×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಬಡಾ ಎರ್ಮಾಳ್ ಗ್ರಾಮದ ಬುದಗಿ ಪೆಟ್ರೋಲ್ ಬಂಕ್‌ನ ಸಿಬ್ಬಂದಿ ನಾಪತ್ತೆ

ಪೆಟ್ರೋಲ್ ಬಂಕ್‌ನ ಸಿಬ್ಬಂದಿ ನಾಪತ್ತೆ ತಾವು ಕೆಲಸ ಮಾಡುತ್ತಿದ್ದಸ್ಥಳದಲ್ಲಿ ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದ ವ್ಯಕ್ತಿಯೊಬ್ಬರು ವಾಪಸ್ಸು ಬಾರದೆ ನಾಪತ್ತೆಯಾಗಿರುವ ಘಟನೆ ಕಾಪು ತಾಲೂಕಿನ ಬಡಾ ಎರ್ಮಾಳ್ ಗ್ರಾಮದ ಬುದಗಿ ಎಂಬಲ್ಲಿ ನಡೆದಿದೆ.ಸ್ಥಳೀಯ ನಿವಾಸಿ ದಿನೇಶ್ ಎಸ್.ನಾಪತ್ತೆಯಾದವರು ಎನ್ನಲಾಗಿದೆ.ಇವರು ಬಡಾ ಎರ್ಮಾಳ್ ಗ್ರಾಮದ ಬುದಗಿ ಪೆಟ್ರೋಲ್ ಬಂಕಿ ಕಳೆದ 2 ವರ್ಷಗಳಿಂದ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದರು ತಾವು ಕೆಲಸ ಮಾಡುತ್ತಿದ್ದ ಪೆಟ್ರೋಲ್ ಬಂಕಿನ ಅಕೌಂಟೆಟ್ ಬಳಿ ತಾನು ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಹೇಳಿ 2000 ರೂ. ಪಡೆದುಕೊಂಡು ಹೋದವರು ವಾಪಾಸು ಬಂದಿರುವುದಿಲ್ಲ. ಇವರು ಮದ್ಯಪಾನ ಮಾಡುವ ಅಭ್ಯಾಸ ಹೊಂದಿದು, ಅನೇಕ ಬಾರಿ ಮನೆಯಲ್ಲಿ ಹೇಳದೇ ಕೇಳದೇ ಬೇರೆ ಊರುಗಳಿಗೆ ಹೋಗಿ 15-20 ದಿವಸಗಳ ನಂತರ ಮನೆಗೆ ವಾಪಸ್ಸು ಬರುತ್ತಿದ್ದರು. ಆದ್ದರಿಂದ ಈ ಬಾರಿ ಅದೇ ರೀತಿ ಎಲ್ಲಿಗೂ ಹೋಗಿರಬಹುದೆಂದು ಮನೆಯಲ್ಲಿ ಅಂದುಕೊಂಡಿದ್ದರು.ಆದರೆ ಈ ವರೆಗೂ ಅವರು ವಾಡ್ನಸ್ಸು ಮನೆಗೆ ಬಾರದೇ ಇದ್ದು, ಅವರ ಬಗ್ಗೆ ಸಂಧಿಕರ ಮನೆಗಳಲ್ಲಿ, ತಪರಿಚಿತರ ಮನೆ ಕಡಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ದಿನೇಶ್ ಅವರ ಮಗ ಸಂತೋಷ್ ಡಿ.ಅವರು ನೀಡಿದ ದೂರಿನಿಂದ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *