×
Our website is made possible by displaying online advertisements to our visitors. Please consider supporting us by whitelisting our website.
  • 9880645340

ತಮ್ಮ ತಮ್ಮ ಸ್ವಾರ್ಥಕ್ಕಾಗಿ ಎಸ್ ಡಿ ಪಿ ಐ ಪಕ್ಷವನ್ನು ದೂಷಿಸುವುದನ್ನು ನಿಲ್ಲಿಸಿ, ಉಡುಪಿ ಬಿಜೆಪಿ ಮತ್ತು ಕಾಂಗ್ರೆಸ್ ಜಿಲ್ಲಾಧ್ಯಕ್ಷರುಗಳಿಗೆ SDPI ಜಿಲ್ಲಾಧ್ಯಕ್ಷರ ಎಚ್ಚರಿ

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಉಡುಪಿ ಜಿಲ್ಲಾ ಅಧ್ಯಕ್ಷರುಗಳು ಚುನಾವಣೆ ಹತ್ತಿರ ಬರುತ್ತಿದ್ದಂತೆ ತಮ್ಮ ಸಹನೆ ಕಳೆದುಕೊಂಡವರಂತೆ ಪತ್ರಿಕಾ ಹೇಳಿಕೆ ಕೊಡುತ್ತಿದ್ದಾರೆ. ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷರು
ಬಹುಸಂಖ್ಯಾತರ ಓಲೈಕೆಗಾಗಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷವನ್ನು ದೇಶ ವಿರೋಧಿ ಮೂಲಭೂತವಾಗಿ ಎಂದು ಉಲ್ಲೇಖಿಸುವಾಗ ತಮ್ಮ ಸಂಘ ಪರಿವಾರದವರು ಮಾಡಿದ ದೇಶವಿರೋಧಿ ಕುಕೃತ್ಯಗಳಾದ ಮಹಾತ್ಮ ಗಾಂಧಿ ಹತ್ಯೆ, ಬಾಬರಿ ಮಸೀದಿ ದ್ವಂಸ, ಮಲೆಗಾವ್ ಸ್ಪೋಟ, ಮಕ್ಕ ಮಸೀದಿ ಸ್ಫೋಟ, ಸಂಜೋತಾ ಎಕ್ಸ್ಪ್ರೆಸ್ ಸ್ಫೋಟ, ಪ್ರಕರಣಗಳನ್ನು ಮರೆತಂತಿದೆ. ಎಸ್ ಡಿ ಪಿ ಐ ಕಾನೂನು ವಿರೋಧಿ ಸಂವಿಧಾನ ವಿರೋಧಿ ಜನವಿರೋಧಿ ಕೆಲಸಗಳನ್ನು ಎಂದೂ ಮಾಡಿಲ್ಲ. ಮುಂದೆಂದೂ ಮಾಡುವುದಿಲ್ಲ ಇದು ಬಿಜೆಪಿ ಜಿಲ್ಲಾಧ್ಯಕ್ಷರಿಗೆ ತಿಳಿದಿರಲಿ. ಉಡುಪಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ನೈತಿಕತೆಯನ್ನು ಮರೆತು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಮೇಲೆ ಸುಳ್ಳು ಅಪವಾದ ಹೊರಿಸುತ್ತಿದ್ದಾರೆ. ಕೈಗೆ ಎಟುಕದ ದ್ರಾಕ್ಷಿ ಹುಳಿ ಎಂಬ ಗಾದೆಯಂತೆ ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವನ್ನು ದೂಷಿಸುತ್ತಾ ಇದ್ದಾರೆ. ಎರಡೂಪಕ್ಷಗಳು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವನ್ನು ತಮ್ಮ ಸ್ವಾರ್ಥ ಗೋಸ್ಕರ ಫುಟ್ಬಾಲ್ ಚೆಂಡು ಎಂದು ತಿಳಿದಂತಿದೆ. ಗೋಲ್ ಮಾಡಲು ಪ್ರಯತ್ನಿಸುವವರಿಗೆ ತಿಳಿದಿರಲಿ ಇದು ಕಬ್ಬಿಣದ ಚೆಂಡು. ಎಸ್ ಡಿ ಪಿ ಐ ಪಕ್ಷ ರಾಷ್ಟ್ರೀಯ ಪಕ್ಷವಾಗಿದ್ದು ಸತ್ಯ ಪ್ರಾಮಾಣಿಕ ಜನಪರ ಪಕ್ಷವಾಗಿದೆ. ಇದು ಜಾತ್ಯಾತೀತ ಪಕ್ಷ ಎಂದು ಬೇರೆ ಹೇಳಬೇಕಾಗಿಲ್ಲ. ಇದರಲ್ಲಿ ದಲಿತರು ದಮನಿತರು ಶೋಷಿತರು ಹಿಂದು ಮತ್ತು ಕ್ರಿಶ್ಚಿಯನ್ ಜನತೆ ಸಮೂಹ ಸಮೂಹವಾಗಿ ಪಕ್ಷ ಸೇರ್ಪಡೆಯಾಗುತ್ತಾ ಇದ್ದಾರೆ. ಈ ಪಕ್ಷ ಈಗ ಸೆಮಿ ಫೈನಲ್ ನಲ್ಲಿ ಇದೆ. ಬರುವ ಚುನಾವಣೆಯಲ್ಲಿ ಈ ಪಕ್ಷ ಫೈನಲಿಗೆ ಬಂದು ಗೆಲುವಿನ ಪತಾಕೆ ಹಾರಿಸುವುದರಲ್ಲಿ ಸಂಶಯ ಬೇಡ. ತಮ್ಮ ತಮ್ಮ ಪಕ್ಷಗಳ ಜನಪರ ಕೆಲಸದ ಬಗ್ಗೆ ಮಾತಾಡಲು ಏನು ಇಲ್ಲದಿರುವಾಗ ಬೇರೆಯವರ ಕಡೆ ಬೆರಳು ತೋರಿಸುವುದು ಬೇಡ. ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಪಕ್ಷ ಇಂದಿನ ತನಕ ವೋಟ್ ಬ್ಯಾಂಕ್ ಆಗಿ ಮುಸ್ಲಿಮರನ್ನು ಉಪಯೋಗಿಸಿದ್ದು ಸಾಕು. ಸೆಕ್ಯುಲರ್ ಓಟು ಪಡೆದು ನಂತರ ದುಡ್ಡಿಗಾಗಿ ಮಾರಲ್ಪಡುವ ಇವರು, ಕೇವಲ ಕರ್ನಾಟಕದಲ್ಲಿಯೆ 17 ಮಂದಿ ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಎಸ್ ಡಿ ಪಿ ಐ ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿರುವುದನ್ನು ಸಹಿಸಲು ಕಲಿಯಿರಿ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷರಾದ ಶಾಹಿದ್ ಅಲಿ ಯವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Leave a Reply

Your email address will not be published. Required fields are marked *