ದಿನಾಂಕ: 06.07.2025 ಸಮಯ : ಅಪರಾಹ್ನ 3.00ಕ್ಕೆ, ಸ್ಥಳ: ಮೊಗವೀರ ಭವನ ಉಚ್ಚಿಲ. ದ.ಕ. ಮೊಗವೀರ ಮಹಾಜನ ಸಂಘ (ರಿ.) ಉಚ್ಚಿಲ ಇದರ ನೇತೃತ್ವದಲ್ಲಿ ಮತ್ತು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಹೃದಯಿ ಭಕ್ತಾಭಿಮಾನಿಗಳ ಸಹಕಾರ-ಸಹಯೋಗದೊಂದಿಗೆ ಕಳೆದ ಬಾರಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆದ”ಉಡುಪಿ ಉಚ್ಚಿಲ ದಸರಾ-“ವಿಶ್ವದಾದ್ಯಂತ ಪ್ರಖ್ಯಾತಿಗೊಂಡಿದ್ದು ತಮಗೆಲ್ಲರಿಗೂ ತಿಳಿದ ವಿಚಾರ. ಈ ಬಾರಿ 4 ನೇ ವರ್ಷದ ಉಡುಪಿ ಉಚ್ಚಿಲ ದಸರಾ ಉತ್ಸವವು ದಿನಾಂಕ 22-09.2025 ರಿಂದ 02-10-2025ರವರೆಗೆ ನಡೆಯಲ್ಲಿದ್ದು ಸದ್ರಿ ಉತ್ಸವದ ರೂಪುರೇಷೆಗಳ ಬಗ್ಗೆ ಚರ್ಚಿಸಲು ದಿನಾಂಕ:06-07-2025,ಆದಿತ್ಯವಾರ,ಅಪರಾಹ್ನ 3.00ಕ್ಕೆ ಉಚ್ಚಿಲದ ಮೊಗವೀರ ಭವನದಲ್ಲಿ ಸಭೆ ನಡೆಸಲು ನಿರ್ಣಯಿಸಲಾಗಿದೆ. ಈ ಪ್ರಯುಕ್ತ ಎಲ್ಲಾ ಸಹೃದಯಿ ಭಕ್ತರು,ಸಮಿತಿಯ ಸರ್ವ ಸದಸ್ಯರು,ಅವಿಭಜಿತ ದ.ಕ. ಜಿಲ್ಲೆಯ ಎಲ್ಲಾ ಮೀನುಗಾರಿಕಾ ಸಂಘಟನೆಯ ಸದಸ್ಯರು, ಮಹಿಳೆಯರು,ಸೇರಿದಂತೆ ಎಲ್ಲಾ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರು ಸದ್ರಿ ಸಭೆಯಲ್ಲಿ ಭಾಗವಹಿಸಿ ಈ ಬಾರಿಯ “ಉಡುಪಿ ಉಚ್ಚಿಲ ದಸರಾ-2025 ಉತ್ಸವವನ್ನು ಶಿಸ್ತುಬದ್ಧವಾಗಿ ಹಾಗೂ ಆಕರ್ಷಕವಾಗಿ ಆಚರಿಸಲು ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕಾಗಿ ವಿನಂತಿಸುತ್ತಿದ್ದೇವೆ. ಆದರ ಪೂರ್ವಕ ಸ್ವಾಗತ ಬಯಸುವ ಗೌರವ ಸಲಹೆಗಾರರು ಮತ್ತು ಅಧ್ಯಕ್ಷರು ಹಾಗೂ ಸರ್ವಸದಸ್ಯರು ದ.ಕ. ಮೊಗವೀರ ಮಹಾಜನ ಸಂಘ (ರಿ.)ಉಚ್ಚಿಲ. ಕ್ಷೇತ್ರಾಡಳಿತ ಸಮಿತಿ,ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಶ್ರೀ ಕ್ಷೇತ್ರ ಉಚ್ಚಿಲ. ದಸರಾ ಉತ್ಸವ ಸಮಿತಿ, ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಶ್ರೀ ಕ್ಷೇತ್ರ ಉಚ್ಚಿಲ.

