×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉದ್ಯಮ ನಡೆಸುವುದು ಈಗಿನ ಕಾಲದಲ್ಲಿ ಸವಾಲಾಗಿದೆ- ನಂದಿಕೂರಿನಲ್ಲಿ ಮಾಜಿ ಶಾಸಕ ಜೆಆರ್ ಲೋಬೊ.

: ಈಗಿನ ಕಾಲದಲ್ಲಿ ಉದ್ಯಮ ನಡೆಸುವುದು ಸವಾಲಾಗಿ ಪರಿಣಮಿಸಿದೆ ಎಂದು ಮಂಗಳೂರಿನ ಮಾಜಿ ಶಾಸಕ ಜಾನ್ ರಿಚರ್ಡ್ ಲೋಬೊ ಹೇಳಿದ್ದಾರೆ. ಅವರು ಬುಧವಾರ ಬೆಳಗ್ಗೆ ನಂದಿಕೂರಿನ ಔದ್ಯೋಗಿಕ ನಗರದಲ್ಲಿ ಅಲಂಕಾರ ಸ್ಟ್ರೀಮ್ಸ್ ಸಂಸ್ಥೆಗೆ ಆರ್ಬ್ ಎನರ್ಜಿ ಸಂಸ್ಥೆ ಅಳವಡಿಸಿದ ಸೋಲಾರ್ ಘಟಕ ಉದ್ಘಾಟಿಸಿ ಮಾತನಾಡಿದರು. ಇಂದಿನ ಬೆಲೆ ಏರಿಕೆಯಿಂದಾಗಿ ಉದ್ಯಮ ನಡೆಸುವುದು ಅತ್ಯಂತ ತ್ರಾಸದಾಯಕವಾಗಿದೆ. ಕಚ್ಚಾ ಸಾಮಗ್ರಿ ಬೆಲೆ ಗಗನಕ್ಕೆ ಏರಿದೆ. ಎಲ್ಲರೂ ಸಹಕಾರ ಮನೋಭಾವದಿಂದ ಕೈಜೋಡಿಸಿದರೆ, ಉದ್ಯಮ ಯಶ ಗಳಿಸಲು ಸಾಧ್ಯ ಎಂದರು. ಈ ಸಂದರ್ಭ ಅಲಂಕಾರ್ ಸ್ಟ್ರೀಮ್ಸ್ ಸಂಸ್ಥೆಯ ಮಾಲಕ ಸಿಎಚ್ ಫಿರ್ಕಾಡೋ, ನಿರ್ದೇಶಕರಾದ ಎಂಜಲೋ ಫಿರ್ಕಾಡೊ, ಏಸ್ ಫಿರ್ಕಾಡೋ, ಅರ್ಬ್ ಎನರ್ಜಿಯ ಉಪಾಧ್ಯಕ್ಷ ಸುಧೀಂದ್ರ ಟಿ , ಮೆನೇಜರ್ ವಿನಾಯಕ್ ನಾಯಕ್, ಎ ಜಿ ಎಮ್ ವಿಕಾಸ್ ಮತ್ತಿತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *