×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಎ.2ರಿಂದ ಉಡುಪಿಯಲ್ಲಿ ದುಬೈ ಮೂಲದ “ಮೊಲ್ಟೊ ಕೇರ್” ಪ್ರೊಪರ್ಟಿ ಸರ್ವೀಸ್ ಕಂಪೆನಿ ​ಪ್ರಾರಂಭ

​ಉಡುಪಿ: ದುಬೈ ಮೂಲದ ಪ್ರೊಪರ್ಟಿ ಸರ್ವೀಸ್ ಕಂಪೆನಿಯಾದ “ಮೊಲ್ಟೊ ಕೇರ್” ಉಡುಪಿಯಲ್ಲಿ ಶುಭಾರಂಭ. ಭಾರತದಲ್ಲೇ ಪ್ರಥಮವಾಗಿ ಉಡುಪಿಯಲ್ಲಿ ಎ.2ರಂದು ಕುಂಜಿಬೆಟ್ಟುವಿನಲ್ಲಿ ಕಾರ್ಯಾರಂಭಿಸಲಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಸ್ಥೆಯ ನಿರ್ದೇಶಕ ಕೃಷ್ಣರಾಜ್ ತಂತ್ರಿ ಅವರು, ಈ ಸಂಸ್ಥೆಯು ಆಸ್ತಿ ಮತ್ತು ಮನೆ, ಕಚೇರಿಯ ಎಲೆಕ್ಟ್ರಾನಿಕ್ಸ್ ವಸ್ತುಗಳ ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ. ಏರ್ ಕಂಡೀಷನಿಂಗ್, ಇಲೆಕ್ಟ್ರಿಕಲ್, ಪಬ್ಲಿಂಗ್, ಮರಕೆಲಸ, ಗಾರೆ ಕೆಲಸ ಇತ್ಯಾದಿ ಮನೆಯೊಳಗಿನ ಸೇವೆಗಳನ್ನು ಜನರಿಗೆ ನೀಡುತ್ತದೆ. ಅಲ್ಲದೇ ಮನೆಯ ಸ್ವಚ್ಚತೆ ಇತ್ಯಾದಿಗಳನ್ನು ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ನಿಗದಿತ ದರಕ್ಕೆ ​ಮಾಡಿಕೊಡಲಿದೆ ಎಂದರು‌. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಟೆಕ್ ಸಪೋರ್ಟ್ ವಿಜೇತಾ ತಂತ್ರಿ, ನಿರ್ವಹಣೆ ಇಂಜಿನಿಯರ್ ಮುರುಗನ್, ಎಸಿ ಟೆಕ್ನಿಶೀಯನ್ ರಂಜಿತ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *