದುರಿಸಲು ಸಾಧ್ಯವಾಗದೆ ದ್ವೇಷದ ರಾಜಕಾರಣಕ್ಕೆ ನೇರವಾಗಿ ಇಳಿದಿದ್ದಾರೆ ನಮ್ಮ ನಾಯಕರ ದ ರಾಹುಲ್ ಗಾಂಧಿ ಅವರು ಸತ್ಯದ ಪರವಾಗಿ ಜನರ ಪರವಾಗಿ ಪ್ರಜಾಪ್ರಭುತ್ವದ ರಕ್ಷಣೆಗೆ ಹೋರಾಟ ಮಾಡುತ್ತಿದ್ದಾರೆ ಬಿಜೆಪಿಯವರು ಎಷ್ಟೇ ದ್ವೇಷದ ರಾಜಕಾರಣ ಮಾಡಿದರು ಇದಕ್ಕೆಲ್ಲಾ ಕಾಂಗ್ರೆಸ್ ಹೆದರುವುದಿಲ್ಲ. ಸತ್ಯ ಮಾತನಾಡುವ ರಾಹುಲ್ ಜತೆಗೆ ಕಾಂಗ್ರೆಸ್‌ನ ಪ್ರತಿಯೊಬ್ಬ ನಾಯಕರು ಕಾರ್ಯಕರ್ತರು ದೇಶದ ಪ್ರತಿಯೊಬ್ಬರು ಇದ್ದಾರೆ ಸತ್ಯಕ್ಕೆ ಯಾವತ್ತಿಗೂ ಜಯ ಇದೇ ಎಂದವರು ಹೇಳಿದರು.

