ಪಂಜಿಮಾರು – ಶಿರ್ವಾ – ಪಿಲಾರುಕಾನದ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿರುವ ಗಂಭೀರ ಸಮಸ್ಯೆಯ ಕುರಿತಂತೆ ಶಿರ್ವ ಗ್ರಾಮೀಣ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ರಸ್ತೆ ಅವ್ಯವಸ್ಥೆ ಖಂಡಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು ಈ ಸಂದರ್ಭದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೈ ಸುಕುಮಾರ್ ಮಾತನಾಡಿ ಪಂಜಿಮಾರು – ಶಿರ್ವಾ – ಪಿಲಾರುಕಾನ ವಾಹನ ಸಂಚಾರಕ್ಕೆ ಸಂಪೂರ್ಣ ಅಯೋಗ್ಯವಾಗಿದೆ ರಸ್ತೆ ಪೂರ್ತಿ ಬೃಹತ್ ಗುಂಡಿಗಳು ನಿರ್ಮಾಣಗೊಂಡಿದೆ ದ್ವಿಚಕ್ರ ವಾಹನ ಸವಾರರು ದಿನನಿತ್ಯ ಅಪಘಾತಕ್ಕೊಳಗಾಗಿದ್ದಾರೆ ನಮ್ಮ ಜನಪ್ರತಿನಿದಿನಗಳು ಗಾಢ ನಿದ್ರೆಯಲ್ಲಿದ್ದಾರೆ ಎಂದರು

ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಶರ್ಫುದ್ದೀನ್ ಶೇಖ್ ಮಾತನಾಡಿ ರಸ್ತೆ ಅವ್ಯವಸ್ಥೆ ಗೊತ್ತಿದ್ದು ಸ್ಥಳೀಯ ಶಾಸಕರ ಕೈಕಟ್ಟಿ ಕಳಿತ್ತಿದ್ದಾರೆ ರಸ್ತೆ ಹೊಂಡಗುಂಡಿಗಳಿಗೆ ಮುಕ್ತಿಗಾಣಿಸದೆ ಸಾಕಷ್ಟು ಸಾವು ನೋವು ಸಂಭವಿಸುತ್ತಿದೆ.ಎಂದು ತಿಳಿಸಿದರು

ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಮಾಜಿ ಅಧ್ಯಕ್ಷೆ ಗೀತಾ ವಾಗ್ಲೆ ,ಮಾತನಾಡಿ ವಾಹನ ಸಂಚಾರಕ್ಕೆ ರಸ್ತೆ ಅಯೋಗ್ಯವಾಗಿದ್ದು ಕೂಡಲೇ ಸರಿಪಡಿಸಿ ಕೊಡಬೇಕು ಎಂದು ಅಗ್ರಹಿಸಿದರು ಈ ಸಂದರ್ಭದಲ್ಲಿ ಮನವಿಯನ್ನು ನೀಡಲಾಯಿತು ಯುವ ಕಾಂಗ್ರೆಸ್ ಕಾಪು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಮೊಹಮ್ಮದ್ ನಿಯಾಜ್, ವಿಲ್ಸನ್ ರೋಡ್ರಗೀಸ್ ಹಸನಬ್ಬ ಶೇಖ್ ರಮೀಜ್ ಹುಸೇನ್ ಆಶಾ ರತನ್ ಶೆಟ್ಟಿ ಗೌರೀಶ್ ಪೂಜಾರಿ ರಿಯಾಝ್ ಉಪಸ್ಥಿತರಿದ್ದರು ಮೆಲ್ವಿನ್ ಡಿಸೋಜ, ನಿರೂಪಿಸಿದರು

