
ಕರ್ನಾಟಕ ಸರಕಾರ ಕಾಲೇಜು ಹಾಗೂ ತಾಂತ್ರಿಕ ಇಲಾಖೆಯ ಅಡಿಯಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾಪು ಇಲ್ಲಿನ ಐಕ್ಯುಏಸಿ ಘಟಕ ಹಾಗೂ ಮಾನವಿಕ ಸಂಘದ ವತಿಯಿಂದ ಮನುಜ ಮತ ವಿಶ್ವಪಥ ಕಾರ್ಯಕ್ರಮವು ದಿನಾಂಕ 7-1- 23ರಂದು ಕಾಲೇಜಿನ ಡಾ ವಿ. ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆಯಿತು
ಉಡುಪಿ ಜಿಲ್ಲೆಯ ಲೀಡ್ ಕಾಲೇಜಾದ ಡಾ. ಜಿ .ಶಂಕರ್ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಭಾಸ್ಕರ್ ಶೆಟ್ಟಿ ಇವರು ಕಾರ್ಯಕ್ರಮದ ಉದ್ಘಾಟನೆ ಮಾಡಿದರು .
ಮೊದಲನೇ ಅಧಿವೇಶನದಲ್ಲಿ ಕುವೆಂಪುರವರ ಚಿಂತನೆಗಳ ಬಗ್ಗೆ ವಿವರವಾಗಿ ಡಾ. ನಿಕೇತನ ಪ್ರಾಧ್ಯಾಪಕರು ಕನ್ನಡ ವಿಭಾಗ ಡಾ. ಜಿ .ಶಂಕರ್ ಮಹಿಳಾ ಕಾಲೇಜು ಇವರು ನಡೆಸಿಕೊಟ್ಟರು. ಈ ಅಧಿವೇಶನದಲ್ಲಿ ಕಟಪಾಡಿ ಎಸ್ ವಿ ಎಸ್ ಕಾಲೇಜಿನ ಶ್ರೀಮತಿ ಅಂಜನಾ ಶೆಣೈ ಇವರು ಅಧ್ಯಕ್ಷೀಯ ಸ್ಥಾನದಿಂದ ಕುವೆಂಪುರವರ ವಿಚಾರಗಳ ಬಗ್ಗೆ ವಿಮರ್ಶೆ ಮಾಡಿದರು. ಎರಡನೆಯ ಅಧಿವೇಶನದಲ್ಲಿ ಡಾ. ರವಿ ಎಂ ಎನ್ ಸಹಾಯಕ ಪ್ರಾಧ್ಯಾಪಕರು ವಾಣಿಜ್ಯಶಾಸ್ತ್ರ ವಿಭಾಗ ಸರಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು ಇವರು ಸ್ವಾಮಿ ವಿವೇಕಾನಂದರ ಜೀವನದ ತತ್ವ ಆದರ್ಶಗಳನ್ನು ವಿವರಿಸಿದರು . ಈ ಅಧಿವೇಶನದ ಅಧ್ಯಕ್ಷ ಸ್ಥಾನದಿಂದ ದಂಡ ತೀರ್ಥ ಪದವಿ ಪೂರ್ವ ಕಾಲೇಜು ಕಾಪುವಿನ ಪ್ರಾಂಶುಪಾಲರಾದ ಶ್ರೀಮತಿ ಮರಿನ ತೆರೇಸಾ ಇವರು ವಿವೇಕಾನಂದರ ಆದರ್ಶಗಳನ್ನು ವಿದ್ಯಾರ್ಥಿಗಳು ಪಾಲಿಸಬೇಕೆಂದು ವಿವರಿಸಿ ದರು . ಮೂರನೇ ಅಧಿವೇಶನದಲ್ಲಿ ಶ್ರೀ ಸ್ವಾಮಿ ಎಸ್ ಇತಿಹಾಸ ಸಹಾಯಕ ಪ್ರಾಧ್ಯಾಪಕರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳಂದೂರು ಇವರು ಬಸವಣ್ಣನವರ ಚಿಂತನೆ ಹಾಗೂ ವಿಚಾರಗಳನ್ನು ವಿವರಿಸಿದರು ಈ ಅಧಿವೇಶನದ ಅಧ್ಯಕ್ಷ ಸ್ಥಾನವನ್ನು ಕಾಲೇಜಿನ ಮಾನವಿಕ ಸಂಘದ ಸಂಚಾಲಕರಾದ ಡಾ. ಸುಚಿತ್ರ ಎಸ್ ಸರ್ ವಹಿಸಿದ್ದರು ನಾಲ್ಕನೇ ಅಧಿವೇಶನದಲ್ಲಿ ಶ್ರೀ ಕಾಂತರಾಜು ಸಿ ಸಮಾಜ ಕಾರ್ಯ ಸಹಾಯಕ ಪ್ರಾಧ್ಯಾಪಕರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ ಇವರು ಅಂಬೇಡ್ಕರ್ ಚಿಂತನೆಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು ಈ ಅಧಿವೇಶನದಲ್ಲಿ ಶ್ರೀ ಹಬೀಬ್ ರೆಹಮಾನ್ ಪ್ರಾಂಶುಪಾಲರು ಅಲ್ ಇಸಾನ್ ಕಾಲೇಜು ಕಾಪು ಇವರು ಅಂಬೇಡ್ಕರ್ ರವರ ವಿಚಾರಧಾರೆಗಳನ್ನು ವಿವರಿಸಿದರು. ಐದನೇ ಅಧಿವೇಶನದಲ್ಲಿ ಪ್ರೊ ಐವನ್ ಫ್ರಾನ್ಸಿಸ್ ಲೋಬೋ ಇವರು ಗಾಂಧೀಜಿಯ ತತ್ವಗಳನ್ನು ಕುರಿತಾಗಿ ವಿವರಿಸಿದರು. ಶ್ರೀ ಸುಧಾಕರ್ ಎಂ ರಾಜ್ಯಶಾಸ್ತ್ರ ಉಪನ್ಯಾಸಕರು ಸರಕಾರಿ ಪದವಿ ಪೂರ್ವ ಕಾಲೇಜು ಪೋಲಿಪು ಇವರು ಸಮಾರೋಪ ವಿಶೇಷ ಉಪನ್ಯಾಸ ನೀಡಿದರು . ಅದೇ ರೀತಿ ಇನ್ನೋರ್ವ ಅತಿಥಿಯಾದ ಶ್ರೀ ನವೀನ್ ಕೋರೆಯ ಇತಿಹಾಸ ಉಪನ್ಯಾಸಕರು ಸಂತ ಲಾರೆನ್ಸ್ ಶಿಕ್ಷಣ ಸಂಸ್ಥೆ ಮೂಡು ಬೆಳ್ಳೆ ಇವರು ಸಮಾರೋಪ ಭಾಷಣ ಮಾಡಿದರು . ವಿದ್ಯಾರ್ಥಿ ಮೊಹಮ್ಮದ್ ಜಿಯನ್ ಇವರು ಕಾರ್ಯಕ್ರಮ ನಿರೂಪಿಸಿದರು . ವಿದ್ಯಾರ್ಥಿ ಗೌರವ್ ಇವರು ಸ್ವಾಗತಿಸಿದರು .ರಾಹುಲ್ ವಂದಿಸಿದರು. ಎಲ್ಲಾ ಕಾರ್ಯಕ್ರಮಗಳ ನಿರ್ವಹಣೆ ವಿದ್ಯಾರ್ಥಿಗಳೆ ನಡೆಸಿದ್ದು ವಿಶೇಷವಾಗಿತ್ತು.

