×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಶಾಸಕ ಲಾಲಾಜಿ ಆರ್ ಮೆಂಡನ್ ನೇತೃತ್ವದಲ್ಲಿ : ಬೃಹತ್ ಸ್ವಚ್ಛತಾ ಕಾರ್ಯಕ್ರಮ

ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಯವರ ಆಶಯದಂತೆ ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನ ನಿಟ್ಟಿನಲ್ಲಿ ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಪ್ರತಿವರ್ಷದಂತೆ ಈ ಬಾರಿಯು ಕ್ಷೇತ್ರ ವ್ಯಾಪ್ತಿಯಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಕ್ಷೇತ್ರದ 9 ಸ್ಥಳಗಳಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮ ಹಾಗೂ ಜಾಗೃತಿ ಜಾಥಾ ಹಮ್ಮಿಕೊಂಡಿದ್ದು ಬೆಳಿಗ್ಗೆ 8.30 ಗಂಟೆಗೆ ಏಕಕಾಲದಲ್ಲಿ ಎಲ್ಲಾ ಸ್ಥಳಗಳಲ್ಲಿ ಚಾಲನೆಗೊಳ್ಳಲಿದ್ದು ಸುಮಾರು 4,000 ಮಂದಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವ ನಿರೀಕ್ಷೆಯಿದ್ದು 12.00 ಗಂಟೆ ತನಕ ಬೃಹತ್ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ನಡೆಯಲಿದೆ. ಕ್ಷೇತ್ರದ ಪ್ರಮುಖ ಕೇಂದ್ರಗಳಲ್ಲಿ ನಡೆಯಲಿದ್ದು

1. ಕಾಪು ಸ್ವಚ್ಛತಾ ಕಾರ್ಯಕ್ರಮ
ಚಾಲನೆ ಸ್ಥಳ : ಕಾಪು ಬೀಚ್ ಪ್ರದೇಶ
ಚಾಲನೆ : ಲಾಲಾಜಿ ಆರ್ ಮೆಂಡನ್, ಶಾಸಕರು, ಕಾಪು ಕ್ಷೇತ್ರ

2. ಕಟಪಾಡಿ ವ್ಯಾಪ್ತಿ
ಚಾಲನೆ ಸ್ಥಳ : SVS ಕಾಲೇಜು ಅವರಣ
ಚಾಲನೆ
ಶ್ರೀಯುತ ಶಶಿಧರ್, ಕಾರ್ಯನಿರ್ವಾಹಧಿಕಾರಿ, ಕಾಪು ತಾಲೂಕು ಪಂಚಾಯತ್
ಉಪಸ್ಥಿತಿ : ಸತ್ಯೆಂದ್ರ ಪೈ, ಸಂಚಾಲಕರು, SVS ವಿದ್ಯಾವರ್ಧಕ ಸಂಘ

3. ಪಡುಬಿದ್ರೆ ವ್ಯಾಪ್ತಿ
ಚಾಲನೆ ಸ್ಥಳ :ಪಡುಬಿದ್ರೆ ಗ್ರಾಮ ಪಂಚಾಯತ್ ಆವರಣ
ಚಾಲನೆ : ಶ್ರೀಯುತ ಪೂವಯ್ಯ, ಪೊಲೀಸ್ ವೃತ ನಿರೀಕ್ಷಕರು, ಕಾಪು ವೃತ್ತ

4. ಹಿರಿಯಡ್ಕ ವ್ಯಾಪ್ತಿ
ಚಾಲನೆ ಸ್ಥಳ : ಹಿರಿಯಡ್ಕ ಗ್ರಾಮ ಪಂಚಾಯತ್
ಚಾಲನೆ : ಉದಯ ಕುಮಾರ್ ಶೆಟ್ಟಿ, ಅಧ್ಯಕ್ಷರು ಮೈಸೂರು ಎಲೆಕ್ಟ್ರಿಕಲ್ ಲಿಮಿಟೆಡ್

5. ಕುಕ್ಕೆಹಳ್ಳಿ ವ್ಯಾಪ್ತಿ
ಚಾಲನೆ ಸ್ಥಳ ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ವಠಾರ
ಚಾಲನೆ : ಮಟ್ಟಾರು ರತ್ನಾಕರ ಹೆಗ್ಡೆ, ಅಧ್ಯಕ್ಷರು ಕರಾವಳಿ ಅಭಿವೃದ್ಧಿ ಪ್ರಾಧಿಕಾರ

6. ಉಚ್ಚಿಲ ವ್ಯಾಪ್ತಿ
ಚಾಲನೆ ಸ್ಥಳ : ಬಡಾ ಗ್ರಾಮ ಕಡಲ ತೀರ
ಚಾಲನೆ : ಸುಧಾಮ ಶೆಟ್ಟಿ, ಅಧ್ಯಕ್ಷರು ಕಾಪು ಯೋಜನಾ ಪ್ರಾಧಿಕಾರ
ಸರ್ವೋತ್ತಮ ಕುಂದರ್, ಅಧ್ಯಕ್ಷರು ಮೊಗವೀರ ಹಿತಸಾಧನ ಸಮಿತಿ

7. ಪೆರ್ಡೂರ್ ವ್ಯಾಪ್ತಿ
ಚಾಲನೆ ಸ್ಥಳ : ಅನಂತಪದ್ಮನಾಭ ದೇವಸ್ಥಾನ ವಠಾರ
ಚಾಲನೆ : ಕುಯಿಲಾಡಿ ಸುರೇಶ್ ನಾಯಕ್, ಅಧ್ಯಕ್ಷರು ಬಸ್ಸು ಮಾಲಕರ ಒಕ್ಕೂಟ, ಕರ್ನಾಟಕ

8. ಶಿರ್ವ ವ್ಯಾಪ್ತಿ
ಚಾಲನೆ ಸ್ಥಳ : ಶಿರ್ವ ಪೇಟೆ
ಚಾಲನೆ : ರಾಘವೇಂದ್ರ. ಸಿ, ಪೊಲೀಸ್ ಉಪನಿರಿಕ್ಷಕರು ಶಿರ್ವ ಠಾಣೆ

9. ಬೆಳ್ಳೆ ವ್ಯಾಪ್ತಿ
ಸ್ಥಳ : ಬೆಳ್ಳೆ ಗ್ರಾಮ ಪಂಚಾಯತ್ ವಠಾರ
ಚಾಲನೆ : ಶ್ರೀಶೈಲಾ ಮುರುಗೋಡ, ಪೊಲೀಸ್ ಉಪನಿರಿಕ್ಷಕರು, ಕಾಪು ಠಾಣೆ
ಆಯಾ ಸ್ವಚ್ಛತಾ ಕೇಂದ್ರಗಳಿಗೆ ಸಂಬಂಧಪಟ್ಟಂತೆ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರುಗಳ ಉಪಸ್ಥಿತಿಯಲ್ಲಿ, ಗ್ರಾಮ ಪಂಚಾಯತ್ ಆಡಳಿತ ವರ್ಗ ಹಾಗೂ ವಿವಿಧ ಇಲಾಖೆಗಳ ಸಹಕಾರದೊಂದಿಗೆ ನಡೆಯಲಿದ್ದು ಕಾರ್ಯಕ್ರಮಕ್ಕೆ ಸ್ವಯಂ ಸೇವಾ ಸಂಘ – ಸಂಸ್ಥೆಯವರು, ಎಲ್ಲಾ ಸ್ಥಳೀಯ ಜನಪ್ರತಿನಿದಿಗಳು, ಗ್ರಾಮ ಪಂಚಾಯತ್ ಸದಸ್ಯರು, ಸ್ಥಳೀಯ ಮುಖಂಡರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮಾನ್ಯ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಕ್ಷೇತ್ರದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ ಎಂದು ಕಾಪು ಶಾಸಕರ ಕಚೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *