ಕಾಪು : 2005 ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ಅಧಿಕಾರಾವಧಿಯಲ್ಲಿ ಜಾರಿಗೆ ತಂದಿದ್ದ ಮಹತ್ವಾಕಾಂಕ್ಷಿ ಯೋಜನೆ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಕಾಯ್ದೆ(MGNREGA)ಯು, ಗ್ರಾಮೀಣ ಭಾಗದ ಕಾರ್ಮಿಕರಿಗೆ ಉದ್ಯೋಗ ನೀಡುವುದಲ್ಲದೆ, ಉದ್ಯೋಗ ಬೇಡಿಕೆಯ- ಕಾನೂನಾತ್ಮಕ ಹಕ್ಕುಗಳನ್ನು ಒದಗಿಸಿತ್ತು. ಈ ಕಾಯ್ದೆಯು ಮಹಿಳೆಯರು, ದಲಿತರು, ಆಡಿವಾಸಿಗಳು ಮತ್ತು ಗಡಿಭಾಗದ ಬಹುತೇಕ ಕುಟುಂಬಗಳ ಜೀವನೋಪಾಯಕ್ಕೆ ಆಧಾರವಾಗಿತ್ತು. ಆದರೆ, ಇದರ ಹೆಸರನ್ನು ತಿದ್ದುಪಡಿಮಾಡಿ, “VB-GRAM-G ” ಎಂದು ಮರುನಾಮಕರಣ ಮಾಡಿದ್ದೆ ಅಲ್ಲದೆ, ಅದರ ಮೂಲಸ್ವರೂಪ ವನ್ನೇ ಬದಲಾಯಿಸಿ, ಬಡವರ ಅನ್ನದ ಬಟ್ಟಲಿಗೆ ಮಣ್ಣು ಹಾಕುವ ಕುತಂತ್ರಕ್ಕೆ ಕೇಂದ್ರ ಬಿ. ಜೆ. ಪಿ ಸರಕಾರ ಮುನ್ನುಡಿ ಬರೆದಿದೆ.
ಮನರೇಗಾದ ಪ್ರಾಮುಖ್ಯತೆ ಉಳಿಸಲು, ಉದ್ಯೋಗ ಖಾತರಿಯ ಹಕ್ಕನ್ನು ರಕ್ಷಿಸಲು, ಅದರ ಮೂಲಸ್ವರೂಪ ಮರುಸ್ಥಾಪಿಸಲು ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ರಾಷ್ಟ್ರವ್ಯಾಪಿ ‘ಮನರೇಗಾ ಬಚಾವೋ ಸಂಗ್ರಾಮ್’ ಆಂದೋಲನ ಆಯೋಜಿಸಲು ಸೂಚಿಸಿದೆ. ಕಾಪುವಿನಲ್ಲಿ ಪ್ರಥಮ ಸಮಾವೇಶ ಆಯೋಜಿಸುವ ಮೂಲಕ ಚಾಲನೆ ನೀಡುತ್ತಿದ್ದೇವೆ. ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವಿನಯ್ ಕುಮಾರ್ ಸೊರಕೆ ಹೇಳಿದರು.
ಮನರೇಗಾ ಬಚಾವೋ ಸಂಗ್ರಾಮಕ್ಕೆ ಕಾಪುವಿನಿಂದ ಚಾಲನೆ ನೀಡಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಹೇಳಿದ್ದಾರೆ ಯಾವುದಾದರೂ ಅಧಿಕಾರದ ಕುರ್ಚಿಯಲ್ಲಿರುವಾಗ ಯಾವುದೇ ತೀರ್ಮಾನ ತೆಗೆದುಕೊಳ್ಳಬೇಕಾದರೂ ಕೂಡ ಆ ತೀರ್ಮಾನ ಕಟ್ಟಕಡೆಯ ಬಡವನ ಮುಖದಲ್ಲಿಯೂ ಕೂಡ ನಗೆತರಿಸುವಂತಿರಬೇಕು ಇಂದು ಬಡವರ ಮುಖದಲ್ಲಿ ನಗೆ ಬಿಡಿ ಬಡವನ ಹೊಟ್ಟೆಗೆ ಹೊಡೆಯುವಂತಹ ಕೆಲಸ ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರಕಾರ ಮಾಡುತ್ತಿದೆ ಎಂದರು.
ಕಳೆದ ಬಾರಿ ನಾವು ಸಂವಿಧಾನ ಉಳಿಸಿ ಎಂಬ ಕಾರ್ಯಕ್ರಮವನ್ನು ಇದೇ ಕಾಪುಪೇಟೆಯಲ್ಲಿ ಮಾಡಿತು ಅದೇ ರೀತಿ ಮಹಾತ್ಮ ಗಾಂಧಿ ಹತ್ಯೆ ಆದಂತಹ ದಿನ ನಾವು ಹಿರಿಯಡ್ಕದಲ್ಲಿ ಜೈ ಬಾಪು ಜೈ ಭೀಮು ಜೈ ಸಂವಿಧಾನ ಎಂಬ ಕಾರ್ಯಕ್ರಮವನ್ನು ಮಾಡಿದೆವು. ಈ ವರ್ಷ ಅನಿವಾರ್ಯವಾಗಿ ಜನರಿಗೆ ಮನವರಿಕೆ ಮಾಡಬೇಕು ಎನ್ನುವ ಉದ್ದೇಶವನ್ನ ಇಟ್ಟುಕೊಂಡು ಕರಾಳ ಮಸೂದೆಯನ್ನ ತಿರಸ್ಕಾರಕ್ಕಾಗಿ ನಿರಂತರವಾಗಿ ಹೋರಾಟ ಮಾಡಬೇಕಾಗಿದೆ ಎಂದರು. ಮನರೇಗಾದ ಮೂಲಸ್ವರೂಪ ಮರುಸ್ಥಾಪಿಸಲು ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ರಾಷ್ಟ್ರವ್ಯಾಪಿ ‘ಮನರೇಗಾ ಬಚಾವೋ ಸಂಗ್ರಾಮ್’ ಆಂದೋಲನ ಆಯೋಜಿಸಿದ್ದೇವೆ. ಅಂದು ರೈತರ ಕರಾಳ ದಿನದ ಸಂದರ್ಭ ಒಂದುವರೆ ವರ್ಷ ಕಾಲ ರೈತರು ಮಳೆ ಬಿಸಿಲು ಚಳಿಗೆ ಹೆದರದೆ 800 ಜನ ಪ್ರಾಣ ಕೊಟ್ಟರು ಸಹ ಸತತವಾಗಿ ಹೋರಾಟ ಮಾಡಿದ್ದರಿಂದ ಬಿಜೆಪಿಯ ಕೇಂದ್ರ ಸರಕಾರ ಮಂಡಿಯೂರಿ ಕರಾಳ ಮಸೂದೆಯನ್ನು ವಾಪಸ್ಸು ತೆಗೆದುಕೊಳ್ಳುವoತಾಯಿತು ಅದೇ ರೀತಿ ರಾಷ್ಟ್ರದಾದ್ಯಂತ ಈ ಮಸೂದೆಯನ್ನ ವಾಪಸು ತೆಗೆದುಕೊಳ್ಳುವ ಕೆಲಸವಾಗಬೇಕು ಬಡವರ ಉದ್ಯೋಗದ ಹಕ್ಕನ್ನು ಕಿತ್ತುಕೊಳ್ಳುವಂತಹ ಈ ಒಂದು ಮಸೂದೆಯನ್ನು ತಿರಸ್ಕರಿಸುತ್ತೇವೆ ಎಂದರು. ನಾವಿoದು ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಉಳಿಸಬೇಕು. ಅದಕ್ಕಾಗಿ ಕೇಂದ್ರ ಸರಕಾರದ ವಿರುದ್ಧ ಹೋರಾಟ ಮಾಡಬೇಕಾಗಿದೆ. ಇವತ್ತು ಮಹಾತ್ಮ ಗಾಂಧೀಜಿ ರಾಷ್ಟ್ರಪಿತ ಅವರು ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ ವಿದೇಶದಲ್ಲಿಯೂ ಕೂಡ ಮಹಾತ್ಮ ಗಾಂಧೀಜಿಯ ಪ್ರತಿಮೆ ಇದೆ. ಆದರೆ ಅಲ್ಲಿ ಮೋದಿ ಹೋದಾಗ ಗಾಂಧೀಜಿ ಪ್ರತಿಮೆಗೆ ಅಡ್ಡ ಬೀಳುತ್ತಾರೆ ಇಲ್ಲದಿದ್ದರೆ ಅಲ್ಲಿ ಅವರಿಗೆ ಗೌರವ ಇರುವುದಿಲ್ಲ ಆದರೆ ಇಲ್ಲಿ ಮಹಾತ್ಮ ಗಾಂಧಿಯನ್ನು ಇತಿಹಾಸದಿಂದ ತೆಗೆದುಹಾಕಲು ಹೊರಟಿದ್ದಾರೆ. ಇಲ್ಲಿ ಗಾಂಧೀಜಿ ಅವರು ಇವರ ದೊಡ್ಡ ಶತ್ರು ಇವರು ಹೇಳುವ ರಾಮಾ ನಿಜವಾದ ರಾಮನಲ್ಲ ಇದು ಚುನಾವಣೆಗೋಸ್ಕರ ಮಾಡಿರುವ ಮೋದಿಯ ತಂತ್ರಗಾರಿಕೆ ಎಂದರು. ಈ ಮಸೂದೆಯನ್ನು ಪ್ರತಿಭಟಿಸುವುದು ನಮ್ಮ ಮೂಲಭೂತ ಹಕ್ಕು ಮನ್ರೇಗಾ ಉಳಿಸಬೇಕು ಎಂದರು.
ಸುಧೀರ್ ಕುಮಾರ್ ಮುರುಳಿ ಮಾತನಾಡಿ ಗಾಂಧೀಜಿ ಅವರು ಇಂದು ಇಲ್ಲದಿದ್ದರೂ ಕೂಡ ಅವರ ಮೇಲೆ ಇವರಿಗೆ ದ್ವೇಷ ಹೋಗಿಲ್ಲ. ಇವರು ಮನರೇಗಾ ಯೋಜನೆಯನ್ನು ತಿದ್ದುಪಡಿ ಮಾಡಿದ್ದಲ್ಲದೆ ಅದನ್ನ ಸಂಪೂರ್ಣವಾಗಿ ತೆಗೆದು ಹಾಕಿದ್ದಾರೆ ಎಂದರು. ರಾಮ್ ಜಿ ವರ್ಸಸ್ ಗಾಂಧೀಜಿ ಅನ್ನೋ ಅಂತಹ ಚರ್ಚೆ ನಡೆಯಬೇಕು ಇದು ಬಿಜೆಪಿಯ ಹುನ್ನಾರ ರಾಮನನ್ನು ಇವರು ರಾಜಕೀಯಕ್ಕೆ ಬಳಸಿ ಶ್ರೀರಾಮ ಎನ್ನುವ ಆಘಾದ ಚೇತನವನ್ನ, ವ್ಯಕ್ತಿತ್ವವನ್ನ ದೈವತ್ವವನ್ನು ಎಷ್ಟು ರಾಜಕೀಯ ಕಾರಣಗೊಳಿಸಬೇಕು ಎನ್ನುವುದಕ್ಕೆ ಇಂದು ಬಿಜೆಪಿ ಉದಾಹರಣೆಯಾಗಿ ನಿಂತಿದೆ ಎಂದು ಕಿಡಿಗಾರಿದರು.
ಈ ಸಂದರ್ಭದಲ್ಲಿ ವೈ. ಸುಕುಮಾರ್, ಎಂ. ಎ. ಗಫೂರ್, ನವೀನ್ ಚಂದ್ರ ಸುವರ್ಣ, ನವೀನ್ ಚಂದ್ರ ಜೆ. ಶೆಟ್ಟಿ, ವಿಕ್ರಂ ಕಾಪು, ಶಿವಾಜಿ ಸುವರ್ಣ ಬೆಳ್ಳೆ, ಪ್ರಶಾಂತ್ ಜತ್ತನ್ನ, ಜೇಬಾ ಸೆಲ್ವನ್, ಶರ್ಫುದ್ದಿನ್ ಶೇಖ್, ಶಾಂತಲತಾ ಎಸ್. ಶೆಟ್ಟಿ,ಸರಸು ಡಿ. ಬಂಗೇರ, ಕಿಶೋರ್ ಎರ್ಮಾಳ್, ಅಮೀರ್ ಮೊಹಮ್ಮದ್, ನವೀನ್ ಎನ್. ಶೆಟ್ಟಿ, ಮೊಹಮ್ಮದ್ ನಿಯಾಜ್, ಸುಧೀರ್ ಕರ್ಕೇರ, ಅಝೀಜ್ ಹೆಜಮಾಡಿ, ಹಸನಬ್ಬ ಶೇಖ್, ದೀಪಕ್ ಎರ್ಮಾಳ್, ಸುಮನ್ ಬೋಳಾರ್, ರಾಘವ್ ಕೋಟ್ಯಾನ್, ದೇವರಾಜ್ ಎ. ಕೋಟ್ಯಾನ್,ಶೇಕರ್ ಹೆಜಮಾಡಿ, ಶೇಖಬ್ಬ ಉಚ್ಚಿಲ ಸತೀಶ್ ದೇಜಾಡಿ ಗೌರೀಶ್ ಕೋಟ್ಯಾನ್, ಸತೀಶ್ ಚಂದ್ರ ಮೂಳೂರು, ರಿಯಾಜ್ ಮುದರಂಗಡಿ, ಉದಯ್ ಸನಿಲ್ ಮತ್ತಿತರ ಪ್ರಮುಖರು ಹಾಗೂ ಬ್ಲಾಕ್ ಪದಾಧಿಕಾರಿಗಳು, ವಿವಿಧ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಪುರಸಭೆ, ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸಾವಿರಾರು ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.

