ಶುಕ್ರವಾರ ಹಾಗೂ ಶನಿವಾರ ಮೂಳೂರು ಕಡಲ ತೀರದಲ್ಲಿ ಏರ್ಮಾಳಿನ ಕೈರಂಪಣಿ ಮೀನುಗಾರಿಕೆ ಸಂದರ್ಭ ಬೃಹತ್ ಗಾತ್ರದ ತೊರಕೆ ಮೀನುಗಳು ಬಲೆಗೆ ಬಿದ್ದಿದೆ. ತಲಾ 15 ರಿಂದ 40 ಕಿಲೋ ತೂಕದ ನೂರಾರು ತೊರಕೆ ಮೀನುಗಳು ಬಲೆಗೆ ಬಿದ್ದಿದ್ದು, ಈ ತೋರಕೆ ಮೀನುಗಳು ಕಿಲೋವೊಂದಕ್ಕೆ ೨೫೦ ರೂ ನಿಂದ ೩೦೦ ರೂ ಬೆಲೆ ಬಾಳುತ್ತದೆ. ಹೇರಳವಾಗಿ ಸಿಕ್ಕ ತೊರಕೆ ಮೀನಿನಿಂದಾಗಿ ಮೊಗವೀರರ ಮುಖದಲ್ಲಿ ಮಂದಹಾಸ ಮೂಡಿದೆ.
ಈ ಮೀನನ್ನು ನೋಡಲೆಂದು ಸಾರ್ವಜನಿಕರು ತಂಡೋಪ ತಂಡವಾಗಿ ಆಗಮಿಸಿದ್ದರು.

