ರಿಲಯನ್ಸ್ ಎಸೋಸಿಯೇಶನ್(ರಿ) ಬೊಳ್ಳೂರು, ಹಳೆಯಂಗಡಿ ಇದರ ಆಶ್ರಯದಲ್ಲಿ, ತೈತೋಟ ಚಾರಿಟೇಬಲ್ ಟ್ರಸ್ಟ್ ಬೊಳ್ಳೂರು ಇದರ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಹಾಗು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಸ್ಥಳೀಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ನೀಡಿ ಗೌರವಿಸುವ ಕಾರ್ಯಕ್ರಮವು ಇತ್ತೀಚಿಗೆ ಹಳೆಯಂಗಡಿ ಇಂದಿರಾನಗರದ ರಿಲಯನ್ಸ್ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇಲ್ಲಿನ ಬೊಳ್ಳೂರು ಸರಕಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಜಯರಾಮ್ ಮಾಸ್ಟರ್ ಅವರು ಮಾತನಾಡಿ, “ಇದೇ ನಮ್ಮ ಗ್ರಾಮೀಣ ಭಾಗದ ಸರಕಾರಿ ಶಾಲೆಯಲ್ಲಿ ಕಲಿತು ಇಂದು ಮಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಹೆಸರುವಾಸಿ ಪ್ರಸಿದ್ಧ ವೈದ್ಯರಾದ ಡಾ.ಹಸನ್ ಮುಬಾರಕ್ ಇವರ ಆದರ್ಶ ಇಂದಿನ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಇತ್ತೀಚಿಗೆ ಡಾಕ್ಟರೇಟ್ ಪದವಿ ಪಡಿದಿರುವ ಹಳೆಯಂಗಡಿ ಸಮೀಪದ ದೇವಿಗುಡಿ “ಡಾ. ಕೃತಿ ರವಿಕಿರಣ್ ಅವರನ್ನು ಅಭಿಮಾನದಿಂದ ಗೌರವಿಸುವ ಜೊತೆಗೆ ಈ ಬಾರಿಯ ಶೈಕ್ಷಣಿಕ ವರ್ಷದಲ್ಲಿ ಹತ್ತನೇ ತರಗತಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡ ಸ್ಥಳೀಯ ಪ್ರತಿಭಾವಂತ ವಿದ್ಯಾರ್ಥಿಗಳಾದ ಆಯಿಷಾ ಹಯಾ, ಪ್ರೇಕ್ಷಾ ಆರ್, ಅಜ್ವೀನಾ ಮೈಮುನಾ, ಫಾತಿಮಾ ನಿಧಾ ಇವರಿಗೆ ಇದೇ ವೇಳೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಸಂಸ್ಥೆಯ ಗೌರವಾಧ್ಯಕ್ಷ ಹಾರಿಸ್ ನವರಂಗ್ ಮಾತನಾಡಿ “ಸಮಾಜ ಸೇವೆಯಲ್ಲಿ ನಿರಂತರ ತೊಡಗಿಸಿಕೊಳ್ಳುವ ಜೊತೆಗೆ ಸ್ಥಳೀಯ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮನ್ನು ರಿಲಯನ್ಸ್ ಅಸೋಸಿಯೇಷನ್ ನಮ್ಮ ಸಂಸ್ಥೆಯಿಂದ ಕಳೆದ 16 ವರ್ಷದಿಂದ ನಡೆಸುತ್ತಾ ಬಂದಿದ್ದೇವೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಸೇವೆಯನ್ನು ನೀಡುವ ಗುರಿ ಹೊಂದಿದ್ದೇವೆ ಅದಕ್ಕೆ ನಿಮ್ಮೆಲ್ಲರ ಸಹಕಾರವಿರಲಿ ಎಂದರು. ವೇದಿಕೆಯಲ್ಲಿ ತೈತೋಟ ಚಾರಿಟೇಬಲ್ ಟ್ರಸ್ಟ್ ನ ಸಲಹೆಗಾರ ಬದ್ರುದ್ದೀನ್ ಬೊಳ್ಳೂರು, ಹಳೆಯಂಗಡಿ ಗ್ರಾ.ಪಂ. ಸದಸ್ಯ ಅಝೀಝ್ ಐ.ಎ.ಕೆ ಹಾಗು ರಿಲಯನ್ಸ್ ನ ಪ್ರಧಾನ ಕಾರ್ಯದರ್ಶಿ ಅಕ್ಬರ್ ಬೊಳ್ಳೂರು ಉಪಸ್ಥಿತರಿದ್ದರು. ಈ ವೇಳೆ ಸಂಸ್ಥೆಯ ಉಪಾಧ್ಯಕ್ಷ ಯಾಸೀನ್ ಪಟೇಲ್, ಜೊತೆ ಕಾರ್ಯದರ್ಶಿ ಅಕ್ಸಮ್ ಅಲ್ ಅಕ್ಸ, ಸಂಸ್ಥೆಯ ಸದಸ್ಯರಾದ ಕಲಂದರ್ ಕೌಶಿಕ್, ಮಮ್ತಾಜ್ ಕಲ್ಲಾಪು, ಶಮೀಮ್ ಬೊಳ್ಳೂರು ಫಾರೂಕ್ ಫ್ಯಾನ್ಸಿ, ಕಬೀರ್ ಎ.ಆರ್ , ನಜಿರ್ ಎಂ.ಎಂ, ಬಾವ ನವರಂಗ್, ಶಮೀಮ್ ನವರಂಗ್, ಅಶ್ರಫ್ ಕತಾರ್, ಶರೀಫ್ ಕತಾರ್, ಮೊಹಮ್ಮದ್ ಆಲಿ, ಹಮೀದ್ ಎಂ.ಸಿ.ಎಫ್, ಸಾಹುಲ್, ಕಲಂದರ್ ಹಾಗು ಇನ್ನಿತರ ಸದಸ್ಯರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸುತತ್ತಾ, ಇಕ್ಬಾಲ್ ಎಂ.ಎ. ಕಾರ್ಯಕ್ರಮ ನಿರೂಪಿಸಿ, ಅಬ್ದುಲ್ ಮುಬಾರಕ್ ವಂದಿಸಿದರು



