×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಪಡುಬಿದ್ರಿ: ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಪಡುಬಿದ್ರಿ ಸಂಸ್ಕಾರಗೊಂಡ ನೂತನ ಧ್ವಜಸ್ತಂಭ ಪ್ರತಿಷ್ಠಾಪನೆ


ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಇಂದು ಶ್ರೀ ಕ್ಷೇತ್ರದ ತಂತ್ರಿಗಳಾದ ಕಂಬಳಕಟ್ಟೆ ಶ್ರೀ ರಾಧಾಕೃಷ್ಣ ಉಪಾಧ್ಯಾಯರ ಧಾರ್ಮಿಕ ಮಾರ್ಗದರ್ಶನದಲ್ಲಿ ನೂತನ ಧ್ವಜಸ್ತಂಭದ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು.

ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯಗಳು ಅತ್ಯಾಕರ್ಷಕವಾಗಿ ಭರದಿಂದ ಸಾಗುತ್ತಿದ್ದು ,ಶಾಸ್ತ್ರೋಕ್ತವಾದ ವಿಧಿ ವಿಧಾನಗಳಿಂದ ಜಲಾಧಿವಾಸ ಹಾಗೂ ತೈಲಾಧಿವಾಸದಿಂದ ಸಂಸ್ಕಾರಗೊಂಡ ನೂತನ ಧ್ವಜಸ್ತಂಭವನ್ನು ಶ್ರೀ ದೇವಳದ ಪೂರ್ವಾಂಗಣದಲ್ಲಿ ಶ್ರೀ ಕ್ಷೇತ್ರದ ತಂತ್ರಿಗಳಾದ ಕಂಬಳಕಟ್ಟೆ ಶ್ರೀ ರಾಧಾಕೃಷ್ಣ ಉಪಾಧ್ಯಾಯರ ಧಾರ್ಮಿಕ ಮಾರ್ಗದರ್ಶನದಲ್ಲಿ ದೇವಳದ ಅರ್ಚಕರಾದ ಪದ್ಮನಾಭ ಭಟ್ ಹೆಜಮಾಡಿ, ವೈ.ಗುರುರಾಜ್ ಭಟ್ ನೇತೃತ್ವದಲ್ಲಿ ಗಣ್ಯಾತಿಗಣ್ಯರು ಹಾಗೂ ಊರ ಭಕ್ತರ ಸಮ್ಮುಖದಲ್ಲಿ ಭಕ್ತಿಪೂರ್ವಕವಾಗಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು.

ಈ ಅಪೂರ್ವ ಪುಣ್ಯಪ್ರದ ಮಹಾನ್ ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ,
ಆನುವಂಶಿಕ ಮೊಕ್ತೇಸರರಾದ ಭವಾನಿಶಂಕರ ಹೆಗ್ಡೆಪೇಟೆಮನೆ, ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾವಡ, ಕಾರ್ಯದರ್ಶಿಗಳಾದ ಶ್ರೀನಾಥ್ ಹೆಗ್ಡೆ, ವೈ. ಸುಕುಮಾರ್ ಪದಾಧಿಕಾರಿಗಳಾದ ನವೀನ್‌ಚಂದ್ರ ಜೆ. ಶೆಟ್ಟಿ ಪ್ರಕಾಶ್ ದೇವಾಡಿಗ, ಸುರೇಶ್ ಶೆಟ್ಟಿ ಗುಂಡ್ಲಾಡಿ, ನವೀನ್ ಎನ್. ಶೆಟ್ಟಿ ಶೀನ ಪೂಜಾರಿ, ಸುರೇಶ್, ಪೇಟೆಮನೆ ಅನಿಲ್ ಹೆಗ್ಡೆ, ವಿಜಯ ಹೆಗ್ಡೆ, ಮುರಳೀನಾಥ ಶೆಟ್ಟಿ,ವೈ ಎನ್ ರಾಮಚಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *