
ತುಳುನಾಡಿನ ಧಾರ್ಮಿಕ ಆಚರಣೆಗಳ ಹಿನ್ನೆಲೆಯಿರುವ ೨೭ನೇ ವರ್ಷದ ಐತಿಹಾಸಿಕ ಶಿರ್ವ ನಡಿಬೆಟ್ಟು ಸೂರ್ಯ-ಚಂದ್ರ ಸಂಪ್ರದಾಯಬದ್ಧ ಜೋಡುಕರೆ ಕಂಬಳವು ಮಂಗಳವಾರ ನಡಿಬೆಟ್ಟು ಕಂಬಳ ಗದ್ದೆಯಲ್ಲಿ ನಡೆಯಿತು.ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಎಲ್ಲೂರುಗುತ್ತು ಪ್ರಫುಲ್ಲ ಶೆಟ್ಟಿ ದೀಪ ಬೆಳಗಿಸಿ ಜೋಡುಕರೆಗೆ ಕಾಯಿ ಒಡೆಯುವುದರ ಮೂಲಕ ಕಂಬಳವನ್ನು ಉದ್ಘಾಟಿಸಿದರು.
ಶಿರ್ವ ನಡಿಬೆಟ್ಟು ಕಂಬಳವು ನಡಿಬೆಟ್ಟು ಚಾವಡಿಯ ದೈವ ಜುಮಾದಿಗೆ ಪೂಜೆ ಪುರಸ್ಕಾರ ನಡೆದ ಬಳಿಕ ಬಂಟ ಕೋಲ ನಡೆದು ಮೆರವಣಿಗೆಯಲ್ಲಿ ಕೊಂಬು,ವಾದ್ಯಘೋಷಗಳೊAದಿಗೆ ಮನೆಯ ಕೋಣಗಳನ್ನು ಗದ್ದೆಗಿಳಿಸಲಾಯಿತು. ಮನೆತನದ ಕೋಣಗಳನ್ನು ಗದ್ದೆಗಿಳಿಸಿ ಓಡಿಸುವುದರೊಂದಿಗೆ ಸಾಂಪ್ರದಾಯಿಕ ಜೋಡುಕರೆ ಕಂಬಳ ಸಂಪನ್ನಗೊAಡಿತು. ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪಾಧಿಕಾರದ ಮಾಜಿ ಅಧÀ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಶಿರ್ವ ಗ್ರಾ.ಪಂ. ಅಧ್ಯಕ್ಷ ರತನ್ ಕುಮಾರ್ ಶೆಟ್ಟಿ, ಮಾಜಿ ಅ`À್ಯಕ್ಷ ಕೆ.ಆರ್. ಪಾಟ್ಕರ್, ಪಿಲಾರು ಸುಧಾಕರ ಭಂಡ್ರಿಯಾಲ್, ಅಟ್ಟಿಂಜ ಶಂಭು ಶೆಟ್ಟಿ , ಸಚ್ಚಿದಾನಂದ ಹೆಗ್ಡೆ, ಸುಂದರ ಶೆಟ್ಟಿ, ಕಾನಬೆಟ್ಟು ಬಡ್ಡು ಪೂಜಾರಿ, ಗ್ರಾ.ಪಂ. ಸದಸ್ಯ ಪ್ರವೀಣ್ ಸಾಲಿಯಾನ್, ರಾಜೇಶ್ ನಾಯ್ಕ್,ವಿಟ್ಠಲ ಅಂಚನ್,ತಮ್ಮಣ್ಣ ಪೂಜಾರಿ, ರತ್ನವರ್ಮ ಹೆಗ್ಡೆ, ರಘುರಾಮ ನಾಯ್ಕ್, ಮೊದಲಾದವರು ಉಪಸ್ಥಿತರಿದ್ದರು. ಶಿರ್ವ ನಡಿಬೆಟ್ಟು ಮನೆತನದ ಯಜಮಾನ ದಾಮೋದರ ಚೌಟ ಅವರ ಮುಂದಾಳುತ್ವದಲ್ಲಿ ವ್ಯವಸ್ಥಾಪಕ ಶಿರ್ವ ನಡಿಬೆಟ್ಟು ಶಶೀಧರ ಹೆಗ್ಡೆಯವರು ಊರವರ ಸಹಕಾರದೊಂದಿಗೆ ಕಂಬಳ ನಡೆಸಿಕೊಂಡು ಬರುತ್ತಿದ್ದು, ಮದ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಕನ್ನಡ ಸಂಸ್ಕçತಿ ಇಲಾಖೆಯ ರಮೇಶ್‌ದೇವಾಡಿಗ, ಮುತ್ತುರಾಜ್, ಶಿರ್ವ ಠಾಣಾಽಕಾರಿ ರಾಘವೇಂದ್ರ ಸಿ., ಶಿರ್ವ ಗ್ರಾ.ಪಂ. ಅಧ್ಯಕ್ಷ ರತನ್ ಕುಮಾರ್ ಶೆಟ್ಟಿ, ಪೊಲೀಸ್ ಇಲಾಖೆಯ ಶಶಿಧÀರ್ ಎರಡೂ ವಿಭಾಗಗಳಲ್ಲಿ ಗೆದ್ದ ಕೋಣಗಳ ಮಾಲಕರಿಗೆ ಮತ್ತು ಕೋಣ ಓಡಿಸಿದವರಿಗೆ ಶಾಶ್ವತ ಫಲಕ ಸಹಿತ ನಗದು ಬಹುಮಾನ ನೀಡಿ ಗೌರವಿಸಿದರು. ಹಿರಿಯರಾದ ಶಿರ್ವ ನಡಿಬೆಟ್ಟು ಸುರೇಂದ್ರ ಹೆಗ್ದೆ, ಕಿಶೋರ್‌ಚಂದ್ರ ಹೆಗ್ಡೆ, ಚಂದ್ರಶೇಖರ ಹೆಗ್ಡೆ , ಅಟ್ಟಿಂಜೆ ಸುಧೀರ್ ಶೆಟ್ಟಿ, ಪ್ರದೀಪ್ ಶೆಟ್ಟಿ, ಕುತ್ಯಾರು ಸಾಯಿನಾಥ ಶೆಟ್ಟಿ, ಶಿಕ್ಷಕ ರಿತೇಶ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತÀರಿದ್ದರು. ಸುರೇಂದ್ರ ಪೂಜಾರಿ ಕೊಪ್ಪಲ ನಿರೂಪಿಸಿ, ವಂದಿಸಿದರು. ವೀರೇಂದ್ರ ಪೂಜಾರಿ ಸಹಕರಿಸಿದರು.
video link subscribe

