×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾಪು ಅಲ್ ರಿಹಾ ವಿ.ಸಹಕಾರಿ ಸಂಘದ ವತಿಯಿಂದ ಎಂ. ಎ. ಗಫೂರ್‌ಅವರಿಗೆ ಸಮ್ಮಾನ

ಕರಾವಳಿ ಅಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷ ಎಂ. ಎ. ಗಫೂ‌ರ್ ಅವರನ್ನು ಕಾಪು ಅಲ್ ರಿಹಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಎಚ್. ಅಬ್ದುಲ್ಲಾ ಅವರ ಅಧ್ಯಕ್ಷತೆಯಲ್ಲಿ ಸಮ್ಮಾನಿಸಿ, ಗೌರವಿಸಲಾಯಿತು.

ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡಿರುವ ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಮಾಸ್ಟ‌ಪ್ಲಾನ್ ರಚಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಒಂದು ಹಂತದ ಮಾಸ್ಟರ್‌ಪ್ಲಾನ್ ಸಿದ್ದಗೊಂಡ ಬಳಿಕ ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಸಭೆ ನಡೆಸಿ ಜನಪ್ರತಿನಿಧಿಗಳು ಮತ್ತು ನಿರ್ದೇಶಕರೊಂದಿಗೆ ಚರ್ಚಿಸಲಾಗುವುದು ಎಂದರು. ಅಲ್ ರಿಹಾ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷ ಎಂ.ಪಿ. ಮೊಹಿದಿನಬ್ಬ ನಿರ್ದೇಶಕರಾದ ಮೊಹಮ್ಮದ್ ಫಕೀರ್, ನವೀದ್ ನಾಸೀರ್ ಶೇಖ್, ಹಸನಬ್ಬ ಶೇಖ್, ಅಬ್ದುಲ್ ಹಮೀದ್ ಮೂಳೂರು, ಮೊಹಮ್ಮದ್ ಸಾದಿಕ್, ಶಫಿ ಅಹಮ್ಮದ್, ಯು. ಸಿ. ಶೇಖಬ್ಬ ಎಂ. ಇಸ್ಮಾಯಿಲ್, ಎಂ. ಅಬ್ಬು ಮೊಹಮ್ಮದ್, ಸಬೀಹಾ ಖಾತೂನ್, ಫರೀದಾ ಬಾನು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಗೀತಾ ಎ. ಪಿ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ವಂದಿಸಿದರು.

Leave a Reply

Your email address will not be published. Required fields are marked *