×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕುಂಭನಿಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ ಬೆಳ್ಮಣ್ ಇದರ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ ಮತ್ತು ಸ್ವಸಹಾಯ ಸಂಘಗಳ ಒಕ್ಕೂಟದ ಉದ್ಘಾಟನೆ

ಕುಂಭನಿಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ ಬೆಳ್ಮಣ್ ಇದರ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ ಮತ್ತು ಸ್ವಸಹಾಯ ಸಂಘಗಳ ಒಕ್ಕೂಟದ ಉದ್ಘಾಟನ ದಿನಾಂಕ 16/11/2025 ನೇ ಆದಿತ್ಯವಾರ ಕುಲಾಲ ಭವನ ನಾನಿಲ್ತಾರ್ ಮುಲ್ಲಡ್ಕ ಮುಂಡ್ಕೂರು ನಲ್ಲಿ ಜರ ಗಿತು
ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರಿಂದ ದೀಪ ಪ್ರಜ್ವಲನೆ ನೆರವೇರಿತು.

ಆಶೀರ್ವಚನ ನೀಡಿದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀ ಧಾಮ ಮಾಣಿಲರವರು ಜಾತಿ ಭೇದಭಾವವಿಲ್ಲದೆ ಎಲ್ಲರನ್ನು ಸಮಾನವಾಗಿ ಕಾಣಬೇಕು, ಬೇರೆ ಸಮುದಾಯಗಳ ಕಾರ್ಯಕ್ರಮಗಳಲ್ಲೂ ಭಾಗವಹಿಸಬೇಕು ಮತ್ತು ದೇವಸ್ಥಾನಕ್ಕೆ ಹೋಗುವುದರಿಂದ ಮಾತ್ರ ಶುದ್ದತೆ ಬರುವುದಿಲ್ಲ, ಮೊದಲು ಮನಸ್ಸನ್ನು ಶುದ್ಧವಾಗಿವಂತೆ ಭಕ್ತಾಭಿಮಾನಿಗಳಿಗೆ ಆಶೀರ್ವಚನ ನೀಡಿದರು .

ಕಾರ್ಯಕ್ರಮದಲ್ಲಿ ಸ್ವ ಸಂಘದ ಸದಸ್ಯರ ಪ್ರತಿಭಾವಂತರ ಮಕ್ಕಳ ನ್ನು ಗೌರವಿಸಿ ಸನ್ಮಾನಿಸಲಾಯಿತು ಕಾಂತಾವರ ಗ್ರಾಮದ ಕು. ಧನ್ಯಾ ಮೂಲ್ಯ, ಬಾರಾಡಿ ಗ್ರಾಮದ ಕು. ಸೃಜನಾ ಕುಲಾಲ್, ಇನ್ನಾ ಗ್ರಾಮದ ಕು. ಮಣಿಶ್ರೀ, ಬೋಳ ಗ್ರಾಮದ ಕು. ಕುಷಿ ಎಸ್. ಕುಲಾಲ್, ಮುಲ್ಲಡ್ಕ ಗ್ರಾಮದ ಕು. ಪಲ್ಲವಿ ಸಾಲ್ಯಾನ್, ಬೆಳ್ಮಣ್ ಗ್ರಾಮದ ಕು. ಶ್ರಾವ್ಯ ಕುಲಾಲ್, ಬೆಳ್ಮಣ್ ಗ್ರಾಮದ ಅಧೀಶ್ ಮೂಲ್ಯ, ಇನ್ನಾ ಗ್ರಾಮದ ದೀಕ್ಷಿತ್ ಕುಲಾಲ್, ಬೆಳ್ಮಣ್ ಗ್ರಾಮದ ಕು. ಕೃತಿ ಕುಲಾಲ್ ಮತ್ತು ಮುಂಡ್ಕೂರು ಗ್ರಾಮದ ಶಾಂತಿ ಹರೀಶ್ ಕುಲಾಲ್ ಸೇರಿದಂತೆ ಒಟ್ಟು ಹತ್ತು ಮಂದಿಗೆ ಗೌರವಪೂರ್ವಕವಾಗಿ ಸನ್ಮಾನ ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ ಉತ್ತಮ ಕಾರ್ಯಕ್ಷಮತೆ ತೋರಿದ ಮೂರು ಸ್ವಸಹಾಯ ಸಂಘಗಳಿಗೆ ಬಹುಮಾನ ವಿತರಿಸಲಾಯಿತು — ಬೆಳ್ಮಣ್ ಗ್ರಾಮದ ಪ್ರಕೃತಿ ಸ್ವಸಹಾಯ ಸಂಘ, ಮುಂಡ್ಕೂರು ಗ್ರಾಮದ ನವಶಕ್ತಿ ಸ್ವಸಹಾಯ ಸಂಘ, ಹಾಗೂ ಬೆಳ್ಮಣ್ ಗ್ರಾಮದ ವನದುರ್ಗ ಸ್ವಸಹಾಯ ಸಂಘ ಎನ್ನುವ ಈ ಮೂರು ಸಂಘಗಳು ಪ್ರಶಸ್ತಿಗೆ ಪಾತ್ರವಾದವು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೊಸೈಟಿ ಅಧ್ಯಕ್ಷ ರದ ಶ್ರೀ ಕುಶ ಆರ್ ಮೂಲ್ಯ ಇನ್ನಾ ವಹಿಸಿದರು

ವೇದಿಕೆಯಲ್ಲಿ ಸೊಸೈಟಿಯ ಉಪಾಧ್ಯಕರಾದ ಜಗನ್ನಾಥ ಮೂಲ್ಯ , ಶ್ರೀ ವಿ. ಸುನಿಲ್ ಕುಮಾರ್ ಮಾಚಿ ಸಚಿವರು ಮತ್ತು ಶಾಸಕರು ಕಾರ್ಕಳ ವಿಧಾನಸಭ ಕ್ಷೇತ್ರ , ಶ್ರೀ ವಿನಯ್ ಕುಮಾರ್ ಸೊರಕೆ ಮಾಜಿ ಸಚಿವರು ಕರ್ನಾಟಕ ಸರ್ಕಾರ, ಶ್ರೀ ಉದಯ ಶೆಟ್ಟಿ ಮುನಿಯಾಲ್ ಉಪಾಧ್ಯಕ್ಷರು ಜಿಲ್ಲಾ ಗ್ಯಾರಂಟಿ ಸಮಿತಿ , ಶೋಧನ ಕುಮಾರ್ ಶೆಟ್ಟಿ ಕಟ್ಟಡ ಮಾಲಿಕರು (ಸೂರಜ್ ಹಿಲ್ಸ್), ಪ್ರಭಾಕರ್ ಕುಲಾಲ್ ವಲಯ ಅರಣ್ಯಾಧಿಕಾರಿ ಕಾರ್ಕಳ, ಜಯರಾಮ್ ಕುಲಾಲ್ ಅಧ್ಯಕ್ಷರು ಕುಲಾಲ ಸಂಘ ನಾನಿಲ್ತರ್ ಅಧ್ಯಕ್ಷರು, ರಘು ಮೂಲ್ಯ ಅಧ್ಯಕರು ಕುಲಾಲ ಸಂಘ ಮುಂಬೈ ಗಣೇಶ್ ಕುಲಾಲ್ ಬೋಳ ಅಧ್ಯಕ್ಷರು ಕುಲಾಲ ಸಂಘ ಬೋಳ, ವಿಠಲ ಮೂಲ್ಯ ಬೇಲಾಡಿ ಅಧ್ಯಕರು ಕುಲಾಲ ಸಂಘ ಕಾಂತಾವರ, ಮುಂಡ್ಕೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೊರಿಬೆಟ್ಟು ಗುತ್ತು ಸುರೇಂದ್ರ ಶೆಟ್ಟಿ , ಸ್ವಸಹಾಯ ಸಂಘದಒಕ್ಕೂಟ ಅಧ್ಯಕ್ಷೆ ಶ್ರೀಮತಿ ಉಷಾ ಸುರೇಂದ್ರ ಕುಲಾಲ್ ಸಂಘಗಳ ಒಕ್ಕೂಟ, ಶ್ರೀಮತಿ ಪವಿತ್ರ ಗಿರೀಶ್ ಶ್ರೀಮತಿ ಚಂದ್ರಾವತಿ ಇನ್ನಾ

ಕಾರ್ಯಕ್ರಮದ ನಿರೂಪಣೆಯನ್ನು ಸತೀಶ್ ಹೊಸ್ಮಾರ್ ಅವರು ನಿರ್ವಹಿಸಿದ್ದು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬ್ರಿಜೆಶ್ ಕುಲಾಲ್ ಧನ್ಯವಾದ ಸಲ್ಲಿಸಿದರು.

Leave a Reply

Your email address will not be published. Required fields are marked *