×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾಪು: ಉಚ್ಚಿಲದಲ್ಲಿ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ಅಭಿನಂದನಾ ಕಾರ್ಯಕ್ರಮ

ಉಚ್ಚಿಲ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿ., ಉಡುಪಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ., ಮಂಗಳೂರು, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ರಿ, ಮಂಗಳೂರು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ, ಮಂಗಳೂರು: ದ.ಕ.ಹಾಗೂ ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ನಿ.,ಮಹಾಲಕ್ಷ್ಮಿ ಕೋ-ಆಪರೇಟಿವ್ ಬ್ಯಾಂಕ್ ಲಿ.ಹಾಗೂ ಉಡುಪಿ ಜಿಲ್ಲೆಯ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಗಳು, ಸಹಕಾರ ಇಲಾಖೆ, ಉಡುಪಿ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ ಸಮಸ್ತ ಸಹಕಾರ ಸಂಘಗಳು ಹಾಗೂ ಸೌಹಾರ್ದ ಸಹಕಾರಿಗಳ ನೇತೃತ್ವದಲ್ಲಿ 69ನೇ ಅಖಿಲ ಭಾರತ ಸಹಕಾರ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮ ಹಾಗೂ ಸಹಕಾರ ರತ್ನ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ಅಭಿನಂದನಾ ಸಮಾರಂಭ ಸೋಮವಾರ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಸಭಾಭವನದಲ್ಲಿ ಜರುಗಿತು. ದೇವಿಪ್ರಸಾದ್‌ ಶೆಟ್ಟಿ, ಬಳಪು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.ಬಳಿಕ ಆಶೀರ್ವಚನ ನೀಡಿದ ಪೇಜಾವರ ಮಠಾಧೀಶ ವಿಶ್ವಪುಸನ್ನ ತೀರ್ಥ ಸ್ವಾಮೀಜಿ ಅವರು, “ಸಹಕಾರ ಅನ್ನುವುದು ಸಾರ್ವಕಾಲಿಕ ಏಳಿಗೆಯ ಸೂತ್ರು. ಬ್ಯಾಂಕಿಗ್ ಕ್ಷೇತ್ರ ಮಾತ್ರವಲ್ಲ ಸಮಾಜದಲ್ಲಿ ಜಾತಿ ಮತ ಪಂಥಗಳಲ್ಲಿ ಹರಿದು ಹಂಚಿಹೋಗಿರುವ ನಾವು ಸಹಕಾರಿ ತತ್ತ್ವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅಭಿವೃದ್ಧಿ ಸಾಧ್ಯವಿದೆ. ರಾಜೇಂದ್ರ ಕುಮಾರ್ ಅವರ ಸಾಧನೆಯಿಂದ ಸಹಕಾರಿ ಕ್ಷೇತ್ರ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳದಿದ. ಮುಂದೆಯೂ ಅವರ ಮಾರ್ಗದರ್ಶನದಲ್ಲಿ ಸಹಕಾರಿ ರಂಗ ಇನ್ನಷ್ಟು ಬೆಳೆಯಲಿ” ಎಂದು ಶುಭ ಹಾರೈಸಿದರುವೇದಿಕೆಯ ಲ್ಲಿ ಎಂ.ಎನ್.ರಾಜೇಂದ್ರಕುಮಾರ್ ದಂಪತಿಯನ್ನು ಬೆಳ್ಳಿಯ ಶಂಖ ಹಾಗೂ ಅಪರೂಪದ ಭಾವಚಿತ್ರ ಕೊಟ್ಟು ಶಾಲು ಹೊದಿಸಿ ಸನ್ಮಾನಿಸಲಾಯಿತು. ಬಳಿಕ ಮಾತನಾಡಿ ನಾರಿ ಶಕ್ತಿಯ ಮುಂದೆ ಯಾರ ಶಕ್ತಿ ಯೂ ನಡೆಯುವುದಿಲ್ಲ. ಇಲ್ಲಿ ಸೇರಿದ ಶೇಕಡಾ ೯೦ ರಷ್ಟು ಮಹಿಳೆಯರು ನಮ್ಮ ನವೋದಯದ ಸದಸ್ಯರು ಎನ್ನಲು ಹೆಮ್ಮೆ ಅನಿಸುತ್ತದೆ.ನಾವು ಶಕ್ತಿ ತೋರಿಸುವ ಬದಲು ಶಕ್ತಿ ಹೆಚ್ಚಿಸಲು ಇಲ್ಲಿ ಸೇರಿದ್ದೇವೆ. ಜಾತಿ ಮತ ಬೇಧ ಕಾಣಬಾರದು ಎಂಬ ಉದ್ದೇಶದಿಂದ ಒಂದೇ ರೀತಿಯ ಸೀರೆ ಉಟ್ಟು ಸಂಘದಿಂದ ನೀಡಲಾಗಿದೆ ಎಂದರು  ವೇದಿಕೆಯಲ್ಲಿ ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ಸ್ವಾಮಿ ಜಿ,ಡಾ.ಎಂ.ಎನ್ ರಾಜೇಂದ್ರ ಕುಮಾರ್,ಧರ್ಮಪತ್ನಿ ಅರುಣಾ ರಾಜೇಂದ್ರ ಕುಮಾರ್,ಬಿ.ಜಯಕರ ಶೆಟ್ಟಿ ಇಂದ್ರಾಳಿ,ಶಾಸಕ ಲಾಲಾಜಿ ಆರ್ .ಮೆಂಡನ್,ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ,ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ,ಡಾ.ದೇವಿ ಪ್ರಸಾದ್ ಶೆಟ್ಟಿ,ಯಶ್ಪಾಲ್ ಎ.ಸುವರ್ಣ,ಜಯ ಸಿ.ಕೋಟ್ಯಾನ್,ಮಂಜುನಾಥ ಎಸ್‌. ಕೆ,ಕೆ.ಪಿ ಸುಚರಿತ ಶೆಟ್ಟಿ, ಕಾಪು ದಿವಾಕರ ಶೆಟ್ಟಿ,ಡಾ.ಉಮೇಶ್. ಜಿ,ಲಕ್ಷ್ಮೀ ನಾರಾಯಣ ಜಿ.ಎನ್,ಗೋಪಿನಾಥ್ ಭಟ್, ಜಗದೀಶ್ ಅಂಚನ್ ಉಪಸ್ಥಿತರಿದ್ದರು 

Leave a Reply

Your email address will not be published. Required fields are marked *