×
Our website is made possible by displaying online advertisements to our visitors. Please consider supporting us by whitelisting our website.
  • 9880645340


ಉಚಿತ ಕಂಪ್ಯೂಟರ್ DTP ತರಬೇತಿ

ಉಚಿತ ಕಂಪ್ಯೂಟರ್ DTP ತರಬೇತಿ
ಗ್ರಾಮೀಣ ಯುವಜನರು ಹಾಗೂ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ರೂಪಿಸುವ ಉದ್ದೇಶದಿಂದ, ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಮಾನ್ಯತೆ ಪಡೆದ, ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಹಾಗೂ ಕೆನರಾ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ರುಡ್‌ಸೆಟ್ ಸಂಸ್ಥೆ, ಉಜಿರೆ ವತಿಯಿಂದ 45 ದಿನಗಳ ಉಚಿತ ಕಂಪ್ಯೂಟರ್ DTP ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ತರಬೇತಿಯು 2026ರ ಜೂನ್ 08ರಿಂದ ಜುಲೈ 22ರವರೆಗೆ ನಡೆಯಲಿದ್ದು, ಕಂಪ್ಯೂಟರ್ ಮೂಲಭೂತ ಜ್ಞಾನ, ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್, MS Office, DTP, ಡಿಸೈನಿಂಗ್ ಹಾಗೂ ಸ್ವಉದ್ಯೋಗ ಮತ್ತು ಉದ್ಯೋಗಾವಕಾಶಗಳಿಗೆ ಸಂಬಂಧಿಸಿದ ಪ್ರಾಯೋಗಿಕ ತರಬೇತಿಯನ್ನು ನೀಡಲಾಗುವುದು.
ಅರ್ಹತೆ:
18 ರಿಂದ 50 ವರ್ಷದೊಳಗಿನವರು
ಕನ್ನಡ ಓದು–ಬರಹ ತಿಳಿದಿರುವವರು
ಸ್ವಉದ್ಯೋಗ ಅಥವಾ ಉದ್ಯೋಗದಲ್ಲಿ ಆಸಕ್ತಿ ಹೊಂದಿರುವವರು
ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯ ಕಲ್ಪಿಸಲಾಗುವುದು.
ತರಬೇತಿ ಸ್ಥಳ: ರುಡ್‌ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ
ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ಮೂಲಕ ಅರ್ಜಿಸಲ್ಲಿಸಬಹುದು: https://forms.gle/9LUE1UvHMAv21vRS7
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 6364561982 / 8296770307 / 9980885900, 9448348569 / 8861514706 / 9591044014 / 9902594791
ದೂರವಾಣಿ: 08256-236404
ಸೀಮಿತ ಅವಕಾಶ – ಆಸಕ್ತರು ಕೂಡಲೇ ನೋಂದಾಯಿಸಿಕೊಳ್ಳಿ.

Leave a Reply

Your email address will not be published. Required fields are marked *