×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಡುಪಿ: ಇಂದ್ರಾಳಿ ಹೆದ್ದಾರಿ ಸೇತುವೆ ಕಾಮಗಾರಿ ವಿಳಂಬ ಖಂಡಿಸಿ ತಲೆ ಬೋಳಿಸಿ, ಭಿಕ್ಷಾಟನೆ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

ಉಡುಪಿ: ಕಳೆದ ಹಲವು ವರ್ಷಗಳಿಂದ ತೀರಾ ನಿಧನಗತಿಯಲ್ಲಿ ಸಾಗುತ್ತಿರುವ ಇಂದ್ರಾಳಿಯ ರಾಷ್ಟ್ರೀಯ ಹೆದ್ದಾರಿ ರೈಲ್ವೆ ಸೇತುವೆ ಕಾಮಗಾರಿ ವಿರುದ್ಧ ಇಂದು ನಗರದಲ್ಲಿ ಜನಾಕ್ರೋಶ ಕಂಡು ಬಂತು. ಪ್ರತಿಭಟನಾಕಾರರು ನಿಧನಗತಿ ಕಾಮಗಾರಿ ವಿರುದ್ಧ ತಲೆಬೋಳಿಸಿ, ಭಿಕ್ಷಾಟನೆ ಮಾಡಿ ಮೆರವಣಿಗೆ ನಡೆಸಿದರು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಕಲ್ಸಂಕ ಜಂಕ್ಷನ್ ನಲ್ಲಿ ಭಿಕ್ಷುಕನ ವೇಷ ಧರಿಸಿದ್ಧ ಕರ್ನಾಟಕ ರಕ್ಷಣಾ ವೇದಿಕೆಯ ಅನ್ಸಾರ್ ಅಹಮದ್ ಅವರಿಗೆ ಸಾಂಕೇತಿಕವಾಗಿ ಭಿಕ್ಷೆ ನೀಡುವುದರ ಮೂಲಕ ಪ್ರತಿಭಟನಾ ಮೆರವಣೆಗೆಗೆ ಚಾಲನೆ ನೀಡಿದರು‌. ಉಡುಪಿ ನಗರ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಮೃತ್ ಶೆಣೈ ಅವರು ತಲೆ ಬೋಳಿಸಿ ಆಕ್ರೋಶ ಹೊರಹಾಕಿದರು.

Leave a Reply

Your email address will not be published. Required fields are marked *