×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಹಾವಂಜೆಯಲ್ಲಿ ರೋಸ್ ಸಮಾರಂಭದಲ್ಲಿ ಕುಸಿದುಬಿದ್ದು ಚಿಕಿತ್ಸೆ ಫಲಿಸದೆ ಯುವತಿ ಸಾವು

ರೋಸ್ ಸಮಾರಂಭದಲ್ಲಿ ಕುಸಿದುಬಿದ್ದು ಅಸ್ವಸ್ಥಗೊಂಡಿದ್ದ ಯುವತಿಯೋರ್ವಳು ಚಿಕಿತ್ಸೆ ಫಲಿಸದೆ ಗುರುವಾರ ಬೆಳಿಗ್ಗೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಮೃತ ಯುವತಿಯನ್ನು ಹಾವಂಜೆ ನಿವಾಸಿ 23ವರ್ಷದ ಜೋಸ್ನಾ ಲೂಯಿಸ್ ಎಂದು ಗುರುತಿಸಲಾಗಿದೆ. ಇವರು ನಿನ್ನೆ ರಾತ್ರಿ ಕೊಳಲಗಿರಿ ಹಾವಂಜೆಯ ಸಂಬಂಧಿಕರ ಮನೆಯಲ್ಲಿ ನಡೆದ ರೋಸ್ ಸಮಾರಂಭಕ್ಕೆ ತೆರಳಿದ್ದರು. ಅಲ್ಲಿ 8.30ರ ಸುಮಾರಿಗೆ ಏಕಾಏಕಿಯಾಗಿ ರಕ್ತದ ಒತ್ತಡ ಕಡಿಮೆಯಾದ ಪರಿಣಾಮ ಜೋಸ್ನಾ ಅವರು ಅಲ್ಲೆ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಜೋಸ್ನಾ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *