×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಹಾರ್ದಿಕ್ ಪಟೇಲ್ ಕಾಂಗ್ರೆಸ್‌ಗೆ ರಾಜೀನಾಮೆ

 ಅಹಮದಾಬಾದ್‌: ಗುಜರಾತ್‌ನ ಪಾಟಿದಾರ್‌ ಸಮುದಾಯದ ಮುಖಂಡ ಹಾರ್ದಿಕ್‌ ಪಟೇಲ್‌ ಕಾಂಗ್ರೆಸ್‌ ಪಕ್ಷಕ್ಕೆ ಗುಡ್‌ಬೈ ಹೇಳಿದ್ದಾರೆ. ಹಾರ್ದಿಕ್ ಪಟೇಲ್ ಟ್ವೀಟ್‌ನಲ್ಲಿ ಈ‌ ಮಾಹಿತಿ ನೀಡಿದ್ದಾರೆ. ಉದಯಪುರದಲ್ಲಿ ಮೇ 15ರಂದು ನಡೆದ ಕಾಂಗ್ರೆಸ್ ವರಿಷ್ಠರ ಮೂರು ದಿನಗಳ ಚಿಂತನ-ಮಂಥನ ಸಭೆಗೆ ಗೈರು ಹಾಜರಾಗಿದ್ದ ಹಾರ್ದಿಕ್‌ ಪಟೇಲ್‌ ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಪಾಟಿದಾರ್ ಸಮುದಾಯದ ಪ್ರಭಾವಿ ನಾಯಕ ನರೇಶ್ ಪಟೇಲ್ ಅವರನ್ನು ಭೇಟಿ ಬಳಿಕ ಹಾರ್ದಿಕ್‌ ಪಟೇಲ್‌ ಈ ನಿರ್ಧಾರ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *