×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಹೆಜಮಾಡಿ : ಸಮುದ್ರ ಕಿನಾರೆಯಲ್ಲಿ ಎಳ್ಳಮವಾಸ್ಯೆ ಆಚರಣೆ

ಇಂದು ಎಲ್ಲೆಡೆ ಸಮುದ್ರ ತೀರದಲ್ಲಿ ಜನರು ಭಕ್ತಿ ಶ್ರದ್ಧೆಯಿಂದ ಸಮುದ್ರ ಸ್ನಾನ ಮಾಡುವುದು ಕರಾವಳಿ ಜಿಲ್ಲೆಯ ವಾಡಿಕೆ. ಅದರಲ್ಲೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಗಡಿಪ್ರದೇಶವಾದ ಹೆಜಮಾಡಿ ಸಮುದ್ರ ಕಿನಾರೆಯಲ್ಲಿ ಇಂದು ಜಾತ್ರೆಯ ಸಂಂಭ್ರಮ. ದೂರದೂರುಗಳಿಂದ ಅಲ್ಲದೆ ಘಟ್ಟದ ಮೇಲಿನ ಜನರೂ ಇಂದು ಈ ಸ್ಥಳಕ್ಕೆ ಬೆಳಕು ಚೆಲ್ಲುವ ಮೊದಲೇ ಬಂದು ಭಕ್ತಿ ಯಿಂದ ಸಮುದ್ರ ಸ್ನಾನ ಮಾಡುತ್ತಾರೆ. ಸಂತೆ ಅಂಗಡಿಗಳು ಭರದಿಂದ ತಮ್ಮ ವ್ಯಾಪಾರ ಮಾಡುತ್ತಾರೆ. ಇದಕ್ಕೆ ಈ ಸ್ಥಳವನ್ನು ಅಮಾಸೆಕರಿಯ ಎಂದು ಸಂಭೋದಿಸುತ್ತಾರೆ. ಪ್ರತಿ ವರ್ಷ ಎಳ್ಳಮವಾಸ್ಯೆ ಆಚರಣೆ ನಮ್ಮ ರಾಜ್ಯದಲ್ಲಿ ವಿವಿಧ ರೀತಿಯಲ್ಲಿ ಆಚರಿಸುತ್ತಾರೆ. ಈ ಅಮಾವಾಸ್ಯೆ ಜ್ಯೇಷ್ಠ ಮಾಸದ ಕೊನೆಯ ಅಮಾವಾಸ್ಯೆ ಆದ್ದರಿಂದ ಬಹಳ ಮಹತ್ವ ಪೂರ್ಣ ಆಗಿದೆ. ಹಿಂದೂ ಧರ್ಮದಲ್ಲಿ ಪ್ರತಿ ತಿಂಗಳು ಬರುವ ಅಮವಾಸ್ಯೆಗೆ ವಿಶೇಷ ಮಹತ್ವವಿದೆ. ಸ್ನಾನ, ದಾನ ಮತ್ತು ಪುಣ್ಯ ಇತ್ಯಾದಿಗಳ ವಿಶೇಷ ಮಹತ್ವವನ್ನು ಈ ದಿನ ಹೇಳಲಾಗುತ್ತದೆ. ಈ ದಿನದಂದು ಪೂರ್ವಜರಿಗೆ ಪೂಜೆ ಸಲ್ಲಿಸುವುದರಿಂದ ಪೂರ್ವಜರಿಗೆ ಸಂತೃಪ್ತಿ ದೊರೆಯುತ್ತದೆ ಮತ್ತು ಅವರ ಆಶೀರ್ವಾದ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಆದರೆ ಜ್ಯೇಷ್ಠ ಮಾಸದಲ್ಲಿ ಬರುವ ಕೊನೆಯ ಅಮವಾಸ್ಯೆಗೆ ವಿಶೇಷ ಮಹತ್ವವಿದೆ. ಇದನ್ನು ಹಲವೆಡೆ ಹಲಹಾರಿಣಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ದಿನ ರೈತರು ತಮ್ಮ ಕೃಷಿ ಉಪಕರಣಗಳನ್ನು ಪೂಜಿಸುತ್ತಾರೆ. ಎಳ್ಳಮಾವಾಸ್ಯೆ ಈ ದಿನ ದವಸ ಧಾನ್ಯಗಳ ಅಭಿವೃದ್ಧಿ ಸಲುವಾಗಿ ಸಮುದ್ರ ಸ್ನಾನ ಮಾಡುವ ಸಮಯದಲ್ಲಿ ಎಳ್ಳನ್ನು ದಾನವಾಗಿ ಕೊಡುವ ಮೂಲಕ ಇದನ್ನು ಎಳ್ಳಮಾವಾಸ್ಯೆ ಎಂದು ಕರೆಯಲಾಗುತ್ತದೆ.

Leave a Reply

Your email address will not be published. Required fields are marked *