
ತರಗತಿಯಲ್ಲಿ ವಿದ್ಯಾರ್ಥಿಯನ್ನು ನಿಂದಿಸಿದ ಅಧ್ಯಾಪಕರ ವರ್ತನೆ ತುಂಬಾ ಕಳವಳಕಾರಿ ಮತ್ತು ಈ ಘಟನೆಯನ್ನು ಖಂಡಿಸುತ್ತೇವೆ ಎಂದು ಕಾಪು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರ್ಫುಧ್ಧೀನ್ ಶೇಖ್ ತಿಳಿಸಿದರು ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಪಾಠ ಮಾಡಿ ಎಲ್ಲಾ ವಿದ್ಯಾರ್ಥಿಗಳನ್ನು ಒಂದೇ ತರ ನೋಡಿ ಒಳ್ಳೆಯ ಮಾರ್ಗದರ್ಶನವನ್ನು ನೀಡುವ ಅಧ್ಯಾಪಕರೇ ಇವತ್ತು ಒಂದು ಕೋಮಿನ ವಿದ್ಯಾರ್ಥಿಯನ್ನು ನಿಂದಿಸಿ ತಾರತಮ್ಯವನ್ನು ಮಾಡಿದ ಈ ಬೆಳವಣಿಗೆ ತುಂಬಾ ಆಘಾತಕಾರಿ ಮತ್ತು ಕಳವಳಕಾರಿ ಇಂತಹ ಅಧ್ಯಾಪಕರನ್ನು ಕೂಡಲೇ ವಜಾ ಮಾಡಬೇಕು ಮತ್ತು ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಮಕ್ಕಳ ಮಾರ್ಗದರ್ಶಕರಾದ ಅಧ್ಯಾಪಕರಲ್ಲಿ ಇಂತಹ ಮನೋಭಾವನೆ ತುಂಬಾ ಕಳವಳಕಾರಿ ಸಂಗತಿ ಈ ನಿಟ್ಟಿನಲ್ಲಿ ಈ ಘಟನೆಯನ್ನು ನಾವು ಖಂಡಿಸುತ್ತೇವೆ ಹೇಳಿದರು

