×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕ್ಷುಲ್ಲಕ ರಾಜಕಾರಣ ಮಾಡಿಕೊಂಡು ಕಾಲಹರಣ ಮಾಡಬೇಡಿ ಶಾಸಕರಿಗೆ ಎಚ್ಚರಿಸಿದ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್

ಕುಂದಾಪುರದ ಪ್ರಾಂಶುಪಾಲರ ಪ್ರಶಸ್ತಿ ತಡೆ ಕುರಿತಾಗಿ ಅಸಾಂವಿಧಾನಿಕ, ಅನಾಗರಿಕ ರೀತಿಯಲ್ಲಿ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಉಡುಪಿ ಶಾಸಕ ಸೇರಿದಂತೆ ಬಿಜೆಪಿ ಕಾರ್ಯಕರ್ತರ ಮೇಲೆ ಕೇಸು ದಾಖಲಾಗಿರುವುದರ ಬಗ್ಗೆ ಮೊದಲು ಶಾಸಕರು ಆತ್ಮ ವಿಮರ್ಶೆ ಮಾಡಿಕೊಳ್ಳಲಿ.
ಜ್ಞಾನದ ಬೆಳಕನ್ನು ನೀಡಿ ಉತ್ತಮ ಭವಿಷ್ಯ ರೂಪಿಸುವ ಶಿಕ್ಷಕರ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ವಿಶೇಷ ಗೌರವ, ಅತೀವ ಕಾಳಜಿ ಇದೆ.
ಶಿಕ್ಷಕರ ಮೇಲೆ ಗೌರವದ ನೆಪ ಇಟ್ಟುಕೊಂಡು ಕಾನೂನಿಗೆ ವಿರುದ್ಧವಾಗಿ ಅನಾಗರಿಕ ರೀತಿಯಲ್ಲಿ ತಮ್ಮವರು ಪ್ರತಿಭಟನ ನಡೆಯುವಾಗ ಕಾನೂನು ರೂಪಿಸುವ ರಾಜ್ಯ ಶಾಸಕಾಂಗದ ಸದಸ್ಯನಾಗಿ ಅದನ್ನು ತಡೆಯಬೇಕಿತ್ತು. ಅಂದು ಅನಾಗರಿಕ ವರ್ತನೆಯ ಪ್ರಕರಣದ ಮೂಲಕವೇ ರಾಜಕೀಯ ಪ್ರವರ್ಧಮಾನಕ್ಕೆ ಬಂದವರಿಗೆ ನೂರಾರು ಪೋಲಿಸ್ ಕೇಸ್ ಗಳೇ ಶೋಭಾಯಮಾನ ಎಂದುಕೊಳ್ಳುವುದರಲ್ಲಿ ವಿಶೇಷತೆ ಎನೂ ಇಲ್ಲ.ಆದರೆ ತಾವು ಇದೀಗ ವಿದ್ಯಾವಂತರ ನಾಡು ಎಂಬ ಅಭಿದಾನ ಪಡೆದುಕೊಂಡ ಉಡುಪಿಯ ಜನಪ್ರತಿನಿಧಿ ಎಂಬ ಪರಿಜ್ಞಾನವನ್ನು ಇಟ್ಟುಕೊಂಡು ಸರಕಾರದೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಂಡು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಉತ್ತಮ ಚಿಂತನೆ,ಪರಿಕಲ್ಪನೆಯಿಂದ ಅಭಿವೃದ್ಧಿ ಕೆಲಸಗಳು ಮತ್ತು ಉಡುಪಿಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ದೊರಕಿಸಲು ಶ್ರಮವಹಿಸುವಂತೆ ರಮೇಶ್ ಕಾಂಚನ್ ಸಲಹೆ ನೀಡಿದರು.

Leave a Reply

Your email address will not be published. Required fields are marked *