
ಪಡುಬಿದ್ರಿಯ ಕಾರ್ಕಳ ರಸ್ತೆಯಲ್ಲಿರುವ ಬಟ್ಟೆಯಂಗಡಿ ಹಾಗೂ ಪಡುಬಿದ್ರಿಯ ಮುಖ್ಯ ಮಾರುಕಟ್ಟೆಯಲ್ಲಿಯ ಸೂಪರ್ ಮಾರ್ಕೆಟ್ ನಲ್ಲಿ ತಡರಾತ್ರಿ ಕಳ್ಳತನ ನಡೆದಿದ್ದು, ಸಹಸ್ರಾರು ರೂಪಾಯಿ ಬೆಲೆಬಾಳುವ ವಸ್ತುಗಳು ಹಾಗೂ ನಗದು ಕಳವಾಗಿದೆ.ಕಳ್ಳನ ಕುಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಮಾರುಕಟ್ಟೆಯಲ್ಲಿರುವ ಕೆ.ಎಸ್.ಬಜಾರ್ ನ ಬೀಗ ಮುರಿದ ಕಳ್ಳ, ಒಳ ಹೊಕ್ಕು ಒಂದು ಲ್ಯಾಪ್‌ಟಾಪ್ ಹಾಗೂ ಒಂದು ಮೊಬೈಲ್ ಕಳವು ನಡೆಸಿದ್ದಾನೆ. ಕಾರ್ಕಳ ರಸ್ತೆಯಲ್ಲಿರುವ ಬಟ್ಟೆಯಂಗಡಿಯ ಬೀಗ ಮುರಿದು ಒಳ ಹೊಕ್ಕಕಳ್ಳ ಮಸೀದಿ ಹೆಸರಲ್ಲಿದ್ದ ಕಾಣಿಕೆ ಹುಂಡಿಯಲ್ಲಿದ್ದ ಸುಮಾರು 2,000 ರೂಪಾಯಿ ನಗದು ಹಾಗೂ ಸುಮಾರು 10, 000 ರೂಪಾಯಿ ಬೆಲೆ ಬಾಳುವ ಪ್ಯಾಂಟ್- ಶರ್ಟ್ ಕಳವು ಮಾಡಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ರೈನ್ ಕೋಟ್, ಮಾಸ್ಕ್ ಧರಿಸಿ ಈ ಕಳ್ಳತನ ನಡೆಸಿದ್ದು, . ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

