×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಗುಂಡ್ಲುಪೇಟೆ: ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ಕಪಾಳಮೋಕ್ಷ ಮಾಡಿದ ಸಚಿವ ವಿ. ಸೋಮಣ್ಣ

ಗುಂಡ್ಲುಪೇಟೆ(ಚಾಮರಾಜನಗರ): ನಿವೇಶನ ಹಂಚಿಕೆ ವಿಚಾರವಾಗಿ ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ವಸತಿ ಸಚಿವ ವಿ.ಸೋಮಣ್ಣ ಕಪಾಳಮೋಕ್ಷ ಮಾಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ. ನಿವೇಶನದ ಹಕ್ಕು ಪತ್ರ ಸಿಗದ ಹಿನ್ನಲೆ ಬೇಸತ್ತ ಕೆಂಪಮ್ಮ ಎಂಬಾಕೆ ಏರು ಧ್ವನಿಯಲ್ಲಿ ಸಚಿವರನ್ನು ಕೇಳಿದ್ದಕ್ಕೆ ಸಚಿವರು ಕಾಪಾಳಮೋಕ್ಷ ಮಾಡಿದ್ದಾರೆ. ಕಪಾಳಕ್ಕೆ ಹೊಡೆಸಿಕೊಂಡರೂ ಸಚಿವರ ಕಾಲಿಗೆ ಬಿದ್ದು, ಮಹಿಳೆ ಸಮಸ್ಯೆ ಹೇಳಿಕೊಂಡಿದ್ದಾರೆ. ಕಪಾಳಮೋಕ್ಷ ಮಾಡಿರುವ ಘಟನೆ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಕಾರಣವಾಗಿದೆ.

Leave a Reply

Your email address will not be published. Required fields are marked *