×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಬೆಳೆ ್ಳ/ಕಟ್ಟಿಗೇರಿ ನವೋದಯ ಒಕ್ಕೂಟದಿಂದ ಆಟಿದ ಲೇಸ್ ಮತ್ತು ಸನ್ಮಾನ

ವರ್ಷಂಪ್ರತಿಯಂತೆ ಬೆಳ್ಳಿ/ಕಟ್ಟಿಗೇರಿ ನವೋದಯ ಒಕ್ಕೂಟದಿಂದ ಈ ಬಾರಿಯೂ ಆಟಿದ ಲೇಸ್‌ನ್ನು ವೈಭವಪೂರ್ವಕವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಎಸ್. ಎಂ. ಆರ್. ಎಸ್. ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಯಶೋದಾ ಇವರು ಆಗಮಿಸಿ  ರ್ಯಕ್ರಮವನ್ನು ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ಕೂಟದ ಅಧ್ಯಕ್ಷರಾಗಿರುವ ಶ್ರೀ ಹರೀಶ್ಚಂದ್ರ ಆಚಾರ್ಯ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ಳಿ ಸಿ.ಎ. ಬ್ಯಾಂಕ್‌ನ ಅಧ್ಯಕ್ಷರಾಗಿರುವ ಶ್ರೀ ಶಿವಾಜಿ ಎಸ್ ಸುವರ್ಣ ಇವರು ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ಸಬಲೀಕಣದಲ್ಲಿ ನವೋದಯ ಸಂಘಗಳ ಪಾತ್ರ ಮತ್ತು ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದ ಉದ್ಘಾಟಕರಾಗಿದ್ದ ಶ್ರೀಮತಿ ಯಶೋಧಾರವರು ಮಾತನಾಡಿ ಹಿಂದಿನ ಕಾಲದಲ್ಲಿ ಆಟಿ ತಿಂಗಳ ಹಳ್ಳಿ ಜನರ ಜನಜೀವನದ ಬಗ್ಗೆ ಮತ್ತು ತಿಂಡಿತಿನಸು ಮತ್ತು ಆಹಾರ ಕ್ರಮಗಳ ಬಗ್ಗೆ ವಿವರಿಸಿದರು. ಕರ್ನಾಟಕ ಜಾನಪದ ಅಕಾಡಮಿಯ ಪ್ರಶಸ್ತಿ ವಿಜೇತೆ ಶ್ರೀಮತಿ ಅಪ್ಪಿ ಕೃಷ್ಣ ಪಾನರ ಹಾಗೂ ಕಾರ್ಯಕ್ರಮದ ಉದ್ಘಾಟಕರಾದ ಶ್ರೀಮತಿ ಯಶೋದ ಇವರನ್ನು ಗೌರವಿಸಿ ಸನ್ನನಿಸಲಾಯಿತು. ಒಕ್ಕೂಟದ ಸುಮಾರು 50 ಸಂಘಗಳಿಂದ ಸುಮಾರು 30 ರಿಂದ 35 ಬಗೆಯ ಖಾದ್ಯಗಳನ್ನು ತಯಾರಿಸಿ ಸುಮಾರು 200 ಜನ ಸದಸ್ಯರಿಗೆ ಊಟ ಬಡಿಸಿದರು. ವೇದಿಕೆಯಲ್ಲಿ ಒಕ್ಕೂಟದ ಕಾರ್ಯದರ್ಶಿ ರಂಜನಿ ಹೆಗ್ಡೆ, ಉಪಾಧ್ಯಕ್ಷ ಹೆಲೆನ್ ಡಿಸೋಜ, ಕೋಶಾಧಿಕಾರಿ ಅಂಬಿಕಾ ಎಸ್ ಸುವರ್ಣ ಮತ್ತಿತರರು ಹಾಜರಿದ್ದರು. ಎಡೋರು ಸಾರ್ಥಕ ನವೋದಯ ಸಂಘದವರು ಕಾರ್ಯಕ್ರಮದ ಜವಾಬ್ದಾರಿ ವಹಿಸಿದ್ದರು. ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಸುಜಾತಾ ಎಸ್. ಸುವರ್ಣರವರು ಸುಂದರವಾಗಿ ಕಾರ್ಯಕ್ರಮವನ್ನು ನಿರೂಪಿಸಿದರು. ನವೋದಯ ಸಂಘಗಳ ಪ್ರೇರಕಿ ಗೀತಾರವರು ಸರ್ವರನ್ನು ವಂದಿಸಿದರು.

Leave a Reply

Your email address will not be published. Required fields are marked *