×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಟಪಾಡಿ : ತ್ರೀಶಾ ಸಮೂಹ ಸಂಸ್ಥೆ ಯಿಂದ ವಿದ್ಯಾರ್ಥಿಗಳಿಗೆ ಸಂಸ್ಕ್ರತಿ ಹೆಸರಿನ ಸುಸಜ್ಜಿತ ವಿದ್ಯಾರ್ಥಿನಿ ನಿಲಯ ಉದ್ಘಾಟನೆ

ತ್ರೀಶಾ ಸಮೂಹ ಸಂಸ್ಥೆ ಯಿಂದ ವಿದ್ಯಾರ್ಥಿಗಳಿಗೆ ಅನುಕೂಲ ವಾಗುವ ದ್ರಷ್ಟಿಯಿಂದ ಸಂಸ್ಕ್ರತಿ ಹೆಸರಿನ ಸುಸಜ್ಜಿತ ವಿದ್ಯಾರ್ಥಿನಿ ನಿಲಯ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ಮದ್ ವಿದ್ಯಾಧೀಶ ತೀರ್ಥ ವಡೇರ ಸ್ವಾಮೀಜಿಯವರ ದಿವ್ಯ ಕರಕಮಲಗಳಿಂದ ಉದ್ಘಾಟನೆ ಗೊಳ್ಳಲಿದೆ ಎಂದು ತ್ರೀಶಾ ವಿದ್ಯಾಕಾಲೇಜಿನ ಪ್ರಾಂಶುಪಾಲ ಪ್ರೊಫೆಸರ್ ಗುರುಪ್ರಸಾದ್ ರಾವ್ ಮಾಹಿತಿ ನೀಡಿದರು. ಅವರು ಕಾಪು ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ವೃತ್ರೀಪರ ಶಿಕ್ಷಣಕ್ಕೆ ಹೊಸ ಆಯಾಮವನ್ನು ನೀಡಿ, ವಿದ್ಯಾರ್ಥಿಗಳಿಗೆ ಸಮರ್ಥವಾಗಿ ಶಿಕ್ಷಣ ನೀಡುತ್ತ ಬಂದಿರುವ ಸಂಸ್ಥೆ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ತ್ರೀಶಾ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ತನ್ನ ಅಂಗ ಸಂಸ್ಥೆಗಳನ್ನು ವೃದ್ಧಿಸಿಕೊಂಡು, 2010 ರಂದು ಕd ಸರಕಾರದ ಮಾನ್ಯತೆಯೊಂದಿಗೆ, ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಗೆ ಒಳಪಟ್ಟು ಪದವಿ ಕಾಲೇಜಿಗಿ ಮಾರ್ಪಡು ಹೊಂದಿ ಗುಣಮಟ್ಟದ ಶಿಕ್ಷಣದ ಹಿರಿಮೆಯೊಂದಿಗೆ ಕಟಪಾಡಿಯಲ್ಲಿ ಕಾರ್ಯಚರಿಸುತ್ತಿದೆ. ಇಲ್ಲಿ ನವ ವ್ಯಾಸಂಗದೊಂದಿಗೆ ಜೀವನ ಕೌಶಲಗಳು, ನೈತಿಕ ಶಿಕ್ಷಣ, ಸಾಮಾಜಿಕ ಬದ್ಧತೆ, ಶಿಸ್ತುಬದ್ಧ ಜೀವನ ಶೈಲಿ, ಏಕತೆ, ಐಕ್ಯತೆಯ ಮಹತ್ವ, ದೇಶಪ್ರೇಮವನ್ನೂ ಉದ್ದೀಪನಗೊಳಿಸುವ ಕಾರ್ಯಕ್ರಮಗಳೊಂದಿಗೆ ಪದವಿ ಶಿಕ್ಷಣ ನೀಡಿ ಬದುಕನ್ನು ಸಮರ್ಥವಾಗಿ ರಚಿಸಿ ಕೊಳ್ಳುವ ಶಿಕ್ಷಣವನ್ನು ನೀಡುತ್ತಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಅನುಕ ಲತೆಯ ದೃಷ್ಟಿಯಿಂದ ಕಾಲೇಜಿನ ವಿಸ್ಕೃತ ನೂತನ ಮಹಡಿ ಮತ್ತು “ಸಂಸ್ಕೃತಿ” ಎನ್ನುವ ಹೆಸರಿನ ಸುಸಜ್ಜಿತ ವಿದ್ಯಾರ್ಥಿನಿ ನಿಲಯವನ್ನು ಉದ್ಘಾಟಿಸಲು ಸಮಾರಂಭ ಒಂದನ್ನು ಆಯೋಜಿಸಿದ್ದು, ಉದ್ಘಾಟನೆಯನ್ನು, ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೊತ್ತಮ ಮಠಾಧೀಶರು ಶು ಆಶೀರ್ವಚಿಸಲಿರುವರು. ನವೆಂಬರ್ ೨೦ ರಂದು ಪೂರ್ವಾಹ್ನ ೧೧ ಗಂಟೆ ಗೆ ಕಟಪಾಡಿ ಎಸ್.ವಿ.ಎಸ್ ಸಭಾಂಗಣದಲ್ಲಿ ಜರಗುವ ಈ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ನಿಟ್ಟೆ ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ವಿನಯ್ ಹೆಗ್ಡೆಯವರೂ ಮತ್ತು ಎಸ್. ಬಿ. ಎಸ್. ವಿದ್ಯಾವರ್ಧಕ ಸಂಘದ ಸಂಚಾಲಕರಾದ ಕೆ. ಸತ್ಯೇಂದ್ರ ಪೈ ಯವರು ಭಾಗವಹಿಸಲಿರುವರು. ಸಭಾಧ್ಯಕ್ಷತೆಯನ್ನು ಶ್ರೀಶ ಸಮೂಹ ಸಂಸ್ಥೆಗಳ ಅಧ್ಯಕ್ಷ ಸಿ.ಎ. ಗೋಪಾಲಕೃಷ್ಣ ಭಟ್ ವಹಿಸಲಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ತ್ರಿಶಾ ವಿದ್ಯಾ ಕಾಲೇಜಿನ ಆಡಳಿತ ಟ್ರಸ್ಟಿ ಶ್ರೀ ರಾಮ್ ಪ್ರಭು, ಪ್ರಾಂಶುಪಾಲ ಪ್ರೊ. ಗುರುಪ್ರಸಾದ್ ರಾವ್, ಎಸ್ ಬಿ ಎಸ್ ವಿದ್ಯಾವರ್ಧಕ ಸಂಘದ ಸಂಚಾಲಕ ಶ್ರೀ ಸತ್ಯೇಂದ್ರ ಪೈ, ಆಡಳಿತಾಧಿಕಾರಿ ಶ್ರೀ ವಿ. ಕೆ. ಉದ್ಯಾವರ ಮತ್ತು ಪ್ರಾಧ್ಯಾಪಕ ಶ್ರೀ ಧೀರಜ್ ಬೆಳ್ಳಾರೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *