×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕರಾವಳಿ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ ಲಿ. ವಾರ್ಷಿಕ ಮಹಾಸಭೆ ಶೇ 15% ಡಿವಿಡೆಂಡ್

ಕಲ್ಯಾಣಪುರ-ಸಂತೆಕಟ್ಟೆ ಕರಾವಳಿ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ ಲಿ ಇದರ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 21 ರಂದು ರೂಫ್‌ ಟಾಪ್ ಹಾಲ್ ಹೋಟೆಲ್ ಬೃಂದಾವನ ಸಂತೆಕಟ್ಟೆಯಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಉಮೇಶ್ ಶೆಟ್ಟಿ ಅವರು ಮಾತನಾಡಿ ನಿರಾಂತವಾಗಿ 15 / ಡಿವಿಡೆಂಡ್ ನೀಡುತ್ತಿದ್ದು ಸಹಕಾರ ಸಂಘಗಳ ಗ್ರಾಹಕ ಸ್ನೇಹಿ ಸೇವೆಯಿಂದ ಜನರು ಸಹಕಾರ ಸಂಘಗಳ ಕಡೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ..ಸಂಸ್ಥೆಯು ಸದೃಢವಾಗಿ ಮುನ್ನೆಡೆಯುತ್ತಿದೆ ನಿಮ್ಮ ಠೇವಣಿ ಯನ್ನು ಒಬ್ಬ ಕಾವಲು ಗಾರನನಂತೆ ಕಾಯುವ ಕೆಲಸ ಒಬ್ಬ ಅಧ್ಯಕ್ಷ ನಾಗಿ ಮತ್ತು ನಿರ್ದೇಶಕರಾಗಿ ನಮ್ಮ ಕೆಲಸ ಎಂದು ಭಾವಿಸಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತೇನೆ ಕರಾವಳಿ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ ತ್ವರಿತ ಸಾಲ ಮಂಜುರಾತಿ,ಮತ್ತು ಇತರ ಉತ್ತಮ ಸೇವೆಯಿಂದ ಸಂಘದ ವ್ಯವಹಾರ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು ಸಂಘವು ಲಾಭದಲ್ಲಿ ಮುನ್ನಡೆಯುತ್ತಿದೆ. ಈ ಬಾರಿ ಸಂಘದ ಸದಸ್ಯರಿಗೆ ಶೇ 15/ ಡಿವಿಡೆಂಡ್ ಹಂಚಿಕೆ ನೀಡಲಾಗಿದೆ. ಎಂದರು.ಡೆಪೋಸಿಟ್ 67 ಕೋಟಿ ಸಂಘದ ಒಟ್ಟು ಸದಸ್ಯರು 15044 ವಾರ್ಷಿಕ ವಹಿವಾಟು 288 ಕೋಟಿ ನಿವ್ವಳ ಲಾಭ 1 ಕೋಟಿ 12 ಲಕ್ಷ ಜಯಕರ ಶೆಟ್ಟಿ ಮಾತನಾಡಿ ನಾನು ಇದರ ಸದಸ್ಯನಾಗಿದ್ದೇನೆ ಆರ್ಥಿಕವಾಗಿ ಉತ್ತಮ ವ್ಯವಹಾರ ಮಾಡುದರೊಂದಿಗೆ ಸಾಲ ಕೊಡುದುವುದು ಮುಖ್ಯ ವಲ್ಲ ಬದಲಾಗಿ ಸಾಮಾಜಿಕ ಕಳಕಳಿ ಚಿಂತನೆ ಇಟ್ಟು ಕೊಂಡು ಸಂಸ್ಥೆಯು ಸಮಾಜ ಮುಖಿ ಕೆಲಸ ಮಾಡಿಕೊಂಡು ಬರುತ್ತಿದೆ ಎಂದು ಸಂಸ್ಥೆಗೆ ಶುಭಕೋರಿದರು

ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ೨೦ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು

ಸಂಘದ ಉಪಾಧ್ಯಕ್ಷೆ ಉದಯ್ ಶೆಟ್ಟಿ ನಿರ್ದೇಶಕರುಗಳಾದ ಉದಯ್ ಕುಮಾರ್ ಶೆಟ್ಟಿ ಚಿನ್ಮಯ ಮೂರ್ತಿ ಪ್ರವೀಣ್ ಕುಂದರ್ ಪುರುಷೋತ್ತಮ ರಾವ್ ಪ್ರಕಾಶ್ ಎಂ ಬಂಗೇರ ಪ್ರಶಾಂತ್ ಕುಮಾರ್ ಸಂತೋಷ್ ಪೂಜಾರಿ ಸಂಜೀವ ನಾಗೇಂದ್ರ ಯು ಪುಷ್ಪ ಶಶಿಧರ್ ದಿವ್ಯ ಪೂಜಾರಿ ಉಪಸ್ಥಿತರಿದ್ದರು. ಸಂಘದ ಕಾರ್ಯನಿರ್ವಹಣಾಧಿಕಾರಿ ನಂದಾಕಿಶೋರ್ ವಾರ್ಷಿಕ ವರದಿ ಮಂಡಿಸಿದ ರುಉದಯ್ ಕುಮಾರ್ ಶೆಟ್ಟಿ ಸ್ವಾಗತಿಸಿದರು ನಿರೂಪಣೆ ಪ್ರಶಾಂತ್ ಕುಮಾರ್ .ಪ್ರವೀಣ್ ಕುಂದರ್ ವಂದಿಸಿದರು

Leave a Reply

Your email address will not be published. Required fields are marked *