×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕೋಟ, ಜ. 29: ಬ್ರಹ್ಮಾವರ ನೂತನವಾಗಿ ಆರಂಭಗೊಂಡ ಬಾಷ್ ಕಾರ್ ಸರ್ವಿಸ್ ಸೆಂಟರ್‌ಉದ್ಘಾಟನೆ

ಬಾಷ್ ಅಟೋಮ್ಯಾಟಿವ್ ಆಪ್ಟರ್ ಮಾರ್ಕರ್ ಇಂಡಿಯಾದ ಪ್ರಾದೇಶಿಕ ಮುಖ್ಯಸ್ಥೆ ರೀತಿ ಸೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಾಷ್ ಜರ್ಮನ್ ಮೂಲದ ಬಾಷ್ ಇಂದು ಭಾರತೀಯರ ಅಚ್ಚು ಮೆಚ್ಚಿನ ಕಂಪೆನಿಯಾಗಿದೆ ಉಡುಪಿ ಜಿಲ್ಲೆಯ ಪ್ರಥಮ ಬಾಷ್ ಸರ್ವೀಸ್ ಸೆಂಟರ್‌ ಬ್ರಹ್ಮಾವರದಲ್ಲಿ ಆರಂಭ ಗೊಂಡಿದ್ದು ಮುಂದೆ ಉತ್ತಮ ಸೇವೆ ನೀಡಲಿದೆ ಎಂದರು.

ಬಾಷ್ ಸಂಸ್ಥೆಯಕಂಟ್ರಿಮ್ಯಾನೇಜರ್ ಎಸ್. ಡಬ್ಲ್ಯು. ಎಸ್. ವಿಶಾಂತ್ ನಾಯಕ್ ಸಂಸ್ಥೆಗೆ ಶುಭ ಹಾರೈಸಿದರು.

ಸಂಸ್ಥೆಯ ಆಡಳಿತ ಪಾಲುದಾರ ಪ್ರದೀಪ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಕಾರಿಗೆ ಸಂಬಂಧಪಟ್ಟ ಪೈಂಟ್ , ಸ್ಟೀಲ್ ಅಲೈನ್‌ಮೆಂಟ್,ಎ.ಸಿ. ವರ್ಕ್ ಆಟೋ ಎಲೆಕ್ಟಿಕಲ್ ವರ್ಕ್ , ಇಂಟೀರಿಯರ್ ಡಿಟೈಲಿಂಗ್, ಎಕ್ಸಸರೀಸ್, ರಿಪೇರಿ, ವಾಷಿಂಗ್ ಮತ್ತು ಒಳ್ಳೆ ಯ ಗುಣಮಟ್ಟದ ಸರ್ವಿಸ್ ಮಾಡಿಕೊಡಲಾಗುವುದು ಎಂದರು.

ಮಂಗಳೂರು ಮಹಾಲಕ್ಷ್ಮಿ ಆಟೋ ಡಿಸ್ಟ್ರಿಬ್ಯೂಟರ್ಸ್ ವೆಂಕಟೇಶ್ ರೈ, ಚಾಂತಾರು ಗ್ರಾ.ಪಂ. ಅಧ್ಯಕ್ಷೆ ಪ್ರೇಮಾ ಶೆಟ್ಟಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಪ್ರಮುಖರಾದಪ್ರಸಾದ್‌ರಾಜ್ ಕಾಂಚನ್, ಕಿಶನ್ ಹೆಗ್ಡೆ ಕೊಳ್ಳೆಬೈಲು, ದಿನೇಶ್ ಹೆಗ್ಡೆ ಮೊಳಹಳ್ಳಿ ಪ್ರೊಣ ಮಹಾಬಲೇಶ್ ಶೆಟ್ಟಿ ಬಿ. ಅಶೋಕ್ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ, ರಾಜೇಶ್ ಶೆಟ್ಟಿ ಬಿರ್ತಿ, ಶ್ರೀಧರ ಶೆಟ್ಟಿ ಬೈಕಾಡಿ ಸುಪ್ರಸಾದ್ ಶೆಟ್ಟಿ ಹಾರಾಡಿ ನಿತ್ಯಾನಂದ ಶೆಟ್ಟಿ ರವಿಪ್ರಕಾಶ್ ಗೋನ್ಸಾಲ್ವಿಸ್, ವಿನುತಾ, ನಾರಾಯಣ ಪೂಜಾರಿ, ಪ್ರಶಾಂತ ಶೆಟ್ಟಿ ಮಂಜುನಾಥ ಹೆಗ್ಡೆ ನೀಲೇಶ್ ಜೈನ್ ರಾಮಚಂದ್ರ, ಪೊನ್ನಸ್ವಾಮಿ, ಹರೀಶ್ ಉಪಸ್ಥಿತರಿದ್ದರು.

ಸಂಸ್ಥೆಯ ಆಡಳಿತ ಪಾಲುದಾರ ಪ್ರದೀಪ್ ಶೆಟ್ಟಿ ಸ್ವಾಗತಿಸಿ, ರಾಜ್ ಭಕ್ತ ಕಾರ್ಯಕ್ರಮ ನಿರೂಪಿಸಿ, ಪಾಲುದಾರ ಗುರುಪ್ರಸಾದ್‌ ಶೆಟ್ಟಿ ವಂದಿಸಿದರು

Leave a Reply

Your email address will not be published. Required fields are marked *