×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾರ್ಕಳದ ಅಭಿವೃದ್ಧಿಗೆ‌ ಸದಾ ಸಹಕಾರ: ಮುನಿಯಾಲು ಉದಯಕುಮಾರ್ ಶೆಟ್ಟಿ

ಕಾರ್ಕಳ: ಕಾರ್ಕಳ ಕ್ಷೇತ್ರದ ಸರ್ವಾಗೀಣ ಅಭಿವೃದ್ಧಿ ಗೆ ಸದಾ ಸಹಕಾರ ನೀಡಲು ಬದ್ಧನಾಗಿದ್ದೇನೆ. ಆದರೆ ಅಭಿವೃದ್ಧಿ ನೆಪದಲ್ಲಿ ನಡೆಸುತ್ತಿರುವ ಭ್ರಷ್ಟಾಚಾರಕ್ಕೆ ಕಂಡು ಸುಮ್ಮನಿರುವ ಜಾಯಮಾನ ನನ್ನದಲ್ಲ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿಯ ನಿಟ್ಟಿನಲ್ಲಿ ಬೈಲೂರಿನ‌ ಎರ್ಲಪ್ಪಾಡಿಯ ಉಮಿಕಲ್ಲು‌ ಎಂಬಲ್ಲಿ ನಿರ್ಮಿಸಲು ಉದ್ದೇಶಿಸಿದ ಪರಶುರಾಮ ಥೀಮ್ ಪಾಕ್೯ ಉದ್ದೇಶಿತದಂತೆ ಪರಿಪೂರ್ಣಗೊಳಲಿ‌ ಎಂಬುವುದು ನಮ್ಮ ನಿಲುವು ಆಗಿದೆ. ಯಾವುದೇ ಯೋಜನೆ ಪರಿಪೂರ್ಣಗೊಳ್ಳಬೇಕಾದರೆ ಸಾಧಕ ಭಾದಕಗಳ ಗಮನ ಹರಿಸಬೇಕಾದ ಹೊಣೆಗಾರಿಕೆ ಜನಪ್ರತಿನಿಧಿಗಳಾಗಿ ಎಂಬುವುದನ್ನು ಸ್ಥಳೀಯ ಶಾಸಕ ಸುನೀಲ್ ಕುಮಾರ್ ಮರೆಯಬಾರದಿತ್ತು. ಬಿಬೆಪಿ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದ ಅವಧಿಯಲ್ಲಿ ಪರಶುರಾಮ ಥೀಮ್ ಪಾಕ್೯ ಯೋಜನೆಗೆ ರೂಪುರೇಷೆ ಸಿದ್ದಪಡಿಸಲಾಗಿತ್ತು.‌ ಬಾಧಕಗಳ ಬಗ್ಗೆ ಅಂದು ಬಗೆಹರಿಸುತ್ತಿದ್ದರೆ ಇಂದು ಈ ಸಮಸ್ಸೆ ಎದುರಾಗುತ್ತಿರಲಿಲ್ಲ. ಬಿಜೆಪಿಯ ಅಧಿಕಾರಾವಧಿ ಪರಶುರಾಮ‌ಥೀಮ್ ಪಾಕ್೯ನ ಕಾಮಗಾರಿ ನಿಲ್ಲಿಸುವಂತೆ ಅದೇಶ ಬಂದಿರುವುದನ್ನು ಶಾಸಕ ಸುನೀಲ್ ಕುಮಾರ್‌ ಮರೆಮಾಚುವ ಪ್ರಯತ್ನದ ಭಾಗವಾಗಿ ಬಿಜೆಪಿಗರು‌ ಇದೀಗ‌ ರಾಜ್ಯ ದಲ್ಲಿ ಅಧಿಕಾರದಲ್ಲಿ ಇರುವ ಕಾಂಗ್ರೆಸ್ ಕಡೆ ಬೆರಳು ತೋರ್ಪಡಿಸುವ ಪ್ರಯತ್ನಕ್ಕೆ ಮುಂದಾಗುತ್ತಿದ್ದಾರೆ. ಪರಶುರಾಮ ಥೀಮ್ ಪಾಕ್ ೯ ಉದ್ಘಾಟನೆಯ ಸಂದರ್ಭದಲ್ಲಿ ವೇದಿಕೆ‌ಹಂಚಿಕೊಂಡಿರುವುದು ನಿಜ. ಆಹ್ವಾನದ ಮೇರೆಗೆ ಆ ವೇದಿಕೆಯಲ್ಲಿ ಪಾಲ್ಗೊಂಡಿದೆ. ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯ ಮಾಡುವ ಹೀನ ಪ್ರವೃತ್ತಿ ನಡೆಸಿಲ್ಲ ಎಂಬುವುದಕ್ಕೆ ಇದು ಉತ್ತಮ ನಿದರ್ಶನವಾಗಿದೆ. ಪರಶುರಾಮ ಥೀಮ್ ಪಾಕ್೯ ನಲ್ಲಿ ಪರಶುರಾಮನ ಕಂಚಿನ ಪ್ರತಿಮೆಯ ಬದಲಾಗಿಫೈ ಫೈಬರ್ ಪ್ರತಿಮೆಯನ್ನು ನಿರ್ಮಿಸಿ ಅದುವೇ ಕಂಚಿನ ಪ್ರತಿಮೆ ಎಂದು ಸಾರಿ ಹೇಳುವ ಪ್ರಯತ್ನ ನಡೆಸುವ ಶಾಸಕ ಹಾಗೂ ಬಿಜೆಪಿಗರ ನಿಲುವಿನ ಕುರಿತು ಉದಯಕಯಮಾರ್ ಅಕ್ಷೇಪ ವ್ಯಕ್ತ ಪಡಿಸಿದ್ದಾರೆ. ಸತ್ಯ ಶೋಧನೆಯಲ್ಲಿ ಪರಶುರಾಮನ ಪ್ರತಿಮೆ ಕಂಚಿನದಲ್ಲ ಎಂಬುವುದು ದೃಢಪಟ್ಟಿದ್ದು, ತಪಿಸ್ಥರ ವಿರುದ್ಧ ಕ್ರಮಕ್ಕೆ ಸರಕಾರವನ್ನು ಆಗ್ರಹಿಸುವುದಾಗಿ‌ ಮುನಿಯಾಲು ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.‌

Leave a Reply

Your email address will not be published. Required fields are marked *