
ಹೊಯಿಗೆ ಫ್ರೆಂಡ್ಸ್ ಹೊಯಿಗೆ ಪಲಿಮಾರು.. ದೇವಿ ಪ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ ಉಡುಪಿ.. ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 08/01/2023 ಆದಿತ್ಯವಾರ ಸರಕಾರಿ ಪದವಿ ಪೂರ್ವ ಕಾಲೇಜು ಪಲಿಮಾರು ಇಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀನಿವಾಸ ಉಡುಪ ಇವರು ಉದ್ಘಾಟಿಸಿದರು ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ ಉಡುಪಿ ಇದರ ಅಧ್ಯಕ್ಹರಾದ ರಕ್ತದ ಅಪತ್ಭಾಂಧವ ಸತೀಶ್ ಸಾಲ್ಯಾನ್ ಮಣಿಪಾಲ್ ಅವರು ಕಳೆದ ಐದು ವರ್ಷಗಳಿಂದ ಪಲಿಮಾರು ಭಾಗದಲ್ಲಿ ಸತತವಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಂಡು ಹಲವು ರೋಗಿಗಳ ಜೀವ ಉಳಿವಿಗೆ ಕಾರಣವಾದ ಹೊಯಿಗೆ ಫ್ರೇಂಡ್ಸ್ ಪಲಿಮಾರು ಹಾಗೂ ಶ್ರಿದೇವಿ ಫ್ರೇಂಡ್ಸ್ ಪಲಿಮಾರು ಅವರ ಕಾರ್ಯ ಶ್ಲಾಘನೀಯವಾದದ್ದು ಎಂದರು. ಈ ಸಂದರ್ಭದಲ್ಲಿ ಗಾಯತ್ರಿ ಡಿ ಪ್ರಭು ಅಧ್ಯಕ್ಹರು ಪಲಿಮಾರು ಗ್ರಾಮ ಪಂಚಾಯತ್. ಗ್ರೇಟ್ಟ ಮೋರಸ್ ಪ್ರಾಂಶುಪಾಲರು, ಸರಕಾರಿ ಪದವಿ ಪೂರ್ವ ಕಾಲೇಜು ಪಲಿಮಾರು,
ರಾಘವೇಂದ್ರ ಜೆ ಸುವರ್ಣ ಅಧ್ಯಕ್ಹರು ಹೊಯಿಗೆ ಫ್ರೆಂಡ್ಸ್ ಹೊಯಿಗೆ ಪಲಿಮಾರು ಹರೀಶ್ ಅಧ್ಯಕ್ಹರು
ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು ಡಾ.ಬೆಮ ವೈದ್ಯರು ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ
ಪ್ರಸಾದ್ ಪಲಿಮಾರು ಉಪಾಧ್ಯಾಕ್ಹರು, ಕಾಲೇಜು ಅಭಿವೃದ್ದಿ ಸಮಿತಿ ಪಲಿಮಾರು, ಶ್ರೀಮತಿ ವಿಜಯಲಕ್ಶ್ಮಿ ಉಪನ್ಯಾಸಕಿ ಪದವಿ ಪೂರ್ವ ಕಾಲೇಜು ಪಲಿಮಾರು ಹಾಗೂ ಇತರರು ಉಪಸ್ಥಿತರಿದ್ದರು.
ಶ್ರೀದೇವಿ ಪ್ರೇಂಡ್ಸ್ ಕ್ಲಬ್ ಇದರ ಕಾರ್ಯದರ್ಶಿಯಾದ ಪ್ರತಾಪ್ ಅವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.. ಹೊಯಿಗೆ ಪ್ರೇಂಡ್ಸ್ ಹೊಯಿಗೆ ಇದರ ಕಾರ್ಯದರ್ಶಿಯಾದ ಸತೀಶ್ ಪಲಿಮಾರು ಧನ್ಯವಾದ ಅರ್ಪಿಸಿದರು..

