×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಪ್ರಜಾ ಪ್ರಭುತ್ವ -ಮಾನವ ಸರಪಳಿ ಕಾರ್ಯಕ್ರಮ ಯಶ್ವಸಿ ಗೆ -ಸೊರಕೆ ಮನವಿ

ದಿನಾಂಕ 15/09/2024 ನೇ ಆದಿತ್ಯವಾರ 9:30 ಗಂಟೆಗೆ ನಡೆಯುವ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ಮಾನವ ಸರಪಳಿ ಕಾರ್ಯಕ್ರಮದ ಬಗ್ಗೆ ಜಿಲ್ಲಾಡಳಿತ ಹಾಗೂ ತಾಲ್ಲೂಕ್ ಆಡಳಿತ ಸರ್ವ ಸಿದ್ಧತೆಯ ತಯಾರಿಯಲಿದ್ದು ಈ ಕಾರ್ಯಕ್ರಮವನ್ನು ಯಶ್ವಸಿಗೊಳಿಸುವ0ತೆ ಸಮಸ್ತ ಸಾರ್ವಜನಿಕರಿಗೆ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಯವರು ಮನವಿ ಮಾಡಿರುತ್ತಾರೆ.
ಈಗಾಗಲೇ ಈ ಕಾರ್ಯಕ್ರಮದ ರುಪುರೇಷೆಯ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು ಯಾವ ಗ್ರಾಮ ಪಂಚಾಯತ್ ನ ಸಾರ್ವಜನಿಕರು ಹಾಗೂ ಸಂಬಂಧ ಪಟ್ಟ ಶಿಕ್ಷಣ ಸಂಸ್ಥೆಯವರು ರಾಷ್ಟ್ರೀಯ ಹೆದ್ದಾರಿ ಯಲ್ಲಿ ಎಲ್ಲಿ ಸೇರಬೇಕೆಂಬ ಮಾಹಿತಿ ಯನ್ನು ಕೂಡ ಸಂಬಂಧ ಪಟ್ಟ ವರಿಗೆ ತಿಳಿಸಲಾಗಿದ್ದು. ಕಾರ್ಯಕ್ರಮದಲ್ಲಿ ಹಬ್ಬದ ವಾತಾವರಣ ಮಾಡಿಸಲು ಸರ್ವ ಧರ್ಮದ ಜನರ ಸಹಕಾರ ಅಗತ್ಯ ವಾಗಿರುವುದರಿಂದ ದೇವಸ್ಥಾನ, ಚರ್ಚ್, ಮಸೀದಿ ಭಾoದವರು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಿ ಅಭೂತ ಪೂರ್ವಕ ವಾಗಿ ಇಡೀ ರಾಜ್ಯ ದಲ್ಲಿ ಏಕ ಕಾಲದಲ್ಲಿ ನಡೆಯುವ ಮಾನವ ಸರಪಳಿ ಕಾರ್ಯಕ್ರಮ ಯಶ್ವಸ್ವಿ ಗೊಳಿಸುವ0ತೆ ಮತ್ತು ಒಂದು ದಿನದ ಬೆಳಿಗ್ಗೆ ಯ 9:30 ಸಮಯದಲ್ಲಿ ಬಿಡುವು ಮಾಡಿಕೊಂಡು ಈ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಿ ಜೊತೆ ಯಾಗುವoತೆ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಸಮಸ್ತ ಭಾಂದವರಲ್ಲಿ ಮನವಿ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *