×
Our website is made possible by displaying online advertisements to our visitors. Please consider supporting us by whitelisting our website.
  • 9880645340

“ಹೊೖಗೆ ಫ್ರೆಂಡ್ಸ್ ಹೊೖಗೆ (ರಿ) ಪಲಿಮಾರು” ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗೆ ಉರಗ ತಜ್ಞ ಶ್ರೀ ಗುರುರಾಜ್ ಸನಿಲ್ಇವರಿಂದ, ‘ಹಾವು ನಾವು ಮತ್ತು ಪರಿಸರ’ ಕಾರ್ಯಕ್ರಮ

ಹೊೖಗೆ ಫ್ರೆಂಡ್ಸ್ ಹೊೖಗೆ (ರಿ) ಪಲಿಮಾರು” ಸಂಸ್ಥೆಯ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ, ಖ್ಯಾತ ಉರಗ ತಜ್ಞ ಶ್ರೀ ಗುರುರಾಜ್ ಸನಿಲ್ ಉಡುಪಿ ಇವರಿಂದ, ‘ಹಾವು ನಾವು ಮತ್ತು ಪರಿಸರ’ ಎಂಬ ವಿಷಯದ ಕುರಿತು ಜಾಗ್ರತಿ ಮೂಡಿಸುವ ಪ್ರಾತ್ಯಕ್ಷಿಕೆ ಸಮೇತದ ಕಾರ್ಯಕ್ರಮ ನಡೆಯಿತು. ಜೀವಂತ ಹಾವುಗಳನ್ನು ತಂದು,ಅವುಗಳ ಪರಿಚಯವನ್ನು ಮಾಡಿಸಿದರು. ಹಾವುಗಳು ಕಾರಣವಿಲ್ಲದೆ ಯಾರಿಗೂ ಕಚ್ಚುವುದಿಲ್ಲ ವಿದ್ಯಾರ್ಥಿಗಳು ಹಾವುಗಳನ್ನು ಕಂಡು ಭಯಪಡಬೇಕಾಗಿಲ್ಲ ಎಂಬುದಾಗಿ, ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಗ್ರೆಟ್ಟಾ ಮೊರಾಸ್ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಪಲಿಮಾರ್ ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಶ್ರೀಮತಿ ಗಾಯತ್ರಿ ಡಿ ಪ್ರಭು , ಉಪಾಧ್ಯಕ್ಷರಾದ ಶ್ರೀಮತಿ ಸೌಮ್ಯಲತ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಪ್ರಸಾದ್ ಪಲಿಮಾರ್ , ಹೊೖಗೆ ಫ್ರೆಂಡ್ಸ್ ಅಧ್ಯಕ್ಷರಾದ ರಾಘವೇಂದ್ರ ಜೆ ಸುವರ್ಣ , ಉಪಾಧ್ಯಕ್ಷ ರಿತೇಶ್ ದೇವಾಡಿಗ , ಪಂಚಾಯತ್ ಸದಸ್ಯರಾದ ಸುಮಂಗಳ ದೇವಾಡಿಗ, ರಾಯೆಶ್ವರ ಪೈ , ಸುಜಾತಾ ,ಪ್ರೌಢಶಾಲಾ ವಿಭಾಗದ ಹಿರಿಯ ಸಹಶಿಕ್ಶಕಿ ಶ್ರೀಮತಿ ಸುನಿತಾ ,ಟೆರಾಕೋಟ ಕಲಾವಿದ ವೆಂಕಿ ಪಲಿಮಾರ್ ಉಪಸ್ಥಿತರಿದ್ದರು. ……. ಉಪನ್ಯಾಸಕಿ ವಿಜಯಲಕ್ಷ್ಮಿಸ್ವಾಗತಿಸಿ, ಹಿರಿಯ ಸಹಶಿಕ್ಷಕಿ ಸುನಿತಾ ಧನ್ಯವಾದಗಳನ್ನು ಅರ್ಪಿಸಿದರು.ಸಹಶಿಕ್ಷಕಿ ರಶ್ಮಿತಾ ಕಾರ್ಯಕ್ರಮ ನಿರೂಪಿಸಿದರು  

video link

https://youtu.be/_ifFUbeVD18

Leave a Reply

Your email address will not be published. Required fields are marked *