ಕಾಪು ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಉಡುಪಿ ವಲಯದ ಹಿಂದಿ ಶಿಕ್ಷಕರಿಗೆ ಎಸ್.ಎಸ್. ಎಲ್. ಸಿ. ಪರೀಕ್ಷೆಯ ಬಗ್ಗೆ ಮಾರ್ಗದರ್ಶನ ಕಾರ್ಯಾಗಾರವು ಇತ್ತೀಚೆಗೆ ನಡೆಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಡಾ ll ಯಲ್ಲಮ್ಮ ಇವರು,ಉಡುಪಿ ಜಿಲ್ಲೆಯು ಶೈಕ್ಷಣಿಕವಾಗಿ ಮುಂದಿದ್ದು ರಾಜ್ಯದಲ್ಲಿ ಅತ್ಯುತ್ತಮ ಫಲಿತಾಂಶ ನೀಡುತ್ತಾ ಬಂದಿದೆ.ವಿದ್ಯಾರ್ಥಿಯು ತೇರ್ಗಡೆಯಾಗಬೇಕಾದರೆ ಎಲ್ಲಾ ವಿಷಯಗಳಲ್ಲಿ ಪೂರ್ವ ತಯಾರಿಯನ್ನು ಮಾಡಬೇಕಾಗಿದೆ ,ಅದಕ್ಕಾಗಿ ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಕ್ರಿಯಾಶೀಲವಾಗಿ ನಿರ್ವಹಿಸಬೇಕು ಹಾಗೂ ಫಲಿತಾಂಶವನ್ನು ಉತ್ತಮ ಪಡಿಸಲು ಮಕ್ಕಳಿಗೆ ಪ್ರೇರಣೆಯನ್ನು ನೀಡಬೇಕೆಂದು ಹೇಳಿದರು.
ಡಯಟ್ ನ ಉಪನ್ಯಾಸಕರಾಗಿರುವ ಯೋಗ ನರಸಿಂಹ ಸ್ವಾಮಿ ಯವರು ಭಾಗವಹಿಸಿ ಶಿಕ್ಷಕರಿಗೆ ಮಾರ್ಗದರ್ಶನ ಮಾಡಿದರು.
ಕಾರ್ಯಾಗಾರದಲ್ಲಿ ವಿದ್ಯಾಸಂಸ್ಥೆಯ ಪ್ರಾಂಶುಪಾಲ ನೀಲಾನಂದ ನಾಯ್ಕ್, ಉಡುಪಿ ವಲಯ ಶಿಕ್ಷಣ ಸಂಯೋಜಕ ಪುರುಷೋತ್ತಮ ಇವರು ಉಪಸ್ಥಿತರಿದ್ದರು.ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕರುಗಳಾದ ಪಡುಬಿದ್ರಿ ಕೆ. ಪಿ. ಎಸ್. ಪ್ರೌಢಶಾಲೆಯ ಮೊಯ್ದಿನಬ್ಬ,ಹಿರಿಯಡ್ಕ ಪ್ರೌಢಶಾಲೆಯ ರವೀಂದ್ರ ಕುಮಾರ್,ದಂಡತೀರ್ಥ ವಿದ್ಯಾಸಂಸ್ಥೆಯ ಶಿವಣ್ಣ ಬಾಯರ್ ಇವರು ಕಾರ್ಯಾಗಾರವನ್ನು ನಡೆಸಿಕೊಟ್ಟರು.

