ಆರೋಗ್ಯದ ಹಕ್ಕಿನ ಹೋರಾಟ ತಳಮಟ್ಟಕ್ಕೆ ಹರಡುತ್ತಿದೆ. ಸುರತ್ಕಲ್ ವ್ಯಾಪ್ತಿಯಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಹೋರಾಟದ ಭಾಗ ಆಗುತ್ತಿದೆ.
ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆಸ್ಪತ್ರೆಯಾಗಿ ಮೇಲ್ದೆರ್ಜೆಗೆ ಏರಿಸಬೇಕು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದಯದ ಆಸ್ಪತ್ರೆಯ ಘಟಕಗಳನ್ನು ಸ್ಥಾಪಿಸಬೇಕು, ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಶೀಘ್ರವಾಗಿ ನಡೆಯಬೇಕು, ವೆನ್ಲಾಕ್ ಅನ್ನು ಪ್ರಾದೇಶಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಬೇಕು, ಈ ಎಲ್ಲಾ ಯೋಜನೆಯಲ್ಲಿ ಪಿಪಿಪಿ ಮಾದರಿಯನ್ನು ಅನುಸರಿಸಬಾರದು ಮುಂತಾದ ಬೇಡಿಕೆಗಳನ್ನು ಮುಂದಿಟ್ಟು “ಹೋರಾಟ ಸಮಿತಿ” ನಡೆಸುತ್ತಿರುವ ಅಭಿಯಾನವನ್ನು ಬೆಂಬಲಿಸಿ ಸುರತ್ಕಲ್ ಸಮೀಪದ “ಬೆಸ್ಟ್ ಇಲೆವೆನ್ ಕಾನ” ಸಂಸ್ಥೆ ಸರಕಾರಕ್ಕೆ ಮನವಿ ಪತ್ರವನ್ನು ಸಿದ್ದಪಡಿಸಿ “ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ” ಸುರತ್ಕಲ್ ಘಟಕದ ಸಂಚಾಲಕರಾದ ಶ್ರೀನಾಥ್ ಕುಲಾಲ್ ಅವರಿಗೆ ಹಸ್ತಾಂತರಿಸಿತು.

